Belagavi

ಸದಸ್ಯರ ಕೋರಿಕೆಗೆ ಸಮಯ ನಿಗದಿಪಡಿಸಿದ ಸಭಾಪತಿ ಹೊರಟ್ಟಿ ಪರಿಷತ್‌ನಲ್ಲಿ ಸಂಪೂರ್ಣ ಉ.ಕ ಗಂಭೀರ ಸಮಸ್ಯೆಗಳ ಚರ್ಚೆ


ಬೆಳಗಾವಿ ಸುವರ್ಣಸೌಧ ಡಿ.೨೦; ಬೆಳಗಾವಿಯ ಸುವರ್ಣಸೌಧದಲ್ಲಿ ಕಳೆದೊಂದು ವಾರದಿಂದ ಅಧಿವೇಶನ ಆರಂಭವಾಗಿದ್ದರೂ ಉತ್ತರ ಕರ್ನಾಟಕದ ಗಂಭೀರ ಸಮಸ್ಯೆಗಳಾಗದಿರುವುದಕ್ಕೆ ಮಾಧ್ಯಮಗಳು ಮತ್ತು ಜನರಿಂದ ಆಕ್ಷೇಪ ವ್ಯಕ್ತವಾದÀ ನಂತರ ಎಚ್ಚೆತ್ತ ಸದನದ ಸದಸ್ಯರು ಪಕ್ಷಬೇಧ ಮರೆತು ಉತ್ತರ ಕರ್ನಾಟಕದ ಗಂಭೀರ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳುವAತೆ ಒತ್ತಾಯಿಸಿದ ಪ್ರಸಂಗ ವಿಧಾನಪರಿಷತ್‌ನಲ್ಲಿ ಸೋಮವಾರ ನಡೆಯಿತು.
ಆರಂಭದಲ್ಲಿಯೇ ಪರಿಷತ್ ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್ ಅವರು ಮಹದಾಯಿ ಯೋಜನೆ ಅಧಿಸೂಚನೆ ಆಗಿದೆ;ಆದ್ರೂ ಇನ್ನೂ ಕೆಲಸ ಆರಂಭವಾಗಿಲ್ಲ. ತುಂಗಾಭದ್ರಾ ಜಲಾಶಯದಲ್ಲಿ ಹೂಳು ತುಂಬಿದ್ದು,ನವಲಿ ಬಳಿ ಸಮಾನಂತರ ಜಲಾಶಯ ನಿರ್ಮಾಣ ಮಾಡುವುದಕ್ಕೆ ಡಿಪಿಎಆರ್ ಸಿದ್ದಪಡಿಸಿದರೂ ನಂತರ ಪ್ರಗತಿ ಶೂನ್ಯವಾಗಿದೆ. ೩೭೧ಜೆ ಪರಿಣಾಮಕಾರಿ ಅನುಷ್ಠಾನವಾಗುತ್ತಿಲ್ಲ; ಈ ಭಾಗದ ಬಹುತೇಕ ಯೋಜನೆಗಳು ನನೆಗುದಿಗೆ ಬಿದ್ದಿವೆ. ಜನರು ಈ ಭಾಗದ ಸಮಸ್ಯೆಗಳು ಚರ್ಚೆಯಾಗ್ಬೇಕು ಮತ್ತು ಅವುಗಳಿಗೆ ಪರಿಹಾರ ಸಿಗುವುದಕ್ಕೆ ಚಾತಕ ಪಕ್ಷಿಯಂತೆ ಕಾಯ್ತಿದ್ದಾರೆ ಎಂದು ತಿಳಿಸಿದರು.
ಈಗಲಾದ್ರೂ ಉತ್ತರ ಕರ್ನಾಟಕಕ್ಕೆ ಸಂಬAಧಿಸಿದ ಮಹತ್ವದ ವಿಷಯಗಳ ಕುರಿತು ಚರ್ಚಿಸಬೇಕು ಎಂದು ಅವರು ಮನವಿ ಮಾಡಿದರು.
ಸಂಗೊಳ್ಳಿ ರಾಯಣ್ಣರ ಪ್ರತಿಮೆ ಭಗ್ನವಾಗಿದೆ ಮತ್ತು ಶಿವಾಜಿ ಮಹಾರಾಜರ ಪ್ರತಿಮೆ ಮಸಿ ಬಳಿಯಲಾಗಿದೆ; ಈ ರೀತಿಯ ಘಟನೆಗಳು ನಡೆಯದಂತೆ ಸರಕಾರ ಮುಂಜಾಗ್ರತೆ ವಹಿಸಬೇಕು ಮತ್ತು ಎಂಇಎಸ್ ಪುಂಡರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಹಿರಿಯ ಸದಸ್ಯ ಲಕ್ಷö್ಮಣ ಸವದಿ ಅವರು ೩ ವರ್ಷಗಳ ನಂತರ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದ್ದು, ಅಧಿವೇಶನ ಆರಂಭವಾಗಿ ಒಂದು ವಾರವಾದ್ರೂ ಈ ಭಾಗದ ಒಂದೇ ಒಂದು ಸಮಸ್ಯೆ ಚರ್ಚೆಯಾಗ್ತಿಲ್ಲ ಎಂದರು.
“ಶಾಸಕರು ಮತ್ತು ಅಧಿಕಾರಿಗಳು ಬೆಳಗಾವಿಗೆ ಪಿಕ್‌ನಿಕ್ ಮಾಡಲು ಮತ್ತು ಗೋವಾ ಟೂರ್ ಮಾಡಲು ಬಂದಿದ್ದಾರೆ”ಎAದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಭಾಗ ಪ್ರತಿನಿಧಿಸುತ್ತಿರುವ ನಾವು ಹೊರಗಡೆ ತಲೆತಗ್ಗಿಸುವಂತಾಗಿದೆ ಎಂದು ತಿಳಿಸಿದ ಲಕ್ಷö್ಮಣ ಸವದಿ ಅವರು ಇನ್ನುಳಿದ ದಿನಗಳಲ್ಲಾದ್ರೂ ಉ-ಕ ಗಂಭೀರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕು ಎಂದರು.
ಇತ್ತೀಚೆಗೆ ಸುರಿದ ಮಳೆಯಿಂದ ಲಕ್ಷಾಂತರ ಹೆಕ್ಟೇರ್ ದ್ರಾಕ್ಷಿ ಬೆಳೆ ಹಾನಿಯಾಗಿದೆ.ಸಾವಿರಾರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಿದ ಸದಸ್ಯ ಸವದಿ ಅವರು ಸಚಿವರ ಭೂಕಬಳಿಕೆ ವಿಷಯದಲ್ಲಿ ಬೆಂಗಳೂರಿನಲ್ಲಿ ವಿಶೇಷ ಅಧಿವೇಶನ ನಡೆಸಿ ನಮಗೆ ಅಭ್ಯಂತರವಿಲ್ಲ;ಆದ್ರೇ ಸುವರ್ಣಸೌಧದಲ್ಲಿ ಉ-ಕ ಮಹತ್ವದ ವಿಷಯಗಳ ಚರ್ಚೆಯಾಗಲಿ ಎಂದು ಕೋರಿಕೊಂಡರು.
ಸದಸ್ಯ ಶ್ರೀಕಂಠೇಗೌಡ ಅವರು ಕೂಡ ಇದೇ ರೀತಿ ಮಾತುಗಳನ್ನಾಡಿದರು.
ಸಭಾನಾಯಕರು ಆಗಿರುವ ಸಮಾಜಕಲ್ಯಾಣ ಸಚಿವ ಕೋಟಶ್ರೀನಿವಾಸ ಪೂಜಾರಿ ಹಾಗೂ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಉತ್ತರ ಕರ್ನಾಟಕದ ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಲು ಸರಕಾರ ಸಿದ್ಧವಿದೆ ಎಂದರು.
ಸಭಾಪತಿ ಬಸವರಾಜ ಹೊರಟ್ಟಿ ಅವರು ನಾಳೆ(ಡಿ.೨೧) ಬೆಳಗ್ಗೆ ೧೧ರ ಬದಲಿಗೆ ೧೦.೩೦ಕ್ಕೆ ಪರಿಷತ್ ಶುರುವಾಗಲಿದ್ದು,ಪ್ರಶ್ನೋತ್ತರ ಮುಗಿದ ನಂತರ ಸಂಪೂರ್ಣ ಉತ್ತರ ಕರ್ನಾಟಕದ ಗಂಭೀರ ಸಮಸ್ಯೆಗಳಿಗೆ ಸಮಯ ಮೀಸಲಿಡಲಾಗುವುದು ಎಂದರು.


Leave a Reply