Belagavi

ಪಿ.ಪಿ.ಪಿ ಮಾದರಿಯಲ್ಲಿ ವಧಾಗಾರ: ಸಚಿವ ಪ್ರಭು ಚವ್ಹಾಣ್


ಬೆಳಗಾವಿ ಸುವರ್ಣಸೌಧ )ಡಿ.೨೦; ರಾಜ್ಯದಲ್ಲಿ ಪಿ.ಪಿ.ಪಿ ಮಾದರಿಯಲ್ಲಿ ವಧಾಗಾರಗಳನ್ನು ನಿರ್ಮಿಸಲು ಮೂಲಭೂತ ಸೌಕರ್ಯಗಳ ಇಲಾಖೆಯಿಂದ ಪ್ರಸ್ತಾವನೆ ಸಿದ್ಧವಾಗಿದೆ. ಕೆ.ಎಸ್.ಐ.ಐ.ಡಿ.ಸಿ. ಮೂಲಕ ಅರ್ಹ ಸಂಸ್ಥೆ ಮತ್ತು ವ್ಯಕ್ತಿಗಳಿಂದ ಎಕ್ಸ್ಪ್ರೆಷನ್ ಆಫ್ ಇಂಟರೆಸ್ಟ್ ಆಹ್ವಾನಿಸಲಾಗಿದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ ಹೇಳಿದರು.
ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಶಿರಾ ಕ್ಷೇತ್ರದ ಶಾಸಕ ಡಾ. ರಾಜೇಶಗೌಡ ಅವರ ಪ್ರಶ್ನೆಗೆ ಉತ್ತರಿಸಿ ಅವರು ಮಾತನಾಡಿದರು.
ಕಳೆದ ಅಕ್ಟೋಬರ ೧೨ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ೨೧ನೇ ರಾಜ್ಯ ಮಟ್ಟದ ಪಿ.ಪಿ.ಪಿ. ಯೋಜನೆಗಳ ಏಕ ಗವಾಕ್ಷಿ ಮಂಜೂರಾತಿ ಸಮಿತಿ ಸಭೆಯಲ್ಲಿ ವಧಾಗಾರಗಳನ್ನು ಪಿ.ಪಿ.ಪಿ. ಮಾದರಿಯಲ್ಲಿ ಅನುಷ್ಠಾನಗೊಳಿಸಲು ಅನುಮೋದಿಸಲಾಗಿದೆ. ಈಗಾಗಲೇ ಮೂಲಭೂತ ಸೌಕರ್ಯಗಳ ಇಲಾಖೆಯ ಮೂಲಕ ಆರ್.ಎಫ್.ಪಿ ತಯಾರಾಗಿದೆ. ವ್ಯವಹಾರ ಸಲಹಾ ಸೇವೆಗಳನ್ನು ನೇಮಕ ಮಾಡಿಕೊಳ್ಳಲು ಕೆ.ಎಸ್.ಐ.ಐ.ಡಿ.ಸಿ ತುಮಕೂರು ಜಿಲ್ಲೆ ಶಿರಾ ತಾಲೂಕು ಚೀಲನಹಳ್ಳಿಯಲ್ಲಿ ಆಧುನಿಕ ವಧಾಗಾರದ ಸಿವಿಲ್ ಕಾಮಗಾರಿ ಪೂರ್ಣಗೊಂಡಿದೆ ಎಂದರು.


Leave a Reply