Belagavi

ರಾಣಿ‌ ಚನ್ನಮ್ಮ‌ ವಿವಿಯ ವಿಸಿ ನಡೆಗೆ ವ್ಯಾಪಕ ಆಕ್ರೋಶ


ಬೆಳಗಾವಿ : ರಾಣಿಚನ್ನಮ್ಮ ವಿಶ್ವವಿದ್ಯಾಲಯ‌ ಸ್ಥಾಪನೆಗೆ ವಿವಿಧ ಕನ್ನಡ ಸಂಘಟನೆಗಳು, ಉತ್ತರ ಕರ್ನಾಟಕದ ಮಠಾಧೀಶರ ನಿರಂತರ ಹೋರಾಟದ ಫಲವೇ ಕಾರಣ.‌ ಆದರೆ ವಿವಿಯ ಸ್ವಂತ ಕಟ್ಟಡದ ಶಿಲಾನ್ಯಾಸ ಸಮಾರಂಭದಲ್ಲಿ ಹೋರಾಟಗಾರರು, ಮಠಾಧೀಶರಿಗೆ ವಿಶ್ವವಿದ್ಯಾಲಯ‌ ಅವಮಾನ ಮಾಡಿರುವುದಕ್ಕೆ ಆಕ್ರೋಶಕ್ಕೆ ಕಾರಣವಾಗಿದೆ.

ಬೆಳಗಾವಿಯಲ್ಲಿ ರಾಣಿ ಚನ್ನಮ್ಮ‌ ವಿಶ್ವವಿದ್ಯಾಲಯ‌ ನಿರ್ಮಾಣ ಮಾಡಲು ಕಾರಣಿಕರ್ತರಾಗಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ಆದರೆ ಹೋರಾಟದ ಇತಿಹಾಸದ, ವಿವಿ‌ ಸ್ಥಾಪನೆಗೆ ಕಾರಣರಾದವರ ಹೆಸರನ್ನು ಬಿಟ್ಟಿರುವ ವಿವಿ ಕುಲಪತಿ ವಿರುದ್ಧ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬೆಳಗಾವಿಯಲ್ಲಿ ರಾಣಿ ಚನ್ನಮ್ಮ ಸ್ಥಾಪನೆ ಮಾಡಲು ಈ‌ ಭಾಗದ ಮಠಾಧೀಶರು, ಹೋರಾಟಗಾರರ ಹೆಸರನ್ನು ಸೌಜನ್ಯಕ್ಕಾದರೂ ಆಹ್ವಾನ ಮಾಡದೆ ಇರುವ ವಿವಿಯ ಕುಲಪತಿಯ ವಿರುದ್ಧ ಅಸಮಾಧಾನ ಹೊರ ಹಾಕುತ್ತಿದ್ದಾರೆ.


Leave a Reply