Belagavi

ರಾಜ್ಯದಲ್ಲಿ ಕಳೆದ ಮೂರು ವರ್ಷದಲ್ಲಿ ೨.೧೪ ಲಕ್ಷ ಸಣ್ಣ ಕೈಗಾರಿಕೆ ನೋಂದಣಿ:ಸಚಿವ ಎನ್. ನಾಗರಾಜು


ಬೆಳಗಾವಿ ಸುವರ್ಣಸೌಧ,ಡಿ.೨೧: ಕಳೆದ ಮೂರು ವರ್ಷಗಳಲ್ಲಿ ಭಾರತ ಸರ್ಕಾರದ ಉದ್ಯೋಗ ಆಧಾರ್ ಮೆಮೊರಾಂಡಮ್ ಪೋರ್ಟಲ್‌ನಲ್ಲಿ ೨,೧೪,೯೯೨ ಸೂಕ್ಷö್ಮ, ಸಣ್ಣ, ಮತ್ತು ಕೈಗಾರಿಕೆಗಳು ನೋಂದಣಿಯಾಗಿವೆ ಎಂದು ಪೌರಾಡಳಿತ ಮತ್ತು ಸಣ್ಣಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವರಾದ ಎನ್. ನಾಗರಾಜು ಎಂ.ಟಿ.ಬಿ. ಅವರು ತಿಳಿಸಿದ್ದಾರೆ.
ಸದಸ್ಯ ಹೆಚ್.ಎಂ. ರಮೇಶಗೌಡ ಅವರ ಪ್ರಶ್ನೆಗೆ ಉತ್ತರಿಸಿರುವ ಅವರು ೨೦೧೭-೧೮ನೇ ಸಾಲಿನಲ್ಲಿ ೪೮,೪೮೨, ೨೦೧೮-೧೯ರಲ್ಲಿ ೬೯,೨೭೮ ಹಾಗೂ ೨೦೧೯-೨೦ ರಲ್ಲಿ ೯೭,೨೩೨ ಸಣ್ಣ ಉದ್ದಿಮೆಗಳು ನೊಂದಣಿಯಾಗಿವೆ. ಈ ಅವಧಿಯಲ್ಲಿ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲು ಕೆ.ಐ.ಎ.ಡಿ.ಬಿ. ವತಿಯಿಂದ ಕೈಗಾರಿಕಾ ಪ್ರದೇಶಕ್ಕಾಗಿ ೫೨೦೮ ಎಕರೆ, ಏಕ ಘಟಕ ಸಂಕೀರ್ಣಗಳಿಗಾಗಿ ೪೬೬೮ ಎಕರೆ ಒಳಗೊಂಡAತೆ ೯೮೭೬.೨೩ ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.


Leave a Reply