Belagavi

ಬೆಳಗಾವಿಯಲ್ಲಿ 144 ಸೆಕ್ಷನ್ ಜಾರಿ


ಬೆಳಗಾವಿ : ಬೆಂಗಳೂರಿನ ಶಿವಾಜಿ ನಗರದಲ್ಲಿರುವ ಶಿವಾಜಿ ಪುತ್ಥಳಿಗೆ ಕಪ್ಪು ಮಸಿ ಆರೋಪ ಕೇಳಿಬಂದಿತ್ತು. ಈ ಘಟನೆ ಖಂಡಿಸಿ ಹಿಂದೂಪರ ಸಂಘಟನೆಳು ಪ್ರತಿಭಟನೆ ನಡೆಸಿದ್ದು. ಈ ವೇಳೆ ಎಂಇಎಸ್ ಪುಂಡಾಟ ನಡೆಸಿದೆ.

ಮಧ್ಯರಾತ್ರಿ ಅನಿಗೋಳದಲ್ಲಿ ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣನ ಮೂರ್ತಿಯಮೂ ಯಾರೋ ಕಿಡಿಗೆಡಿಗಳು ಭಗ್ನ ಮಾಡಿರುವ ಹಿನ್ನಲೆಯಲ್ಲಿ ಬೆಳಗಾವಿ ನಗರ ಮತ್ತು ತಾಲೂಕಾದ್ಯಂತ ಯಾವುದೇ ರೀತಿಯ ಗಲಭೆ, ಅಹಿತಕರ ಘಟನೆ ನಡೆಯದಂತೆ ಬೆಳಗಾವಿ ಪೊಲೀಸ್ ಕಮಿಷನರೇಟ್ ಪ್ರದೇಶಕ್ಕೆ (ಬೆಳಗಾವಿ ತಾಲೂಕು) ಸೆಕ್ಷನ್ 144 ಅಡಿPಅ ಅಡಿಯಲ್ಲಿ ಇಂದು ಬೆಳಗ್ಗೆ 8 ಗಂಟೆಯಿಂದ ಭಾನುವಾರ ಬೆಳಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಎಂದು ಬೆಳಗಾವಿ ಪೋಲೀಸ್ ಕಮೀಷನರ್ ತ್ಯಾಗರಾಜನ ಹಾಗೂ ಡಿಸಿಪಿ ವಿಕ್ರಂ ಆಮಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply