Belagavi

ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ


ಬೆಳಗಾವಿ – ಬೆಳಗಾವಿ ಗ್ರಾಮೀಣ ಸಂತಿಬಸ್ತವಾಡ ಗ್ರಾಮದಿಂದ ತೀರ್ಥಕುಂಡೆ ಗ್ರಾಮದ ವರಗಿನ ರಸ್ತೆಯ ಕಾಮಗಾರಿಗಳಿಗೆ ವಿಧಾನ ಪರಿಷತ್ ನೂತನ ಸದಸ್ಯ ಚನ್ನರಾಜ ಹಟ್ಟಿಹೊಳಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸೇರಿ ಭೂಮಿ ಪೂಜೆಯನ್ನು ನೆರವೇರಿಸಿದರು.

ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ ವಿಶೇಷ ಪ್ರಯತ್ನದಿಂದಾಗಿ ಎಸ್ಸಿ, ಎಸ್ಟಿ ಅನುದಾನದಲ್ಲಿ ಒಂದು ಕೋಟಿ ರೂ, ಮಂಜೂರಾಗಿದೆ. ನಿಗದಿತ ಸಮಯದಲ್ಲಿ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡುವಂತೆ ಚನ್ನರಾಜ ಹಟ್ಟಿಹೊಳಿ ಗುತ್ತಿಗೆದಾರರಿಗೆ ಸೂಚಿಸಿದರು. ಗ್ರಾಮಸ್ಥರೂ ಕಾಮಗಾರಿಯ ಮೇಲೆ ನಿಗಾ ಇಡಬೇಕು. ಅಭಿವೃದ್ಧಿ ವಿಷಯದಲ್ಲಿ ಕ್ಷೇತ್ರದ ಜನರು ಉತ್ತಮ ರೀತಿಯಲ್ಲಿ ಸಹಕಾರ ನೀಡುತ್ತಿದ್ದು, ಇದೇ ರೀತಿಯ ಸಹಕಾರ, ಮಾರ್ಗದರ್ಶನವನ್ನು ಮುಂದಿನ ದಿನಗಳಲ್ಲಿ ಸಹ ಮುಂದುವರಿಸಬೇಕು. ನಾವು ನಿಮ್ಮ ಮನೆಯ ಸದಸ್ಯರಾಗಿ ನಿಮ್ಮ ಕಷ್ಟ, ಸುಖಗಳಲ್ಲಿ ಭಾಗಿಯಾಗುತ್ತೇವೆ ಎಂದು ಅವರು ಜನರಿಗೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಆಯಾ ಗ್ರಾಮಗಳ ಹಿರಿಯರು, ವಿಠ್ಠಲ ಅಂಕಲಗಿ, ಮಹಾದೇವಿ ಬಾಲನಾಯ್ಕ, ಬಸು ಬೀರಮಟ್ಟಿ, ದ್ಯಾಮಣ್ಣ ನಾಯಕ್, ಆಶ್ಪಕ್ ತಹಶಿಲ್ದಾರ, ರಾಮಲಿಂಗ ಅಂಕಲಗಿ, ರೇಣುಕಾ ಖಾನಾಪೂರ, ಸಕ್ಕುಬಾಯಿ, ರಾಮಲಿಂಗ ಮೊರೆ, ಗೀತಾ ಜಾಂಬೋಟಿ, ಲಕ್ಷ್ಮಣ ಬನ್ನೂರ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.


Leave a Reply