Belagavi

ಬೆಳಗಾವಿ ಕೇಂದ್ರ ಬಸ ನಿಲ್ದಾಣ ಕಾಮಗಾರಿ ವಿಳಂಬದ ಕುರಿತು ವಿಧಾನ ಸಭೆಯಲ್ಲಿ ಧ್ವನಿ ಎತ್ತಿದ ಶಾಸಕ ಅನಿಲ ಬೆನಕೆ


ಬೆಳಗಾವಿ: ದಿÀ ೨೨ ರಂದು ಬೆಳಗಾವಿ ನಗರದ ಹೃದಯ ಭಾಗ ಆಗಿರುವ ಕೇಂದ್ರ ಬಸ ನಿಲ್ದಾಣದ ಕಾಮಗಿರಿಯು ವಿಳಂಬ ಆಗಿರುವುದಕ್ಕೆ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಅವರು ವಿಧಾನ ಸಭೆಯಲ್ಲಿ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.
ವಿಧಾನ ಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಸರ್ಕಾರಕ್ಕೆ ಪ್ರಶ್ನೆ ಕೇಳಿದ ಅವರು, ಬೆಳಗಾವಿಯ ಕೇಂದ್ರ ಬಸ ನಿಲ್ದಾಣದ ಕಾಮಗಿರಿಯು ೨೦೧೭ ನೇ ಸಾಲಿನಲ್ಲಿ ಪ್ರಾರಂಭ ಆಗಿದ್ದು. ೨೦೧೯ ರ ವೇಳೆಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕಿತ್ತು. ಆದರೆ ಎರಡು ವರ್ಷ ಕಾಮಗಾರಿ ತಡ ಆಗಿರಿವುದು ಯಾಕೆ ಎಂದು ಪ್ರಶ್ನೆ ಕೇಳಿದರು.
ಇದಕ್ಕೆ ಸದನದಲ್ಲಿ ಉತ್ತರಿಸಿದ ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು, ೨೦೧೯ ರಲ್ಲಿ ಕರೋನಾದಿಂದ ಉಂಟಾದ ಲಾಕಡೌನ ಹಾಗೂ ಸತತವಾಗಿ ಎರಡು ವರ್ಷ ಸುರಿದ ಮಳೆಗೆ ಕಾಮಗಾರಿ ಪೂರ್ಣಗೊಂಡಿಲ್ಲ. ಲಾಲಡೌನ ವೇಳೆ ಯಾವುದು ಚಟುವಟಿಕೆಗಳಿಗೆ ಅವಕಾಶ ಇಲ್ಲದ ಕಾರಣ ಕಾಮಗಾರಿ ಎರಡು ವರ್ಷ ತಡವಾಗಿದೆ ಎಂದು ಉತ್ತರಿಸಿದರು.
ಬಳಿಕ ಶಾಸಕ ಅನಿಲ ಬೆನಕೆ ಅವರು, ಕಾಮಗಾರಿ ಎಷ್ಟು ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ ಎಂಬುದನ್ನು ಕಾಮಗಾರಿ ಪರಿಶೀಲಿಸಿ ಆಶ್ವಾಸನೆ ನೀಡಬೇಕು ಎಂದು ಅವರು ವಿಧಾನ ಸಭೆಯಲ್ಲಿ ಆಗ್ರಹಿಸಿದರು.


Leave a Reply