Koppal

ಸರಕಾರಿ ಪ್ರೌಢಶಾಲೆ ಚಳಗೇರಾ ದಲ್ಲಿ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ


ಕುಷ್ಟಗಿ:ಚಳಗೇರಿ ಸರ್ಕಾರಿ ಪ್ರೌಢಶಾಲೆ ಚಳಗೇರಾ ದಲ್ಲಿ ಓದುತ್ತಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸರಕಾರಿ ಆರೋಗ್ಯ ಕೇಂದ್ರ ಚಳಗೇರ ಇವರಿಂದ ಉಚಿತ ಕನ್ನಡ ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ರಾಯಪ್ಪ ಹೂಗಾರ್ ವಿತರಿಸಿ ಚಾಲನೆ ನೀಡಿ ಮಾತನಾಡಿದರು ಮುಖ್ಯ ಅತಿಥಿಗಳಾಗಿ ಪಿಎಚ್ ಸಿ ಚಳಗೇರಾ ದ ನೇತ್ರಾಧಿಕಾರಿಗಳಾದ ಎನ್ ಅಬೂಬ್ಕರ್ ಆಗಮಿಸಿದ್ದರು ಅವರು ಮಾತನಾಡಿ ಕಣ್ಣಿನ ರಕ್ಷಣೆ ಕುರಿತು ಮಕ್ಕಳಿಗೆ ತಿಳಿಸಿ” ನೇತ್ರದಾನ ಮಹಾದಾನ” ಹುಡುಗರು ದೃಷ್ಟಿ ನ್ಯೂನತೆ ಹೊಂದಿರುವ ಮಕ್ಕಳು ತಮ್ಮ ಕಣ್ಣಿನ ಬಗ್ಗೆ ವಿಶೇಷ ಕಾಳಜಿ ವಹಿಸಲು ತಿಳಿಸಿದರು.

ಈ ಸಂದರ್ಭದಲ್ಲಿ ಶಿಕ್ಷಕರಾದ ಅರವಿಂದ್ ಕುಮಾರ್ ದೇಸಾಯಿ ಶಾಕಿರ್ ಬಾಬಾ ಶರಣಪ್ಪ ಪರಸಾಪುರ ಸಿದ್ದನಗೌಡ ಪೊಲೀಸ್ ಪಾಟೀಲ್ ಎಚ್ಡಿ ನದಾಫ್ ವೀರೇಶ್ ಹಾದಿಮನಿ ಲಾಲ್ ಮಹಮ್ಮದ್ ಅತ್ತಾರ್ ಮಂಜುಳಾ ಗುರುವಿನ್ ಇತರರು ಇದ್ದರು
ಪ್ರೌಢಶಾಲೆಯ 8 9 ಮತ್ತು 10ನೇ ತರಗತಿಯ ದೃಷ್ಟಿ ನ್ಯೂನತೆ ಹೊಂದಿದ ಎಲ್ಲಾ ಮಕ್ಕಳಿಗೂ ಕನ್ನಡಕ ವಿತರಿಸಲಾಯಿತು.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Leave a Reply