Belagavi

ಕಾಕತಿಯಲ್ಲಿ ಶಿವಾಜಿ ಮೂರ್ತಿಗೆ ಅವಮಾಣ ಮಾಡಲು ಯತ್ನಿಸಿದ ಮೂವರು ಯುವಕರ ಬಂಧನ


ಬೆಳಗಾವಿ: ಕಾಕತಿ ಪೋಲೀಸ್ ಠಾಣೆ ವ್ಯಾಪ್ತಿಯ ಹೊನಗಾ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಯ ಧ್ವಂಸಕ್ಕೆ ಯತ್ನಿಸುತ್ತಿರುವಾಗ ಮೂವರು ಜನ ಯುವಕರನ್ನು ಕಾಕತಿ ಪೋಲೀಸರು ವಶಕ್ಕೆ ಪಡೆದ ಘಟನೆ ಸೋಮವಾರ ರಾತ್ರಿ ನಡೆದಿದೆ.

ಮಂಗಳವಾರ ಸಂಜೆ ಹೊತ್ತಿಗೆ ಮೂವರು ಜನ ಯುವಕರು ಕುಡಿದ ಅಮಲಿನಲ್ಲಿ ಹೊನಗಾ ಗ್ರಾಮದ ಶಿವಾಜಿ ಪುತ್ಥಳಿಯ ಕಟ್ಟೆಯ ಮೇಲೆ ಏರಿ,ಗಲಾಟೆ ಮಾಡುತ್ತಿರುವಾಗ,ಗ್ರಾಮಸ್ಥರು ಜಮಾಯಿಸಿ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ‌.ಸ್ಥಳಕ್ಕೆ ಧಾವಿಸಿದ ಕಾಕತಿ ಪೋಲೀಸರು ಮೂವರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಸುದ್ದಿ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಹರಡುತ್ತಿದ್ದಂತೆಯೇ ನೂರಾರು ಸಂಖ್ಯೆಯಲ್ಲಿ ಶಿವಾಜಿ ಅಭಿಮಾನಿಗಳು ಜಮಾಯಿಸಿದ್ದು ಕಾಕತಿ ಪೋಲೀಸ್ ಠಾಣೆಯ ಬಳಿ ಪರಿಸ್ಥಿತಿ ಉದ್ವಿಗ್ನವಾಗಿದೆ.


Leave a Reply