Belagavi

ಇಂದು ವಿವಿದ ಕಾಮಗಾರಿಗಳ ಉದ್ಘಾಟನೆಗೆ ಸಿಎಂ ಆಗಮಿಸಲಿದ್ದಾರೆ: ಶಾಸಕ ಅನಿಲ ಬೆನಕೆ


ಬೆಳಗಾವಿ: ಶಾಸಕ ಅನಿಲ ಬೆನಕೆ ಅವರ ಕ್ಷೇತ್ರದಲ್ಲಿ  ವಿವಿದ ಇಲಾಖೆಗಳ ಯೋಜನೆಯಡಿ ಅನುಷ್ಠಾನಗೊಂಡ ಕಾಮಗಾರಿಗಳ ಲೋಕಾರ್ಪಣೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ನೇರವೆರಿಸಲಿದ್ದಾರೆ ಎಂದು ಶಾಸಕ ಅನಿಲ ಬೆನಕೆ ಅವರು ತಿಳಿಸಿದ್ದಾರೆ

ಡಿ.21 ಮಂಗಳವಾರ ಸಾಯಂಕಾಲ 5:30 ಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಅಮೃತ ಹಸ್ತದಿಂದ ವಿವಿದ ಕಾಮಗಾರಿಗೆ ಚಾಲನೆ ದೊರೆಯಲಿದೆ ಎಂದು ಶಾಸಕ ಅನಿಲ ಬೆನಕರ ಅವರು ತಿಳಿಸಿದರು.

ಸ್ಮಾರ್ಟ್ ಸಿಟಿ ಯೋಜನೆಯಡಿ 2 ಕೋಟಿ 8 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸುವ್ಯವಸ್ಥಿತ ಬಸ್ ತಂಗುದಾ, ಮಹಾನಗರ ಪಾಲಿಕೆ ಆವರಣದಲ್ಲಿ 2 ಕೋಡಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಐನಾಕ್ಸ್ ಕಟ್ಟಡ ಹಾಗೂ ನೆಹರು ನಗರದಲ್ಲಿ ಒಟ್ಟು 14 ಕೋಟಿ 14 ಲಕ್ಷ ವೆಚ್ಚಿದಲ್ಲಿ ಅಂತರಾಷ್ಟ್ರೀಯ ಮಟ್ಟದ ಸುವ್ಯವಸ್ಥಿತ ಒಳಾಂಗಣ ಕ್ರೀಡಾಂಗಣವನ್ನು ನಿರ್ಮಾಣ ಮಾಡಲಾಗಿದೆ. ಒಳ ಕ್ರೀಡಾಂಗಣದ ನಿರ್ಮಾಣವನ್ನು 11 ಕೋಟಿ, 3 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣದ ಕಟ್ಟಡ ನಿರ್ಮಾಣ ಸೇರಿದಂತೆ ಒಳ ಕ್ರೀಡಾಂಗಣದ ಪರಿಕರಗಳ ಖರೀದಿ ಸಹ ಮಾಡಲಾಗಿದೆ.‌ ಇದಕ್ಕೆ ಒಟ್ಟು14 ಕೋಟಿ 14 ಲಕ್ಷ  ಖರ್ಚಾಗಿದೆ‌.

ಒಳ ಕ್ರಿಡಾಂಗಣದ ನಿರ್ಮಾಣ ನಿರ್ಮಾಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅನುದಾನ ದೊರೆತಿದ್ದು, ಈ ಎಲ್ಲ ಕಾಮಗಾರಿಗಳ ಉದ್ಘಾಟನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೇರವೆರಿಸಲಿದ್ದಾರೆ. ‌


Leave a Reply