Belagavi

ಭೂಗತ ವಿದ್ಯುತ್ ಕೇಬಲ್ ಅಳವಡಿಕೆ ಯೋಜನಾ ವರದಿ ಸಿದ್ದ ; ಸಚಿವ ವಿ ಸುನೀಲ್ ಕುಮಾರ್


ಬೆಳಗಾವಿ ಸುವರ್ಣಸೌಧ ಡಿ. ೨೦: ೨೦೧೮-೧೯ನೇ ಬಜೆಟ್‌ನಲ್ಲಿ ಘೋಷಿಸಲಾದ ಬೆಂಗಳೂರು ನಗರದಲ್ಲಿನ ಎಲ್ಲಾ ಓವರ್ ಹೆಡ್ ವಿದ್ಯುತ್ ಸರಬರಾಜು ಮಾರ್ಗಗಳನ್ನು ಭೂಗತ ವಿದ್ಯುತ್ ಕೇಬಲ್ ಮಾರ್ಗಗಳನ್ನಾಗಿ ಬದಲಾಯಿಸುವ ಯೋಜನಾ ವರದಿ ಸಿದ್ದವಾಗಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್‌ಕುಮಾರ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಗೋವಿಂದರಾಜ್ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿದ ಅವರು ಬೆಸ್ಕಾಂ ವ್ಯಾಪ್ತಿಯ ಬೆಂಗಳೂರು ನಗರಕ್ಕೆ ಒಳಪಡುವ ೬೩ ಉಪವಿಭಾಗಗಳ ಪೈಕಿ ೫೩ ಉಪವಿಭಾಗಗಳಲ್ಲಿ ೧೧ಕೆವಿ ಸಾರ್ಮಥ್ಯದ ವಿದ್ಯುತ್ ಸರಬರಾಜಿನ ಮೇಲ್ಮಾರ್ಗಗಳನ್ನು ಭೂಗತ ಕೇಬಲ್ ಮಾರ್ಗಗಳಾಗಿ ಪರಿವರ್ತಿಸಿ ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಸಲು ರೂ. ೫೩೨೫ ಕೋಟಿ ರೂಪಾಯಿಗಳ ಯೋಜನಾ ವರದಿ ಸಿದ್ದವಾಗಿದೆ ಎಂದು ಅವರು ವಿವರಿಸಿದ್ದಾರೆ.
ನಾಲ್ಕು ಹಂತಗಳಲ್ಲಿ ಯೋಜನೆ ಅನುಷ್ಠಾಗೊಳಿಸಲಾಗುತ್ತಿದ್ದು, ರೂ.೫೦೩೧.೬೫ ಕೋಟಿ ರೂಪಾಯಿಗಳಿಗೆ ದರ ಗುತ್ತಿಗೆ ನೀಡಲಾಗಿದೆ. ಕಾಮಗಾರಿ ಪ್ರಗತಿಯಲಿದೆ ಎಂದರು.
ನವೆAಬರ್ ಅಂತ್ಯಕ್ಕೆ ೪೮೨೧.೫೯ ಕಿ.ಮೀ. ಉದ್ದದ ೧೧ ಕೆವಿ ಭೂಗತ ಕೇಬಲ್‌ನ್ನು, ೨೬೭ ಕಿ.ಮೀ ಉದ್ದದ ಎಲ್.ಟಿ ಭೂಗತ ಕೇಬಲ್, ೨೮೩೭ ಕಿ.ಮೀ ಎಲ್.ಟಿ ಏರಿಯಲ್ ಬಂಚ್ಡ್ ಕೇಬಲ್ ಅಳವಡಿಸಲಾಗಿದೆ. ೧೮೨೨.೭೯ ಕೋಟಿ ರೂಪಾಯಿ ವ್ಯಯಿಸಲಾಗಿದೆ.
ಹೆಸ್ಕಾಂ ವ್ಯಾಪ್ತಿ ಹೊರತುಪಡಿಸಿ ಬೇರೆ ವಿದ್ಯುತ್ ಸರಬರಾಜು ನಿಗಮಗಳ ವ್ಯಾಪ್ತಿಯಲ್ಲಿ ಭೂಗತ ಕೇಬಲ್ ಅಳವಡಿಕೆ ಯೋಜನೆಯನ್ನು ಘೋಷಣೆಯನ್ನು ಮಾಡಿರುವುದಿಲ್ಲ ಎಂದು ಸಚಿವರು ಮಾಹಿತಿ ನೀಡಿದ್ದಾರೆ.


Leave a Reply