Belagavi

ಹಿರಿಯ ನಾಗರಿಕರ ಪ್ರಕರಣಗಳು ಆದ್ಯತೆ ಮೇರೆಗೆ ಇತ್ಯರ್ಥಕ್ಕೆ ಸೂಚನೆ ಹಿರಿಯ ನಾಗರಿಕರಿಗೆ ನಿಗದಿತ ಅವಧಿಯಲ್ಲಿ ಮಾಸಾಶನಕ್ಕೆ ಕ್ರಮ: ಸಚಿವ ಆಚಾರ ಹಾಲಪ್ಪ


ಬೆಳಗಾವಿ ಸುವರ್ಣಸೌಧ,ಡಿ.೨೧: ರಾಜ್ಯದಲ್ಲಿ ಹಿರಿಯ ನಾಗರಿಕರಿಗೆ ನಿಗದಿಪಡಿಸಿದ ಅವಧಿಯಲ್ಲಿ ಮಾಸಾಶನ ತಲುಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಮತ್ತು ಈ ಕುರಿತು ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ,ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವ ಆಚಾರ ಹಾಲಪ್ಪ ಅವರು ವಿಧಾನಪರಿಷತ್‌ನಲ್ಲಿ ತಿಳಿಸಿದರು.
ಸದಸ್ಯ ಎಂ.ನಾರಾಯಣಸ್ವಾಮಿ, ಡಾ.ತೇಜಸ್ವಿನಿಗೌಡ, ಗೋವಿಂದರಾಜು ಅವರ ಚುಕ್ಕೆಗುರುತಿನ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವ ಆಚಾರ ಹಾಲಪ್ಪ ಅವರು ೫೭,೯೧,೦೩೨ ಹಿರಿಯ ನಾಗರಿಕರಿದ್ದು,ಅವರಲ್ಲಿ ಬಡತನ ರೇಖೆಗಿಂತ ಕೆಳಗಿರುವ ೪೨,೩೫,೬೦೯ ಹಿರಿಯ ನಾಗರಿಕರು ಮಾಸಾಶನ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ನಿಗದಿಪಡಿಸಿದ ಅವಧಿಯೊಳಗೆ ಮಾಸಾಶನ ತಲುಪುತ್ತಿಲ್ಲ; ಅಂಚೆ ಇಲಾಖೆಯವರು ಪಿಂಚಣಿ ನೀಡುವ ಸಂದರ್ಭದಲ್ಲಿ ಕಮಿಶನ್ ಪಡೆದುಕೊಂಡೇ ಮಾಸಾಶನ ನೀಡುತ್ತಾರೆ ಎಂಬ ದೂರುಗಳಿಗೆ ಕಡಿವಾಣ ಹಾಕಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
*ನಿಗದಿಪಡಿಸಿದ ಅವಧಿಯೊಳಗೆ ಹಿರಿಯ ನಾಗರಿಕರ ಪ್ರಕರಣಗಳು ಇತ್ಯರ್ಥ:ಕೇಂದ್ರ ಸರಕಾರವು ತಂದೆ- ತಾಯಿಯರ ಮತ್ತು ಹಿರಿಯ ನಾಗರಿಕರ ಪಾಲನೆ ಪೋಷಣೆ ಮತ್ತು ಕಲ್ಯಾಣಕ್ಕಾಗಿ ಅಧಿನಿಯಮ-೨೦೦೭ನ್ನು ರಾಜ್ಯದಲ್ಲಿ ಜಾರಿಗೊಳಿಸಿದೆ. ದೌಜ್ಯನ್ಯ,ಶೋಷಣೆ,ವಂಚನೆಗೊಳಗಾದ ಹಾಗೂ ನಿರ್ವಹಣೆ ವೆಚ್ಚದ ಅಗತ್ಯವಿರುವ ಹಿರಿಯ ನಾಗರಿಕರು ನ್ಯಾಯಕ್ಕಾಗಿ ಈ ಅಧಿನಿಯಮದಡಿ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿತವಾದ ನಿರ್ವಹಣಾ ನ್ಯಾಯಮಂಡಳಿಯಲ್ಲಿ ಪ್ರಕರಣಗಳನ್ನು ದಾಖಲಿಸಿ ಗರಿಷ್ಠ ೯೦ ದಿನದ ಒಳಗಾಗಿ ನ್ಯಾಯ ಪಡೆಯಬಹುದಾಗಿದೆ. ತಿಂಗಳಿಗೆ ಗರಿಷ್ಠ ರೂ.೧೦ ಸಾವಿರಗಳ ಮಾಸಿಕ ಭತ್ಯೆ ಪಡೆಯಬಹುದಾಗಿದೆ ಎಂದು ಸಚಿವ ಆಚಾರ ಹಾಲಪ್ಪ ಅವರು ತಿಳಿಸಿದರು.
ನಿಗದಿಪಡಿಸಿದ ಅವಧಿಯೊಳಗೆ ಹಿರಿಯ ನಾಗರಿಕರಿಗೆ ಸಂಬAಧಿಸಿದ ಪ್ರಕರಣಗಳನ್ನು ಇತ್ಯರ್ಥಪಡಿಸುವಂತೆ ಹಾಗೂ ಪೆಂಡಿAಗ್ ಇರದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಮತ್ತು ಈ ರೀತಿಯ ಪ್ರಕರಣಗಳ ಕುರಿತ ಸಂಪೂರ್ಣ ವರದಿಯನ್ನು ಸಲ್ಲಿಸುವಂತೆ ಸೂಚಿಸಲಾಗುವುದು ಎಂದು ಅವರು ಹೇಳಿದರು.
ದೌರ್ಜನ್ಯ ಮತ್ತು ಕಿರುಕುಳಕ್ಕೆ ಒಳಗಾದಂತವರಿಗೆ ಮಾರ್ಗದರ್ಶನ ನೀಡಲು ಹಾಗೂ ಕಾನೂನು ಸಲಹೆಗಳನ್ನು ಒದಗಿಸಲು ೩೦ ಜಿಲ್ಲೆಗಳಲ್ಲಿ ಸ್ವಯಂಸೇವಾ ಸಂಸ್ಥೆಗಳ ಮುಖಾಂತರ ಎಸ್ಪಿ ಕಚೇರಿಗಳಲ್ಲಿ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ(ಟೋಲ್ ಫ್ರೀ ಸಂ:೧೦೯೦) ಸ್ಥಾಪಿಸಿದ್ದು, ೨೮ ಜಿಲ್ಲೆಗಳಲ್ಲಿ ಸಹಾಯವಾಣಿಗಳು ಕಾರ್ಯನಿರ್ವಹಿಸುತ್ತಿವೆ ಎಂದರು.
ಕಳೆದ ೨ ವರ್ಷಗಳಲ್ಲಿ ಹಿರಿಯ ನಾಗರಿಕರಿಗೆ ಸಂಬAಧಿಸಿದAತೆ ಕೌಟುಂಬಿಕ ದೌರ್ಜನ್ಯಗಳ ಬಗ್ಗೆ ಸಹಾಯವಾಣಿಗಳಲ್ಲಿ ೨೧೯೩ ಪ್ರಕರಣಗಳು ದಾಖಲಾಗಿವೆ. ೨೦೨೦-೨೧ನೇ ಸಾಲಿನಲ್ಲಿ ೫೭೭೪ ಹಿರಿಯ ನಾಗರಿಕರ ಮೇಲೆ ದೌರ್ಜನ್ಯಗಳಾಗಿರುವುದನ್ನು ಅವರು ಸದನಕ್ಕೆ ಬಿಚ್ಚಿಟ್ಟರು.
ರಾಜ್ಯದಲ್ಲಿ ಸರಕಾರದ ವೃದ್ಧಾಶ್ರಮಗಳು ಯಾವುದು ಇಲ್ಲ ಎಂದು ಸ್ಪಷ್ಟಪಡಿಸಿದ ಸಚಿವ ಆಚಾರ ಹಾಲಪ್ಪ ಅವರು ೩೫ ರಾಜ್ಯ ಸರಕಾರದ ಅನುದಾನಿತ ವೃದ್ಧಾಶ್ರಮಗಳು, ೪೯ ಕೇಂದ್ರ ಸರಕಾರ ಅನುದಾನಿತ ವೃದ್ಧಾಶ್ರಮಗಳು, ೧೫೦ ಖಾಸಗಿ ವೃದ್ಧಾಶ್ರಮಗಳು ಕಾರ್ಯನಿರ್ವಹಿಸುತ್ತಿವೆ ಎಂದರು.


Leave a Reply