Koppal

ಹಾಲುಮತ ಸಮಾಜ ಹಾಗೂ ಕನ್ನಡ ಪರ ಸಂಘಟನೆಯ ವತಿಯಿಂದ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಕೆ


ಕುಷ್ಟಗಿ: ಷಂಡತನ ಪ್ರದರ್ಶನ ಮಾಡುತ್ತಿರುವ ಎಂಇಎಸ್(MES) ನ್ನು ಕರ್ನಾಟಕ ರಾಜ್ಯದಲ್ಲಿ ನಿಷೇಧ ಮಾಡಬೇಕು. ಕನ್ನಡ ನಾಡಿನ ಬಗ್ಗೆ ಅಗೌರವ ತೋರಿಸಿ ಸ್ವಾತಂತ್ರಹೋರಾಟಗಾರ ಹುತಾತ್ಮ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಮೂರ್ತಿ ಭಗ್ನ ಗೊಳಿಸಿರುವ ದೇಶದ್ರೋಹಿಗಳನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಗಡಿಪಾರು ಮಾಡಬೇಕೆಂದು ಒತ್ತಾಯಿಸಿ, ಕರ್ನಾಟಕ ರಾಜ್ಯದಲ್ಲಿ ವಾಸಮಾಡುತ್ತಿರುವ ಕರ್ನಾಟಕ ರಾಜ್ಯದ ನೆಲ ಜಲ ಸೌಲತ್ತುಗಳನ್ನು ಬಳಸಿಕೊಂಡು, ಕನ್ನಡಿಗರ ಮೇಲೆ ದೌರ್ಜನ್ಯ ನಡೆಸುತ್ತಿರುವ ನಾಡದ್ರೋಹಿ ಎಂಇಎಸ್ ನವರು ಪದೇಪದೇ ಅಶಾಂತಿ ಉಂಟು ಮಾಡುತ್ತಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ಹುತಾತ್ಮ, ಕನ್ನಡಿಗರ ಸ್ವಾಭಿಮಾನ ಸಂಕೇತವು ಆಗಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಧ್ವಂಸ ಮಾಡಿರುವ ನಾಡದ್ರೋಹಿಗಳನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಗಡಿಪಾರು ಮಾಡಬೇಕು, ಕರ್ನಾಟಕ ರಾಜ್ಯದ ಮರಾಠ ಅಭಿವೃದ್ಧಿ ನಿಗಮದ ಮೀಸಲಾತಿ ಸೌಲಭ್ಯಗಳನ್ನು ಬಳಸಿಕೊಂಡು ಕನ್ನಡನಾಡಿಗೆ ದ್ರೋಹ ಮಾಡುತ್ತಿರುವ ಮರಾಠ ಸಮುದಾಯದ ಕೆಲವು ಕಿಡಿಗೇಡಿಗಳ ಕೃತ್ಯಗಳಿಂದಾಗಿ ಕನ್ನಡಿಗರ ಮತ್ತು ಮರಾಠರ ಭಾಷಿಕರ ನಡುವೆ ಸೌಹಾರ್ದ ಕದಡುತ್ತಿದ್ದಾರೆ.

ಆದ್ದರಿಂದ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಸಮಯ ವ್ಯಯ ಮಾಡದೆ ಮಹಾರಾಷ್ಟ್ರ ಏಕೀಕರಣ ಸಮಿತಿ ಎಂಇಎಸ್ (MES)ನ್ನು ರಾಜ್ಯದಿಂದ ನಿಷೇಧ ಮಾಡಬೇಕು ಕನ್ನಡ ನಾಡಿನ ಬಗ್ಗೆ ಕನ್ನಡ ಭಾಷೆಯ ಬಗ್ಗೆ ಯಾರೇ ತಪ್ಪು ಮಾತನಾಡಿದರೂ ಸಹ ಅವರಿಗೆ ಸರಿಯಾದ ಪಾಠ ಕಲಿಸುವಂತಹ ನಿರ್ಧಾರ ಕರ್ನಾಟಕ ರಾಜ್ಯ ಸರ್ಕಾರ ಮಾಡಬೇಕೆಂದು ಕುಷ್ಟಗಿ ತಹಸೀಲ್ದಾರವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕುಷ್ಟಗಿ ಕ್ಷೇತ್ರದ ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾದ್ಯಕ್ಷರಾದ ದೊಡ್ಡನಗೌಡ ಎಚ್ ಪಾಟೀಲ್ ಹಾಗೂ ಸಮಾಜದ ಗುರುಗಳಾದ ಶಿವಾನಂದಯ್ಯ ಗುರುವಿನ್ ಸಮಾಜದ ಅಧ್ಯಕ್ಷರಾದ ಮಲ್ಲಣ್ಣ ಪಲ್ಲೇದ ಸಮಾಜದ ಯುವ ಘಟಕದ ಅಧ್ಯಕ್ಷರಾದ ಕಲ್ಲೇಶ್ ತಾಳದ್ ಹಾಲುಮತ ಹಾಲುಮತದ ಮಹಾಸಭಾ ಅಧ್ಯಕ್ಷರಾದ ಕುರಿ ಅವರು ಕನ್ನಡಪರ ಸಂಘಟನೆಗಳ ಅಧ್ಯಕ್ಷರಾದ ಅಜ್ಜಪ್ಪ ಕರಡಕಲ್, ಬಸವರಾಜ್ ಗಾಣಿಗೇರ್ ರವರು ಚಂದ್ರು ವಡಿಗೇರಿ ಅವರು ಫಕೀರಪ್ಪ ವಕೀಲರು ಶಂಬಣ್ಣ ಸಿಂಧನೂರ್ ಸುಭಾನಿ RT ಶರಣಪ್ಪ ಚೂರಿ ದೇವಪ್ಪ ಕಟ್ಟಿ ಹೊಲ ಸಂಗಪ್ಪ ಪಂಚಮಿ ಮಂಜುನಾಥ ನಾಲಗಾರ ತೊಂಡೆಪ್ಪ ವಾಯ್ ಹನುಮೇಶ್ ಟಕ್ಕಳಕಿ ಅವರು ಇನ್ನಿತರ ವಿವಿಧ ವಿವಿಧ ಸಮಾಜದ ಮುಖಂಡರು ಹಾಗೂ ಸಂಘಟನೆಗಳು ಸಮಾಜದ ಮುಖಂಡರು ಹಾಗೂ ಕಿರಿಯರು ಕುಲಬಾಂಧವರು ಇದರಲ್ಲಿ ಭಾಗವಹಿಸಿದ್ದರು.

ಆರ್ ಶರಣಪ್ಪ ಗುಮಗೇರಾ

ಕೊಪ್ಪಳ


Leave a Reply