Belagavi

ಸಹೋದರಿಯ ದಾರಿಯಲ್ಲಿಯೇ ಮುಂದೆ ಹೋಗಿ ಚನ್ನರಾಜ ಹಟ್ಟಿಹೊಳಿಗೆ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಕಿವಿ ಮಾತು


ಬೆಳಗಾವಿ: ಸಹೋದರಿಯ ದಾರಿಯಲ್ಲಿಯೇ ಮುಂದೆ ಹೋಗಿ ಚನ್ನರಾಜ ಹಟ್ಟಿಹೊಳಿಗೆ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಕಿವಿ ಮಾತು ಹೇಳಿದರು.
ನೂತನ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ ಅವರು, ಸಹೋದರಿ, ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಶಾಸಕಿ ಲಕ್ಷಿö್ಮÃ ಹೆಬ್ಬಾಳ್ಕರ್ ಅವರೊಂದಿಗೆ ಶನಿವಾರ ನಗರದ ಲಕ್ಷಿö್ಮÃ ಟೆಕಡಿಯಲ್ಲಿರುವ ಹುಕ್ಕೇರಿ ಹಿರೇಮಠದ ಶಾಖೆಗೆ ಭೇಟಿ ನೀಡಿ ಶ್ರೀಗಳಿಂದ ಆಶೀರ್ವಾದ ಪಡೆದು ಗುರುಗೌರವವನ್ನು ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಶಾಸಕಿ ಲಕ್ಷಿö್ಮÃ ಹೆಬ್ಬಾಳ್ಕರ್ ಹೋರಾಟಗಾರ್ತಿ ನಿರಂತರವಾಗಿ ಸಮಾಜಮುಖಿ ಕೆಲಸ ಮಾಡುತ್ತ ಜನಸೇವೆ ಮಾಡುತ್ತಿದ್ದಾರೆ. ಇವರ ಪರಿಶ್ರಮದ ಫಲ ಇಂದು ವಿಧಾನಪರಿಷತ್ ಸದಸ್ಯರಾಗಿ ಚನ್ನರಾಜ ಹಟ್ಟಿಹೊಳಿ ಆಯ್ಕೆಯಾಗಿದ್ದಾರೆ. ಇವರ ದಾರಿಯಲ್ಲಿಯೇ ಮುಂದೆ ಹೋಗಿ ನೊಂದ ಜನರಿಗೆ ಕಣ್ಣೀರು ವರೆಸುವ ಅಪರೂಪದ ನಾಯಕರಾಗಿ ಎಂದು ಹಾರೈಸಿದರು.
ಶಾಸಕಿ ಲಕ್ಷಿö್ಮÃ ಹೆಬ್ಬಾಳ್ಕರ್ ಮಾತನಾಡಿ, ಹುಕ್ಕೇರಿ ಗುರುಗಳನ್ನು ನಾವು ತಂದೆ ಸ್ವರೂಪದಲ್ಲಿ ಕಾಣುತ್ತಿದ್ದೇವೆ. ಇವತ್ತು ಕೂಡ ಅವರಿಗೆ ತಂದೆಯ ಸ್ಥಾನದಲ್ಲಿ ನೋಡುತ್ತೇವೆ. ಅವರು ತಂದೆಯ ರೂಪದಲ್ಲಿ ನಿಂತುಕೊAಡು ಆಶೀರ್ವಾದ ಮಾಡುತ್ತ ಬಂದಿದ್ದಾರೆ. ಅವರ ಆಶೀರ್ವಾದದ ಪ್ರಕಾರ ನಡೆದುಕೊಳ್ಳುತ್ತೇವೆ ಎಂದರು.
ನೂತನ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಜನರು ನಿರೀಕ್ಷೆಯಿಟ್ಟ ಪ್ರಕಾರ ನಾನು ನಮ್ಮ ಜಿಲ್ಲೆಯಲ್ಲಿ ಕೆಲಸ ಮಾಡುತ್ತೇನೆ. ಇಡೀ ಜಿಲ್ಲೆಯ ಜನರು ನನಗೆ ಆಶೀರ್ವಾದಿಸಿದ್ದಾರೆ. ಅವರ ಆಸೆಗಳನ್ನು ಈಡೇರಿಸುತ್ತೇವೆ ಎಂದು ಶ್ರೀಗಳಿಗೆ ತಿಳಿಸಿದರು.
ಕಾಂಗ್ರೆಸ್ ಮುಖಂಡ ಆನಂದ ಗಡ್ಡದೇವರಮಠ, ವೀರುಪಾಕ್ಷಯ್ಯ ನೀರಲಗಿಮಠ, ಯುವರಾಜ ಕದಂ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


Leave a Reply