Koppal

ರಾಜ ಕಾಲುವೆ ಒತ್ತುವರಿ ಯಾಗಿದ್ದರೆ ಕ್ರಮ-ಕುಷ್ಟಗಿ ಪುರಸಭೆ ಅಧ್ಯಕ್ಷ ಜಿ.ಕೆ.ಹಿರೇಮಠ ಹೇಳಿಕೆ


ಕುಷ್ಟಗಿ:ಪಟ್ಟಣದ ವಾಡ್೯ ನಂಬರ್-೩ ರಲ್ಲಿ ರಾಜಕಾಲುವೆ ಒತ್ತುವರಿ ಆಗಿದೆ ಎಂದು ಈ ಹಿಂದೆ ಪತ್ರಿಕೆ ಗಳಲ್ಲಿ ಬಂದಿವೆ

ನಾನು ಎರಡು ಮೂರು ತಿಂಗಳ ಹಿಂದೆಯೇ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ರವರ ಜೊತೆ ಮಾತನಾಡಿ ರಾಜ ಕಾಲುವೆಗಾಗಿ ಕಲ್ಯಾಣ ಕರ್ನಾಟಕ ದ ಅನುದಾನದಲ್ಲಿ ಸುಮಾರು42 ಲಕ್ಷ ಹಣವನ್ನು ಮೀಸಲಿಟ್ಟಿದ್ದೇವೆ.

ಈಗಾಗಲೇ ಎಷ್ಟು‌ಒತ್ತುವರಿ ಆಗಿದೆ ಎಂಬುದನ್ನು ಅಲ್ಲಿ ಬರುವ ಸರ್ವೆ ನಂಬರ್ ಗಳ ಪ್ರಕಾರ ಮ್ಯಾಪ್ ತಗೊಂಡು ಅಳತೆ ಮಾಡಿ ಅತಿಕ್ರಮಣ ಮಾಡಿದ ಜಾಗವನ್ನು ತೆರವು ಗೊಳಿಸಿಲಾಗುವುದು.

ಈಗಾಗಲೇ ಕಾಮಗಾರಿ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಗುತ್ತಿಗೆ ದಾರರಿಗೆ ಕಾಮಗಾರಿ ಪ್ರಾರಂಭಿಸಲು ಅನುಮತಿ ಸಿಕ್ಕ ತಕ್ಷಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವದು.

ಅದರ ಜೊತೆಗೆ ಪುರಸಭೆ ವ್ಯಾಪ್ತಿಯಲ್ಲಿ ಕೊಪ್ಪಳ ರಸ್ತೆಯ ಭಾಗದಲ್ಲಿ ಇರುವ ಉದ್ಯಾನವನ ವನ್ನು ಖಾಸಗಿಯವರು ಶೆಡ್ ಹಾಕಿಕೊಂಡಿರುವ ಬಗ್ಗೆ ಮಾಹಿತಿ ಇದೆ. ಅದರ ಬಗ್ಗೆ ಗಮನ ಹರಿಸಲಾಗುವದು,ಜೊತೆಗೆ ಉದ್ಯಾನವನದ ಅಭಿವೃದ್ಧಿ ಒತ್ತು ನೀಡಲಾಗುವದು.

ಈಗಾಗಲೇ ಉದ್ಯಾನವನ ಜಾಗದಲ್ಲಿ ಹಾಕಿರುವ ಶೆಡ್ ನವರು ತೆರವು ಗೊಳಿಸಲು ತಿಳಿಸಿದ್ದೇವೆ.
ಅತಿಕ್ರಮಣ ಮಾಡಿ ಕೊಂಡಿರುವವರಿಗೆ ಇನ್ನೂ ಎರಡು ದಿನಗಳ ಕಾಲ ಸಮಯ ನೀಡಿದ್ದೇವೆ.ಸೋಮವಾರದ ವರೆಗೂ ನೋಡಿ ಅವರು ತೆರವು ಗೊಳಿಸದಿದ್ದರೆ ನಮ್ಮ ಪುರಸಭೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಗಳು ಸ್ಥಳಕ್ಕೆ ಕಳುಹಿಸಿ ತೆರವು ಗೊಳಿಸಲಾಗುವದು ಎಂದು ಕುಷ್ಟಗಿ ಪುರಸಭೆ ಅಧ್ಯಕ್ಷ ರಾದ ಜಿ.ಕೆ.ಹಿರೇಮಠ ತಮ್ಮ ಕಛೇರಿಯಲ್ಲಿ ಹೇಳಿದ್ದಾರೆ.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Leave a Reply