Belagavi

ಕಾಂಗ್ರೆಸ್ ಸೇರ್ಪಡೆಯಾದ ಜೆಡಿಎಸ್ ಕಾರ್ಯಕರ್ತರು


ಬೆಳಗಾವಿ: ಶಾಸಕಿ ಡಾ ಅಂಜಲಿತಾಯಿ ಹೇಮಂತ್ ನಿಂಬಾಳ್ಕರ್ ಅವರ ನೇತೃತ್ವದಲ್ಲಿ ಖಾನಾಪೂರ ತಾಲೂಕಿನ ಜೆಡಿಎಸ್ ಮುಖಂಡರ ಹಾಗೂ ಕಾರ್ಯಕರ್ತರು ಇಂದು ಕೆಪಿಸಿಸಿ ಅಧ್ಯಕ್ಷರು ಶ್ರೀ ಡಿ ಕೆ ಶಿವಕುಮಾರ್ ರವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ..

ಖಾನಾಪುರ ತಾಲೂಕಿನ ಅಂಜುಮನ್-ಎ-ಇಸ್ಲಾಂ ಕಮಿಟಿ ಅಧ್ಯಕ್ಷರು ಹಾಗೂ ಸದಸ್ಯರು, ಕಾರ್ಯಕರ್ತರು ಹಾಗೂ ಜೆಡಿಎಸ್ ಪಕ್ಷದ ಮುಖಂಡರುಗಳು ಜೆಡಿಎಸ್  ಪಕ್ಷವನ್ನು ತೊರೆದು ಖಾನಾಪುರ ಶಾಸಕಿ ಡಾ. ಅಂಜಲಿತಾಯಿ ಹೇಮಂತ್ ನಿಂಬಾಳ್ಕರ್ ಅವರ ನೇತೃತ್ವದಲ್ಲಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಶ್ರೀ ಡಿ ಕೆ ಶಿವಕುಮಾರ, ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ಸಲೀಂ ಅಹಮದ್, ಕಾಂಗ್ರೆಸ್ ಪಕ್ಷದ ಶಾಸಕರಾದ ನಾಸೀರ್ ಅಹಮದ್, ಲಕ್ಷ್ಮಿ ಹೆಬ್ಬಾಳ್ಕರ್, ಖನಿಜ್ ಫಾತಿಮಾ, ರಹೀಮ್ ಖಾನ್, ರಿಜ್ವಾನ್ ಅರ್ಷದ್, ಚೆನ್ನರಾಜ್ ಹಟ್ಟಿಹೊಳಿ, ಮಾಜಿ ಶಾಸಕರಾದ ಎ ಬಿ ಪಾಟೀಲ, ಫಿರೋಜ್ ಸೇಠ್ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಜಬ್ಬಾರ್ ಸಾಹೇಬ್ ಇವರೆಲ್ಲರ ಸಮ್ಮುಖದಲ್ಲಿ ಇಂದು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಕೆಳಕಾಣಿಸಿದ ಮುಖಂಡರುಗಳು ಸೇರ್ಪಡೆಯಾದರು.

ರಿಯಾಜ್ ಅಹ್ಮದ್  ಪಟೇಲ್, ಕಾಶೀಮ್ ಹಟ್ಟಿಹೋಳಿ, ಪಾಂಡುರಂಗ ಮಿಟಗಾರ್, ಅಲ್ತಾಫ್ ಬಸರೀಕಟ್ಟಿ, ಅಲೇಕ್ಸಾಂಡರ್ ರಾಜು ಡಿಸಿಲ್ವಾ, ಅಶ್ಫಾಕ್ ಪಟೇಲ್, ಭೀಮಪ್ಪ ಅಂಬೋಜಿ, ಮುಬಾರಕ್ ಕಿತ್ತೂರು,  ಜಾಕೀರ್ ರಾಯಚೂರ, ನಿಸಾರ್ ಬಾಗವಾನ, ಮಲ್ಲಪ್ಪ ಮೊರಬದ, ಅಜೀಜ್ ಗಿರಿಯಾಲ, ಬಾಬಾಸಾಹೇಬ್ ನಂದಗಡ, ಆರಿಫ್ ಪಟೇಲ್, ಅಬುತಲಿಬ್ ತಿಗಡಿ, ಎಮ್. ಎಮ್ ಸಾಹುಕಾರ, ಮುಬಾರಕ್ ಚಿಕ್ಕೋಡಿ ಹಾಗೂ ನೂರಾರು ಮುಖಂಡರುಗಳು ಕಾಂಗ್ರೆಸ್ ಪಕ್ಷದ ಶಾಲು ಹಾಕಿಕೊಂಡು, ಧ್ವಜ ಹಿಡಿದು ಸೇರ್ಪಡೆಯಾದರು.


Leave a Reply