Belagavi

ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಿಂದ ಲಿಂಗಾನುಪಾತದಲ್ಲಿ ಸುಧಾರಣೆ: –ಸಚಿವ ಆಚಾರ ಹಾಲಪ್ಪ


ಬೆಳಗಾವಿ ಸುವರ್ಣಸೌಧ,ಡಿ.೨೧: ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯ ಜಾಗೃತಿಯ ಪರಿಣಾಮ ರಾಜ್ಯದಲ್ಲಿ ಲಿಂಗಾನುಪಾತದಲ್ಲಿ ಸುಧಾರಣೆಯಾಗಿರುವ ಮಾಹಿತಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಆಚಾರ ಹಾಲಪ್ಪ ಅವರು ತಿಳಿಸಿದರು.
ಸದಸ್ಯ ಎನ್.ರವಿಕುಮಾರ್ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು ವಿಜಯಪುರ ಜಿಲ್ಲೆಯಲ್ಲಿ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು ನಡೆಸಿದ ಅಧ್ಯಯನದ ವರದಿ ಅನುಸಾರ ೨೦೧೫-೧೬ರಲ್ಲಿ ೧ ಸಾವಿರಕ್ಕೆ ೯೪೧ ಇದ್ದ ಲಿಂಗಾನುಪಾತವು ೨೦೧೭-೧೮ಕ್ಕೆ ೯೮೪ಕ್ಕೇರಿದೆ ಎಂದರು.
ಈ ಯೋಜನೆಯು ಸಂಪೂರ್ಣ ಕೇಂದ್ರ ಸರಕಾರದ ಯೋಜನೆಯಾಗಿದ್ದು,೨೦೧೫ ಜ.೨೨ರಿಂದ ಜಾರಿಗೆ ಬಂದಿದ್ದು, ಇದರಡಿ ಲಿಂಗಪಕ್ಷಪಾತ,ಲಿAಗ ಆಯ್ಕೆ, ಹೆಣ್ಮಕ್ಕಳ ಉಳಿವು ಮತ್ತು ರಕ್ಷಣೆ ಹಾಗೂ ಹೆಣ್ಮಕ್ಕಳಿಗೆ ಶಿಕ್ಷಣವನ್ನು ಖಾತ್ರಿಗೊಳಿಸುವ ಕುರಿತು ಅರಿವು ಮತ್ತು ಜಾಗೃತಿ ಮೂಡಿಸಲಾಗುತ್ತಿದೆ. ಇದಕ್ಕೆ ರಾಜ್ಯ ಸರಕಾರದಿಂದಲೂ ಮುಂದಿನ ದಿನಗಳಲ್ಲಿ ಅಗತ್ಯ ಅನುದಾನ ಒದಗಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ರಾಜ್ಯದಲ್ಲಿ ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿ, ದಕ್ಷಿಣ ಕನ್ನಡ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು.
ಸದಸ್ಯ ರವಿಕುಮಾರ ಅವರು ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಿಂದ ಲಿಂಗಾನುಪಾತದಲ್ಲಿ ಸುಧಾರಣೆಯಾಗುತ್ತಿದ್ದು,ವಿಶೇಷ ಒತ್ತು ನೀಡುವಂತೆ ಕೋರಿದರು.


Leave a Reply