Belagavi

ತಾತ್ಕಾಲಿಕವಾಗಿ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿದ್ದ ಶುಶ್ರೂಷಾಧಿಕಾರಿಗಳ ಸೇವೆಯನ್ನು ಮುಂದುವರೆಸುವಂತೆ ಒತ್ತಾಯಿಸಿ ಪ್ರತಿಭಟನೆ


ಬೆಳಗಾವಿ: ಕೊರಾನಾ ಸಂಕಷ್ಟದ ಸಮಯದಲ್ಲಿ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿದ್ದ ಶುಶ್ರೂಷಾಧಿಕಾರಿಗಳ ಸೇವೆಯನ್ನು ಮುಂದುವರೆಸುವಂತೆ ಒತ್ತಾಯಿಸಿ ಜಿಲ್ಲೆಯ ಶುಶ್ರೂಷಾಧಿಕಾರಿ ಸಿಬ್ಬಂದಿ ವರ್ಗದವರು ಶುಕ್ರವಾರ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ದೇಶ ಹಾಗೂ ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಿಸಿದಾಗ ರಾಜ್ಯ ಸರಕಾರ ಕೊರೊನಾ ನಿಯಂತ್ರಣ ಹಾಗೂ ನಿರ್ವಹಣೆಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆವು ತಾತ್ಕಾಲಿಕವಾಗಿ ೩ ಮತ್ತು ೬ ತಿಂಗಳು ಅವಧಿಗೆ ಶುಶ್ರೂಷಾಧಿಕಾರಿಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡಿತು. ಕೊರೊನಾ ಎರಡನೇ ಅಲೆ ಹಾಗೂ ತುರ್ತು ಪರಿಸ್ಥಿತಿಯಲ್ಲಿ ಕುಟುಂಬ ಹಾಗೂ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ್ದೇವೆ. ಆದರೆ ಪ್ರಸ್ತುತವಾಗಿ ಸರಕಾರ ನಮ್ಮನ್ನು ಸೇವೆಯಿಂದ ಬಿಡುಗಡೆಗೊಳಿಸಲು ಆದೇಶಿಸಿದೆ. ಗುತ್ತಿಗೆ ಆಧಾರದಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ ಗುತ್ತಿಗೆ ನೌಕರರ ಕಾರ್ಯದಕ್ಷತೆ ಸೇವೆಯನ್ನು ಪರಿಗಣಿಸಿ ಶುಶ್ರೂಷಾಧಿಕಾರಿ ಹುದ್ದೆಯಲ್ಲಿ ಮುಂದುವರೆಸಬೇಕೆಂದು ಪ್ರತಿಭಟನಾಕಾರರು ವಿನಂತಿಸಿದರು.

ಈ ವೇಳೆ ವೀಣಯಾ ಕಾರ್ಲೆಕರ, ಅಕ್ಷತಾ ಶಿವನಗೇಕರ, ಬಸವರಾಜ ಸಲಗರ, ಭಾರತಿ ಶಿಂತ್ರಿ, ಚೇತನ ತಳವಾರ, ಪೂಜಾ ಸಣ್ಣಕ್ಕಿ, ಭಾಗ್ಯಶ್ರೀ ಹುದ್ದಾರ, ಮಲ್ಲಿಕಾರ್ಜುನ ನಾಯಕ್, ರೇಣುಕಾ ಅಂಗಡಿ, ಸುಧಾ ಬೆಳವರಿ, ತೃಪ್ತಿ ಅವರಗೋಳ, ಉಮೇಶ ಮಿರ್ಜಿ, ಸಿದ್ದಲಿಂಗಪ್ಪ ಟಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.


Leave a Reply