Belagavi

ಮತ್ತೆ ಎಂಇಎಸ್ ಪುಂಡಾಟ : ಕರ್ನಾಟಕ ಬಸ್‌ಗಳ ಮೇಲೆ ಮಸಿ


ಕಲಬುರ್ಗಿ: ನಿನ್ನೆಯಷ್ಟೇ ಎಂಇಎಸ್ ಪುಂಡರ ವಿರುದ್ಧ ಗೂಂಡಾ ಕಾಯ್ದೆ ಹಾಗೂ ದೇಶದ್ರೋಹ ಪ್ರಕರಣ ದಾಖಲಿಸುವಂತ ನಿರ್ಣಯಕ್ಕೆ, ವಿಧಾನಸಭೆ ಒಕ್ಕೊರಲಿನಿಂದ ಅಂಗೀಕರಿಸಲಾಗಿತ್ತು.

ಇದರ ಬೆನ್ನಲ್ಲೇ ಮತ್ತೆ ಎಂಇಎಸ್ ಪುಂಡಾಟ ಮುಂದುವರೆದಿದೆ. ಮುಂಬೈನಿಂದ ಕಲಬುರ್ಗಿಗೆ ಬರುತ್ತಿದ್ದಂತ ಸಾರಿಗೆ ಬಸ್ ಗಳಿಗೆ ಮಸಿ ಬಳಿದು, ಎಂಇಎಸ್ ಕಾರ್ಯಕರ್ತರು ಪುಂಡಾಟ ಮೆರೆದಿದ್ದಾರೆ.

ಈಗಾಗಲೇ ಮಹಾರಾಷ್ಟ್ರದಲ್ಲಿ ಸಾರಿಗೆ ಬಸ್ ಗಳನ್ನು ಗುರಿಯಾಗಿಟ್ಟುಕೊಂಡು ಮಹಾರಾಷ್ಟ್ರ ಏಕೀಕರಣ ಸಮಿತಿ ( ಎಂಇಎಸ್)ಯ ಕಾರ್ಯಕರ್ತರು ಮುಂಬೈನಿಂದ ಕಲಬುರ್ಗಿಗೆ ತೆರಳರುತ್ತಿದ್ದಂತ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಗಳಿಗೆ ಮಸಿ ಬಳಿದಿದು ಉದ್ಧಟತನ ತೋರಿದ್ದಾರೆ.

ಸಾರಿಗೆ ಬಸ್ ಗಳ ಮೇಲೆ ಜೈ ಶಿವಾಜಿ ಎಂದು ಬಣ್ಣದಲ್ಲಿ ಬರೆದಿದ್ದು ಅಲ್ಲದೇ, ಎಂಇಎಸ್ ಧ್ವಜಗಳನ್ನು ಬಸ್ ಮುಂದೆ ಕಟ್ಟಿದ್ದಾರೆ. ಇದಷ್ಟೇ ಅಲ್ಲದೇ ಸಾರಿಗೆ ಬಸ್ ಚಾಲಕರ ಕೈಗೆ ಎಂಇಎಸ್ ಭಾವುಟ ನೀಡಿ ಜೈ ಶಿವಾಜಿ ಎಂದು ಕೂಗುವಂತೆಯೂ ಒತ್ತಾಯಿಸಿರೋದಾಗಿ ತಿಳಿದು ಬಂದಿದೆ. ಈ ಎಲ್ಲಾ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.


Leave a Reply