Koppal

ಕ್ರೈಸ್ತ ದ ಕಿಂಗ್ ಶಾಲೆ ಹತ್ತಿರ ಇರುವ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕರಾದ ಅಮರೇಗೌಡ ಪಾಟೀಲ್ ಬಯ್ಯಾಪುರ ಚಾಲನೆ


ಕುಷ್ಟಗಿ ಪಟ್ಟಣದ 7ನೇ ವಾರ್ಡ್ ನ ಕ್ರೈಸ್ತ ದ ಕಿಂಗ್ ಶಾಲೆ ಹತ್ತಿರ ಇರುವ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕರಾದ ಅಮರೇಗೌಡ ಪಾಟೀಲ್ ಬಯ್ಯಾಪುರ ಅವರು ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಕೆ.ಕೆ.ಆರ್.ಡಿ.ಬಿ ಯೋಜನೆಯಲ್ಲಿ ರೂ 30 ಲಕ್ಷ ಅನುದಾನದಲ್ಲಿ ಈ ಕಾಮಗಾರಿ ಕೈಗೆತ್ತಿಕೊಂಡಿದ್ದು ಕಾಮಗಾರಿಯನ್ನು ಗುಣಮಟ್ಟದಿಂದ ಮಾಡಬೇಕೆಂದು ಗುತ್ತಿಗೆದಾರರಿಗೆ ಇದೆ ಸಂದರ್ಭದಲ್ಲಿ ತಿಳಿಸಿದರು. ಕುಷ್ಟಗಿ ಪಟ್ಟಣ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದ್ದು ಪಟ್ಟಣದ ಅಭಿವೃದ್ದಿ ಮಾಡಲು ಹಣದ ಕೊರತೆ ಎದುರಾಗುತ್ತಿದ್ದು , ಕನಿಷ್ಠ ವರ್ಷಕ್ಕೆ 10 ಕೋಟಿ ರೂ ಖರ್ಚು ಮಾಡಿದಾಗ ಮಾತ್ರ ಪಟ್ಟಣ ಅಭಿವೃದ್ಧಿ ಮಾಡಲು ಸಾಧ್ಯ , ಈ ವಿಚಾರದಲ್ಲಿ ಈಗಾಗಲೇ ಕಲ್ಯಾಣ ಕರ್ನಾಟಕ ಭಾಗದ ಶಾಸಕರೆಲ್ಲಾ ಸೇರಿಕೊಂಡು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಸ್ಥಗಿತಗೊಂಡಿರುವ ನಗರೋತ್ಥಾನ ಯೋಜನೆಯನ್ನು ಮುಂದುವರಿಸಬೇಕೆಂದು ಕೇಳಿಕೊಂಡಿದ್ದು, ಅದಕ್ಕೆ ಅವರು ಸಾಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ಇದೆ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರಾದ ಗಂಗಾಧರ್ ಹಿರೇಮಠ್, ಪುರಸಭೆ ಸದಸ್ಯರಾದ ರಾಮಣ್ಣ ಬಿನ್ನಾಳ, ಕಾಂಗ್ರೆಸ್ ಮುಖಂಡರುಗಳಾದ ಶೌಕತ್ ಕಾಯಿಗಡ್ಡಿ , ಯಮನೂರ ಸಂಗಟಿ ,ಉಸ್ಮಾನ್ ಯಲಬುರ್ಗಿ , ಮಂಜುನಾಥ್ ಕಟ್ಟಿಮನಿ, ಗುತ್ತಿಗೆದಾರರಾದ ಪ್ರಭು ಪಾಟೀಲ್, ರಾಜು ವಾಲಿಕಾರ್, ಲೋಕೋಪಯೋಗಿ ಇಲಾಖೆಯ ಎ. ಇ. ಇ. ಪ್ರಭು ಹುನುಗುಂದ, ಅಭಿಯಂತರರಾದ ಧರಣೆOದ್ರ ,ಸೇರಿದಂತೆ ಇತರರು ಉಪಸ್ಥಿತರಿದ್ದರು.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ.


Leave a Reply