Belagavi

ರಾಜ್ಯದಲ್ಲಿ ೮೮ರಲ್ಲಿ ೬೫ ಸಕ್ಕರೆ ಕಾರಖಾನೆಗಳು ಕಾರ್ಯನಿರತ ೮.೯೩ ಕೋಟಿ ರೂ. ಬಾಕಿ ವಸೂಲಾತಿಗೆ ಅಗತ್ಯ ಕ್ರಮ: ಸಚಿವ ಮುನೇನಕೊಪ್ಪ


ಬೆಳಗಾವಿ ಸುವರ್ಣಸೌಧ,ಡಿ.೨೧: ೨೦೧೮-೧೯ನೇ ಹಂಗಾಮಿನಲ್ಲಿ ೪ ಸಕ್ಕರೆ ಕಾರಖಾನೆಗಳು ೮.೯೩ಕೋಟಿ ರೂ.ಗಳ ಕಬ್ಬಿನ ಬಿಲ್ ಪಾವತಿಸದೇ ಬಾಕಿ ಉಳಿಸಿಕೊಂಡಿವೆ. ಈ ಕಾರಖಾನೆಗಳು ಪ್ರಸ್ತುತ ನಿಷ್ಕಿçಯವಾಗಿದ್ದು,ಬಾಕಿ ವಸೂಲಾತಿಗೆ ಎಲ್ಲ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು. ೨೦೨೦-೨೧ನೇ ಹಂಗಾಮಿನಲ್ಲಿ ಯಾವುದೇ ಕಾರಖಾನೆಗಳು ಬಾಕಿ ಉಳಿಸಿಕೊಂಡಿರುವುದಿಲ್ಲ ಎಂದು ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಅವರು ವಿಧಾನಪರಿಷತ್‌ನಲ್ಲಿ ತಿಳಿಸಿದರು.
ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವ ಮುನೇನಕೊಪ್ಪ ಅವರು ಸಕ್ಕರೆ ಕಾರಖಾನೆಗಳು ೨೦೧೬-೧೭ನೇ ಹಂಗಾಮಿನಲ್ಲಿ ೫,೩೪೩.೦೭ ಕೋಟಿ ಪಾವತಿಸಬೇಕಾಗಿತ್ತು;೬,೭೦೨.೮೪ ಕೋಟಿ ರೂ.ಪಾವತಿಸಲಾಗಿದೆ. ೨೦೧೭-೧೮ನೇ ಹಂಗಾಮಿನಲ್ಲಿ ೯,೮೫೧.೮೩ ಕೋಟಿ ರೂ.ಪಾವತಿಸಬೇಕಾಗಿತ್ತು;೧೦,೬೦೫.೧೨ ಕೋಟಿ ರೂ. ಪಾವತಿಸಲಾಗಿದೆ. ೨೦೧೮-೧೯ನೇ ಸಾಲಿನಲ್ಲಿ ೮.೯೩ ಕೋಟಿ ರೂ. ಬಾಕಿ ಹೊರತುಪಡಿಸಿ ೧೨,೦೮೩.೭೯ಕೋಟಿ ಪಾವತಿಸಲಾಗಿದೆ. ೨೦೧೯-೨೦ನೇ ಸಾಲಿನಲ್ಲಿ ೫.೮೦ ಕೋಟಿ ರೂ.ಬಾಕಿ ಹೊರತುಪಡಿಸಿ ೧೦,೬೭೧.೯೪ ಕೋಟಿ ರೂ. ಪಾವತಿಸಲಾಗಿದೆ. ೨೦೨೦-೨೧ನೇ ಸಾಲಿನಲ್ಲಿ ೧೩,೩೨೪.೪೯ ಕೋಟಿ ರೂ. ಪಾವತಿಸಬೇಕಾಗಿತ್ತು;೧೩,೫೩೩.೦೮ ಕೋಟಿ ಪಾವತಿಸಲಾಗಿದ್ದು,ಯಾವುದೇ ರೀತಿಯ ಬಾಕಿ ಇರುವುದಿಲ್ಲ ಎಂದು ಅವರು ಸದನಕ್ಕೆ ತಿಳಿಸಿದರು.
ಕೆಲವು ಸಕ್ಕರೆ ಕಾರಖಾನೆಗಳು ಕೇಂದ್ರ ಸರಕಾರ ನಿಗದಿಪಡಿಸಿದ ಎಫ್‌ಆರ್‌ಪಿ ದರಕ್ಕಿಂತ ಹೆಚ್ಚಿಗೆ ಕಬ್ಬಿನ ಬಿಲ್ಲನ್ನು ರೈತರಿಗೆ ಪಾವತಿಸಿವೆ ಎಂದು ಅವರು ತಿಳಿಸಿದರು.೨೦೧೯-೨೦ನೇ ಸಾಲಿನಲ್ಲಿ ಸೋಮೇಶ್ವರ ಸಹಕಾರಿ ಸಕ್ಕರೆ ಕಾರಖಾನೆಯು ೫.೮೦ ಪಾವತಿಸಿರುವುದು ಬಾಕಿ ಉಳಿಸಿಕೊಂಡಿರುತ್ತದೆ;ಈ ಕುರಿತು ಪ್ರಕರಣ ನ್ಯಾಯಾಲಯದಲ್ಲಿದೆ ಎಂದು ಅವರು ಸ್ಪಷ್ಟಪಡಿಸಿದರು.
*೬೫ ಸಕ್ಕರೆ ಕಾರಖಾನೆಗಳಲ್ಲಿ ಕಬ್ಬು ಅರೆಯುವ ಕಾರ್ಯ ಪ್ರಾರಂಭ: ೨೦೨೧-೨೨ನೇ ಹಂಗಾಮಿನಲ್ಲಿ ನವೆಂಬರ್ ತಿಂಗಳಿAದ ೬೫ ಸಕ್ಕರೆ ಕಾರಖಾನೆಗಳು ಕಬ್ಬು ಅರೆಯುವ ಕಾರ್ಯ ಪ್ರಾರಂಭಿಸಿವೆ. ಈ ಕಾರಖಾನೆಗಳು ನ.೧೫ರವರೆಗೆ ೧೧೨.೩೯ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಿ ೯.೬೦ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದಿಸಿ ಶೇ.೮.೫೪ರಷ್ಟು ಇಳುವರಿ ಪಡೆದಿವೆ. ಈವರೆಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಕಾರಖಾನೆಗಳು ೩೪೫೭.೫೩ಕೋಟಿ ರೂ.ಗಳಾಗಿದ್ದು, ಈ ಪೈಕಿ ೧೫೪೬.೯೬ ಕೋಟಿ ರೂ.ಪಾವತಿಸಿವೆ. ೧೯೨೮.೫೭ ಕೋಟಿ ಇನ್ನೂ ಪಾವತಿಸಬೇಕಿದೆ ಎಂದು ಸಚಿವ ಮುನೇನಕೊಪ್ಪ ಅವರು ವಿವರಿಸಿದರು.
ಕಾರಖಾನೆಗಳು ರೈತರ ಕಬ್ಬು ಬಿಲ್ಲನ್ನು ನಿಯಮಾನುಸಾರ ಪ್ರತಿ ೧೪ ದಿನಗಳಿಗೊಮ್ಮೆ ಪಾವತಿಸಲು ಕ್ರಮಕೈಗೊಳ್ಳುತ್ತಿವೆ.ಪಾವತಿ ಮಾಡದಿದ್ದಲ್ಲಿ ಕಬ್ಬು(ನಿಯಂತ್ರಣ) ಆದೇಶ ೧೯೬೬ ಪ್ರಕಾರ ಶಾಸನಬದ್ಧ ನೋಟಿಸ್ ಜಾರಿಗೊಳಿಸಿ ಪಾವತಿಗೆ ಕ್ರಮಜರುಗಿಸಲಾಗುವುದು ಎಂದರು.
*೦೮ ಸಕ್ಕರೆ ಕಾರಖಾನೆಗಳು ಖಾಸಗಿಯವರಿಗೆ ಗುತ್ತಿಗೆ: ದುಡಿಯುವ ಬಂಡವಾಳದ ಕೊರತೆ ಮತ್ತು ಆರ್ಥಿಕ ದುಸ್ಥಿತಿಯಿಂದಾಗಿ ಸ್ಥಗಿತಗೊಂಡಿದ್ದ ಒಟ್ಟು ೦೮ ಸಕ್ಕರೆ ಕಾರಖಾನೆಗಳನ್ನು ಇದುವರೆಗೆ ಖಾಸಗಿಯವರಿಗೆ ಗುತ್ತಿಗೆ ನೀಡಲಾಗಿದೆ ಎಂದು ಸಚಿವ ಮುನೇನಕೊಪ್ಪ ಅವರು ವಿವರಿಸಿದರು.
ಮೈಸೂರು ಜಿಲ್ಲೆಯ ಕೆಆರ್ ನಗರ ತಾಲೂಕಿನ ಚುಂಚನಕಟ್ಟೆಯ ಶ್ರೀರಾಮ ಸಹಕಾರಿ ಸಕ್ಕರೆ ಕಾರಖಾನೆ, ಮುಧೋಳ ತಾಲೂಕಿನ ರನ್ನನಗರದ ರೈತರ ಸಹಕಾರಿ ಸಕ್ಕರೆ ಕಾರಖಾನೆಗಳನ್ನು ಖಾಸಗಿಯವರಿಗೆ ಗುತ್ತಿಗೆ ನೀಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ವಿವರಿಸಿದ ಸಚಿವ ಶಂಕರ ಮುನೇನಕೊಪ್ಪ ಅವರು ಅನುತ್ಪಾದಿತ ಸಕ್ಕರೆ ಕಾರಖಾನೆಗಳನ್ನು ಬಲಪಡಿಸುವ ಸಲುವಾಗಿ ಕೇಂದ್ರದಿAದ ಕಳೆದ ಐದು ವರ್ಷಗಳಲ್ಲಿ ಯಾವುದೇ ಅನುದಾನ ಮಂಜೂರಾಗಿರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.ರಾಜ್ಯದಲ್ಲಿ ೮೮ ನೋಂದಾಯಿತ ಸಕ್ಕರೆ ಕಾರಖಾನೆಗಳಿದ್ದು,ಇವುಗಳ ಪೈಕಿ ೬೫ ಸಕ್ಕರೆ ಕಾರಖಾನೆಗಳು ಕಾರ್ಯನಿರತವಾಗಿವೆ. ೧೮ ಸ್ಥಗಿತಗೊಂಡಿದ್ದು, ೦೫ ಸಮಾಪನೆಗೊಂಡಿವೆ ಎಂದರು.ಕಾರ್ಯನಿರತರಾಗಿರುವ ೬೫ ಸಕ್ಕರೆ ಕಾರಖಾನೆಗಳಲ್ಲಿ ೫೩ ಸಕ್ಕರೆ ಕಾರಖಾನೆಗಳಲ್ಲಿ ಸಹ ವಿದ್ಯುತ್ ಘಟಕಗಳನ್ನು ಹೊಂದಿದ್ದು,ಇವುಗಳ ಒಟ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯ ೧೫೧೬.೨೨ ಮೆಘಾವ್ಯಾಟ್‌ಗಳಾಗಿವೆ ಎಂದು ಅವರು ವಿವರಿಸಿದ ಸಚಿವ ಮುನೇನಕೊಪ್ಪ ಅವರು ೨೦೧೬-೧೭ನೇ ಸಾಲಿನಿಂದ ೨೦೨೦-೨೧ರವರೆಗೆ ೧೭೪೮೨೮೮೫೪ ಮೆಟ್ರಿಕ್ ಟನ್ ಕಬ್ಬು ಅರೆಯಲಾಗಿದ್ದು, ೧೪೦೩೫೨೦೧ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದಿಸಲಾಗಿದೆ ಎಂದು ಅವರು ತಿಳಿಸಿದರು.


Leave a Reply