Belagavi

ಕಾಡ್ಗಿಚ್ಚು ನಂದಿಸುವಿಕೆಗೆ ಹೆಲಿಕಾಪ್ಟರ್ ಖರೀದಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ: ಸಚಿವ ಕತ್ತಿ


ಬೆಳಗಾವಿ ಸುವರ್ಣಸೌಧ ಡಿ. ೨೦: ಅರಣ್ಯ ದುರ್ಗಮ ಬೆಟ್ಟ ಪ್ರದೇಶದಲ್ಲಿ ಕಾಡ್ಗಿಚ್ಚು ಹೊತ್ತಿಕೊಂಡಾಗ ಶೀಘ್ರವಾಗಿ ನಂದಿಸಲು ಹೆಲಿಕಾಪ್ಟರ್‌ಗಳು ಸದ್ಯ ನಮ್ಮಲ್ಲಿಲ್ಲ;ಅವುಗಳನ್ನು ಇಲಾಖೆ ವತಿಯಿಂದ ಖರೀದಿ ಮಾಡುವುದಕ್ಕೆ ಸಂಬAಧಿಸಿದAತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಅರಣ್ಯ ಖಾತೆ ಸಚಿವ ಉಮೇಶ ಕತ್ತಿ ಅವರು ವಿಧಾನಪರಿಷತ್‌ನಲ್ಲಿ ತಿಳಿಸಿದರು.
ಸದಸ್ಯ ಡಾ.ತೇಜಸ್ವಿನಿಗೌಡ ಅವರ ಚುಕ್ಕೆಗುರುತಿನ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಅರಣ್ಯ ಇಲಾಖೆಯು ಬೆಂಕಿಯ ಸಂದರ್ಭದಲ್ಲಿ ಬೆಂಕಿಯ ಮುಂಗಡ ಮೇಲ್ವಿಚಾರಣೆಗಾಗಿ ಭಾರತೀಯ ಅರಣ್ಯ ಸಮೀಕ್ಷೆ ಮತ್ತು ರಾಷ್ಟಿçÃಯ ದೂರ ಸಂವೇದಿ ಏಜೆನ್ಸಿ ಸಹಯೋಗದೊಂದಿಗೆ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ ಸಹಯೋಗದಲ್ಲಿ ಅರಣ್ಯ ಬೆಂಕಿ,ಉಸ್ತುವಾರಿ ಮತ್ತು ವಿಶ್ಲೇಷಣಾ ಕೋಶ ಸ್ಥಾಪಿಸಲಾಗಿದೆ. ಈ ಕೋಶದ ವತಿಯಿಂದ ಕಾಡ್ಗಿಚ್ಚನ್ನು ಪತ್ತೆಹಚ್ಚಲು ಉಪಗ್ರಹ ಚಿತ್ರಗಳು ಮತ್ತು ಮಾಹಿತಿ ತಂತ್ರಜ್ಞಾನ ಬಳಸಲಾಗುತ್ತಿದೆ. ಈ ತಂತ್ರಜ್ಞಾನವು ಕಾಡಿನ ಬೆಂಕಿಯನ್ನು ಪರಿಣಾಮಕಾರಿಯಾಗಿ ಮತ್ತು ಸಮಯೋಚಿತವಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಅವರು ತಿಳಿಸಿದರು.
ತುರ್ತು ಪರಿಸ್ಥಿತಿಗೆ ಹಾಜರಾಗಲು ಆಯಕಟ್ಟಿನ ಸ್ಥಳಗಳಲ್ಲಿ ತಾತ್ಕಾಲಿಕ ಅಗ್ನಿಶಾಮಕ ಕೇಂದ್ರಗಳನ್ನು ಸ್ಥಾಪಿಸುವಲ್ಲಿ ಅರಣ್ಯ ಇಲಾಖೆಯು ಅಗ್ನಿಶಾಮಕ ಮತ್ಯು ತುರ್ತುಸೇವೆಗಳ ಇಲಾಖೆಯೊಂದಿಗೆ ಸಹಕರಿಸುತ್ತಿದೆ ಮತ್ತು ಇದಕ್ಕಾಗಿ ೫೦ಲಕ್ಷ ರೂ.ಗಳನ್ನು ಮೀಸಲಿಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಬೆಂಕಿ ಅವಘಡಗಳು ಸಂಭವಿಸಿದ ಸ್ಥಳಗಳನ್ನು ಪತ್ತೆಹಚ್ಚಲು ಸೂಕ್ಷö್ಮಪ್ರದೇಶಗಳನ್ನು ವಾಚ್ ಟಾವರ್‌ಗಳನ್ನು ನಿರ್ಮಿಸಲಾಗಿದೆ. ವೈರ್‌ಲೆಸ್ ಸೆಂಟರ್‌ಗಳAತ ಪರಿಣಾಮಕಾರಿ ಸಂವಹ ಸಾಧನಗಳ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ವಿವರಿಸಿದ ಅವರು ದೊಡ್ಡಬೆಂಕಿಯ ಸಂದರ್ಭದಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಗಳ ಸೇವೆಯನ್ನು ಪಡೆದು ಬೆಂಕಿ ನಂದಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ವಿವರಿಸಿದರು.
*ಮಾನವ-ಆನೆ ಸಂಘರ್ಷ ನಿಯಂತ್ರಣಕ್ಕೆ ೬೨೪ ಕಿ.ಮೀ ರೈಲ್ವೆ ಬ್ಯಾರಿಕೇಡ್ ನಿರ್ಮಾಣದ ಅವಶ್ಯಕತೆ: ರಾಜ್ಯದಲ್ಲಿ ಮಾನವ-ಆನೆ ಸಂಘರ್ಷ ನಿಯಂತ್ರಣಕ್ಕಾಗಿ ಉಪಯೋಗಿತ ರೈಲ್ವೆ ಹಳಿಗಳನ್ನು ಉಪಯೋಗಿಸಿ ೬೨೪ ಕಿ.ಮೀ ಉದ್ದದ ರೈಲ್ವೆ ಬ್ಯಾರಿಕೇಡ್ ನಿರ್ಮಾಣದ ಅವಶ್ಯಕತೆ ಇದ್ದು, ೧೬೫.೩೮ಕಿ.ಮೀ ರೈಲ್ವೆ ಬ್ಯಾರಿಕೇಡ್ ನಿರ್ಮಿಸಲಾಗಿದೆ. ೪೫೮.೬೨ ಕಿ.ಮೀ ಬ್ಯಾರಿಕೇಡ್ ನಿರ್ಮಿಸಲು ರೂ.೫೫೦.೩೪ಕೋಟಿ ಅವಶ್ಯಕತೆ ಇದ್ದು,ಅನುದಾನಕ್ಕಾಗಿ ರಾಷ್ಟಿçÃಯ ಪರಿಹಾರತ್ಮಕ ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು,ಅವರು ಒಪ್ಪಿಕೊಂಡಿರುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು ೨೦೧೯-೨೦ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿದಂತೆ ರೈಲ್ವೆ ಬ್ಯಾರಿಕೆಡ್ ನಿರ್ಮಾಣಕ್ಕಾಗಿ ಹೊಸ ಯೋಜನೆ ಅನುಷ್ಠಾನಗೊಳಿಸಲಾಗಿದ್ದು, ಈ ಯೋಜನೆ ಅಡಿ ೧೮೧.೮೦೨ಕಿ.ಮೀ ಬ್ಯಾರಿಕೇಡ್( ಈ ಮೊದಲು ನಿರ್ಮಿಸಿದ ೧೬೫.೩೮ಕಿ.ಮೀ ಸೇರಿ) ನಿಮಿಸಲಾಗಿದೆ ಎಂದರು.
*ಬAಕಾಪುರ ತೋಳ ವನ್ಯಜೀವಿಧಾಮಕ್ಕೆ ಅನುಮೋದನೆ: ಇಂಡಿಯನ್ ಗ್ರೇ ವುಲ್ಫ್ ಎಂದು ಕರೆಯಲ್ಪಡುವ ತೋಳಗಳ ಆವಾಸಸ್ಥಾನದ ಸಂರಕ್ಷಣೆಗಾಗಿ ಗಂಗಾವತಿ ವಲಯದ ಬಂಕಾಪುರ ಬ್ಲಾಕ್-೨ ಮೀಸಲು ಅರಣ್ಯ ಪ್ರದೇಶದ ೩೩೨.೬೭ ಹೆಕ್ಟೇರ್ ಅರಣ್ಯ ಪ್ರದೇಶವನ್ನು ಬಂಕಾಪುರ ತೋಳ ವನ್ಯಜೀವಿಧಾನ ಎಂದು ಘೋಷಿಸಲು ೧೫ನೇ ವನ್ಯಜೀವಿ ಮಂಡಳಿ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ಅವರು ವಿವರಿಸಿದರು.ರಾಜ್ಯದಲ್ಲಿ ವನ್ಯಜೀವಿಗಳಿಗೆ ಸಂಪೂರ್ಣ ರಕ್ಷಣೆ ನೀಡುವ ಸಲುವಾಗಿ ೫ ರಾಷ್ಟಿçÃಯ ಉದ್ಯಾನವನ, ೩೩ ಅಭಯಾರನ್ಯಗಳು(೦೫ಹುಲಿ ಸಂರಕ್ಷಿತ ಪ್ರದೇಶಗಳು ಒಳಗೊಂಡAತೆ),೧೪ ಸಂರಕ್ಷಣಾ ಮೀಸಲು ಪ್ರದೇಶ ಮತ್ತು ೧ ಸಮುದಾಯ ಮೀಸಲು ಪ್ರದೇಶವೆಂದು ಘೋಷಿಸಲಾಗಿದೆ ಎಂದು ಅವರು ತಿಳಿಸಿದರು.
ಕೋವಿಡ್ ಕಾರಣದಿಂದ ಅರಣ್ಯ ಇಲಾಖೆಗೂ ಅನುದಾನದ ಕೊರತೆಯಾಗಿರುವುದನ್ನು ಸದನಲ್ಲಿ ಒಪ್ಪಿಕೊಂಡ ಸಚಿವ ಕತ್ತಿ ಅವರು ಮುಂದಿನ ದಿನಗಳಲ್ಲಿ ಸರಿಪಡಿಸಲಾಗುವುದು ಎಂದರು.


Leave a Reply