Belagavi

‘ಮೊಬೈಲ್ ದುಷ್ಪರಿಣಾಮ’ ಮಕ್ಕಳಿಗೆ ಶಿಕ್ಷಕರಿಂದ ತಿಳಿವಳಿಕೆ: ಶಿಕ್ಷಣ ಸಚಿವ ನಾಗೇಶ


ಬೆಳಗಾವಿ ಸುವರ್ಣಸೌಧ ೨೦: ಕೋವಿಡ್‌ನಿಂದಾಗಿ ಆನ್‌ಲೈನ್ ಕಲಿಕೆಗೆ ಒತ್ತು ನೀಡಿದ ಪರಿಣಾಮ ಮಕ್ಕಳು ಮೊಬೈಲ್ ದಾಸರಾಗಿರುವುದನ್ನು ಸದನಲ್ಲಿ ಒಪ್ಪಿಕೊಂಡ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ ಅವರು ಈಗಾಗಲೇ ಭೌತಿಕ ತರಗತಿಗಳು ಪ್ರಾರಂಭವಾಗಿದ್ದು, ಈ ಸಂದರ್ಭದಲ್ಲಿ ಮಕ್ಕಳಿಗೆ ಮೊಬೈಲ್ ದುಷ್ಪರಿಣಾಮಗಳ ಕುರಿತು ಶಿಕ್ಷಕರ ಮೂಲಕ ತಿಳಿಹೇಳಲಾಗುವುದು ಎಂದರು.
ವಿಧಾನಪರಿಷತ್‌ನಲ್ಲಿ ಸದಸ್ಯೆ ಡಾ.ತೇಜಸ್ವಿನಿಗೌಡ ಅವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಮಕ್ಕಳ ಮಾನಸಿಕ ಸಮತೋಲನ ಕುರಿತು ಅಧ್ಯಯನ ನಡೆಸಿರುವುದಿಲ್ಲ. ಮಕ್ಕಳು ಕೋವಿಡ್ ಹಿನ್ನೆಲೆಯಲ್ಲಿ ಮಾನಸಿಕ ಕ್ಷೆÆÃಬೆಗೆ ಒಳಗಾಗದಂತೆ ಸೂಕ್ತ ಸಲಹೆ,ಆಪ್ತ ಸಮಾಲೋಚನೆ ನೀಡಲಾಗಿದೆ. ಕೋವಿಡ್ ಸಾಂಕ್ರಾಮಿಕ ಎದುರಿಸುವ ಬಗ್ಗೆಯೂ ಸೂಕ್ತ ಸಲಹೆ,ಮಾರ್ಗದರ್ಶನ ನಿಡಲಾಗಿದೆ ಎಂದರು.
ಶಾಲಾ-ಕಾಲೇಜುಗಳು ಸ್ಥಗಿತವಾಗಿದ್ದರಿಂದ ಮಕ್ಕಳು ಖಿನ್ನತೆಗೊಳಗಾಗಿದ್ದಾರೆ.ಮಕ್ಕಳ ಮಾನಸಿಕ ಸಮತೋಲನ ಕುರಿತು ಹಾಗೂ ಮೊಬೈಲ್ ಗೀಳರಾಗಿರುವುದನ್ನು ತಪ್ಪಿಸುವುದರ ಕುರಿತು ಶಿಕ್ಷಣ ಮತ್ತು ಆರೋಗ್ಯ ಇಲಾಖೆ ಜಂಟಿಯಾಗಿ ಅಧ್ಯಯನ ನಡೆಸಿ ಕ್ರಮಕೈಗೊಳ್ಳಬೇಕು ಎಂದು ಸದಸ್ಯೇ ತೇಜಸ್ವಿನಿಗೌಡ ಅವರು ಮನವಿ ಮಾಡಿದರು. ಸಚಿವರು ತಜ್ಞರಿಂದ ಅಧ್ಯಯನ ನಡೆಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.


Leave a Reply