Belagavi

ಅಧಿವೇಶನಕ್ಕೆ ಪತ್ರಕರ ನಿರ್ಬಂಧ


ಬೆಳಗಾವಿ: ಸುವರ್ಣ ಸೌಧದಲ್ಲಿ ಮತಾಂತರ ನಿಷೇಧ ಕಾಯ್ದೆ  ಚರ್ಚೆ ಹಿನ್ನೆಲೆಯಲ್ಲಿ ದೃಶ್ಯ ಮಾಧ್ಯಮದ ವರದಿಗಾರರನ್ನು ವಿಧಾನಸೌಧದ ಒಳಗಡೆಗೆ ಹೋಗದಂತೆ ತಡೆದು ನಿಲ್ಲಿಸಿದ ಘಟನೆ ನಡೆದಿದೆ

ಎಂದಿನಂತೆ ಇಂದು ಬೆಳಗ್ಗೆ ಟಿವಿ ಮಾಧ್ಯಮದವರು ಒಳಪ್ರವೇಶಿಸಲು ಯತ್ನಿಸಿದಾಗ ಅವರನ್ನು  ಪೊಲೀಸರು ತಡೆದರು. ಪ್ರವೇಶ ನಿರ್ಬಂಧಿಸಿರುವುದನ್ನು ವಿರೋಧಿಸಿ ಟಿವಿ  ಮಾದ್ಯಮಗಳ ವರದಿಗಾರರು,  ಕ್ಯಾಮೆರಾಮೆನ್‌ ಗಳು ಸುವರ್ಣ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು. ಈ ಬಳಿಕ ಟಿವಿ ಮಾಧ್ಯಮದವರಿಗೆ ಸೌಧದೊಳಗೆ  ಪ್ರವೇಶ ನೀಡುವಂತೆ ಸ್ಪೀಕರ್‌ ಕಾಗೇರಿ ಅವರು ಸೂಚನೆ ನೀಡಿದರು. ಈ ಬಳಿಕ ಮಾಧ್ಯಮದವರಿಗೆ ಪ್ರವೇಶ ನೀಡಲಾಗಿದೆ.


Leave a Reply