Belagavi

ಕನ್ನಡ ಪಟ್ಟದೇವರು ಪೂಜ್ಯ ಶ್ರೀ.ಮ.ಘ.ಚ.ಡಾ.ಚನ್ನಬಸವ ಪಟ್ಟದೇವರ ೧೩೨ನೇ ಜಯಂತಿ ಕಾರ್ಯಕ್ರಮ


ಬೆಳಗಾವಿ:೨೨: ಬುಧವಾರ ದಿ:೨೨/೧೨/೨೦೨೧, ಸಮಯ ಮುಂಜಾನೆ:೧೦:೦೦ ಗಂಟೆಗೆ ಸ್ಥಳ: ಕನ್ನಡ ಭವನ ನೆಹರು ನಗರ ಬೆಳಗಾವಿಯಲ್ಲಿ, ಕನ್ನಡ ಪಟ್ಟದೇವರು ಪೂಜ್ಯ ಶ್ರೀ.ಮ.ಘ.ಚ.ಡಾ.ಚನ್ನಬಸವ ಪಟ್ಟದೇವರ ಮಹಾಸ್ವಾಮೀಜಿಯವರ ೧೩೨ನೇ ಜಯಂತಿ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಜಿಲ್ಲೆಯ ಹಿರಿಯ ಸಾಹಿತಿಗಳಾದ ಶ್ರೀಮತಿ ಸುನಂದಾ ಎಮ್ಮಿ ಅವರು ಮಾತನಾಡುತ್ತಾ, ೧೦೯ ವರ್ಷ ಬದುಕಿನ ಡಾ.ಚನ್ನಬಸವ ಸ್ವಾಮೀಜಿಯವರ ಸಮಗ್ರ ಜೀವನ ಯಾತ್ರೆಯ ಬಗ್ಗೆ ಬಹಳ ವಿವರವಾಗಿ ಹೇಳುತ್ತಾ, ಶ್ರೀಗಳು ಕನ್ನಡ ಭಾಷೆಯ ಬೆಳವಣಿಗೆಯ ಬಗ್ಗೆ ಎದುರಿಸಿದ ಸವಾಲುಗಳು ಹಾಗೂ ಭಾಷಾ ಬೆಳವಣಿಗೆಗೆ ಅವರು ಸಲ್ಲಿಸಿದ ಕೊಡುಗೆಗಳನ್ನು ಸಾಹಿತ್ಯಿಕವಾಗಿ ವಿವರಿಸಿದರು.
ಅಧ್ಯಕ್ಷತೆಯನ್ನು ವಹಿಸಿದ ಕಸಾಪ ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಗಲಾ ಶ್ರೀ ಮೆಟಗುಡ್ಡ ಅವರು ಭಾಲ್ಕಿಯಲ್ಲಿ, ತಾವು ಕಂಡ ಶ್ರೀಮಠದ ಸೇವಾ ಸತ್ಕಾರವನ್ನು ಮನದುಂಬಿ ಸಭಿಕರಿಗೆಲ್ಲರಿಗೂ ತಿಳಿಯುವ ರೀತಿಯಲ್ಲಿ ಪ್ರತ್ಯಕ್ಷ ದರ್ಶನದ ರೀತಿ ಅನುಭವವನ್ನು ಚರ್ಚಿಸಿದರು.
ಮುಖ್ಯ ಅತಿಥಿಗಳಾಗಿದ್ದ ಬೆಳಗಾವಿ ಜಿಲ್ಲೆ ಮಾಜಿ ಕಸಾಪ ಅಧ್ಯಕ್ಷರಾದ ಶ್ರೀ ಮೋಹನಗೌಡ ಪಾಟೀಲ ಅವರು ಕನ್ನಡ ಭಾಷಾ ಅಭಿವೃದ್ಧಿಗಾಗಿ, ಶ್ರೀಗಳ ಕೊಡುಗೆಯ ಮಹತ್ವವನ್ನು ಮತ್ತು ಇಂದಿನ ಕಾಲದಲ್ಲಿ ಕನ್ನಡಿಗರಾದ ನಾವೆಲ್ಲ ಮಾಡಬೇಕಾದ ಅಗತ್ಯ ಕರ್ತವ್ಯಗಳ ಬಗ್ಗೆ ಸೂಚ್ಯವಾಗಿ ತಿಳಿಸಿದರು.
ಆರಂಭದಲ್ಲಿ ಶ್ರೀ.ವೀ.ಮ.ಅಂಗಡಿ ಅವರು ಸರ್ವರನ್ನು ಸ್ವಾಗತಿಸಿದರು. ಶ್ರೀ ಎಮ್ ವಾಯ್ ಮೆಣಸಿನಕಾಯಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರತಿಭಾ ಕಳ್ಳಿಮಠ ಅವರು ನಾಡಗೀತೆ ಮತ್ತು ಪ್ರಾರ್ಥನೆಯನ್ನು ಮಾಡಿದರು. ಶ್ರೀ ಆರ್ ಎಸ್ ಚಾಪಗಾಂವಿ ಅವರು ಸರ್ವರಿಗೂ ವಂದನೆಯನ್ನು ಸಲ್ಲಿಸಿದರು.
ಭಾರತಿ ಮಠದ, ಎಸ್ ಎಸ್ ಪಾಟೀಲ, ಮಹಾದೇವಿ ಪಾಟೀಲ, ವಾಸಂತಿ ಮಳೇದ, ಅಕ್ಕಮಹಾದೇವಿ ತೆಗ್ಗಿ, ಸಿ ಎಂ ಬೂದಿಹಾಳ, ಶೈಲಜಾ ಬಿಂಗೆ, ಜಯಶೀಲಾ ಬ್ಯಾಕೋಡ, ಬಸವರಾಜ ಬೆಳಗಾವಿ, ವೀರಭದ್ರ ಸಂಗಡಿ ಮುಂತಾದ ಹಿರಿಯ ಸಾಹಿತಿಗಳು ಉಪಸ್ಥಿತರಿದ್ದರು.


Leave a Reply