Belagavi

ಯುಕೆಪಿ ಭೂಸ್ವಾಧೀನ, ಪುನರ್ ವಸತಿ/ಪುನರ್ ನಿರ್ಮಾಣಕ್ಕೆ ೯೭೦ ಕೋಟಿ ರೂ.:ಸಚಿವ ಗೋವಿಂದ ಕಾರಜೋಳ


ಬೆಳಗಾವಿ ಸುವರ್ಣಸೌಧ,ಡಿ.೨೩.: ಕೃಷ್ಣ ಮೇಲ್ದಂಡೆ ಯೋಜನೆಯ ಭೂಸ್ವಾಧೀನ ಹಾಗೂ ಪುನರ್ ವಸತಿ ಹಾಗೂ ಪುನರ್ ನಿರ್ಮಾಣಕ್ಕೆ ಪ್ರಸ್ತುತ ಸಾಲಿನ ಬಜೆಟ್‌ನಲ್ಲಿ ೯೭೦ ಕೋಟಿ ರೂ. ಪರಿಷ್ಕೃತ ಅನುದಾನ ಒದಗಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಪರಿಷತ್‌ನಲ್ಲಿ ತಿಳಿಸಿದರು.
ಪರಿಷತ್‌ನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಪ್ರಕಾಶ ರಾಠೋಡ ಅವರ ಪ್ರಶ್ನೆಗೆ ಉತ್ತರಿಸಿದರು.
ರಾಷ್ಟಿçÃಯ ಯೋಜನೆ ಪರಿಗಣನೆಗೆ ಕೇಂದ್ರ ಸರಕಾರದ ಮಾರ್ಗಸೂಚಿ ಅನ್ವಯ ಯೋಜನೆಯ ಪ್ರಸ್ತಾವನೆಗೆ ಸಕ್ಷಮ ಪ್ರಾಧಿಕಾರಿಗಳ ಅಗತ್ಯ ತಿರುವಳಿಗಳು ಮತ್ತು ಕೃಷ್ಣಾ ನ್ಯಾಯಾಧೀಕರಣ-೨ರ ಗೆಜೆಟ್ ಅಧಿಸೂಚನೆ ಅವಶ್ಯಕತೆವಿರುತ್ತದೆ. ಯುಕೆಪಿ ಹಂತ-೩ರ ಯೋಜನೆಗಾಗಿ ಕೃಷ್ಣಾ ನ್ಯಾಯಾಧೀಕರಣ-೨ರ ತೀರ್ಪಿನಡಿ ೧೩೦ ಟಿಎಂಸಿ ನೀರಿನ ಹಂಚಿಕೆ ಆಗಿದ್ದು, ಈ ನೀರಿನ ಬಳಕೆಯು ಕೃಷ್ಣಾ ನ್ಯಾಯಾಧೀಕರಣ-೨ರ ತೀರ್ಪಿನ ಗೆಜೆಟ್ ಅಧಿಸೂಚನೆಗೆ ಒಳಪಟ್ಟಿರುತ್ತದೆ. ಈ ನ್ಯಾಯಾಧೀಕರಣದ ಅಂತಿಮ ತೀರ್ಪು ಇನ್ನೂ ಕೇಂದ್ರದಿAದ ಗೆಜೆಟ್ ಅಧಿಸೂಚನೆ ಆಗಬೇಕಿರುತ್ತದೆ ಎಂದು ಅವರು ವಿವರಿಸಿದರು.
ಗೆಜೆಟ್ ಪ್ರಕಟಣೆ ಸಂಬAಧ ಸರ್ವೋಚ್ಛ ನ್ಯಾಯಾಲಯಕ್ಕೆ ಅನುಮತಿ ಕೋರಿ ಸೂಕ್ತ ಅಫಿಡಿವಿಟ್ ಸಲ್ಲಿಸಲು ಕೇಂದ್ರ ಸರಕಾರವನ್ನು ಕೋರಲಾಗಿದೆ. ಕೇಂದ್ರ ಸರಕಾರದ ಅಧಿಸೂಚನೆ ಬಾಕಿ ಇರಿಸಿ ಯುಕೆಪಿ ಹಂತ-೩ರ ರೂ.೫೧,೧೪೮.೯೪ ಕೋಟಿ ಪರಿಷ್ಕೃತ ಅಂದಾಜು ಮೊತ್ತದ ವಿವರವಾದ ಯೋಜನಾ ವರದಿಯನ್ನು ಕೇಂದ್ರ ಜಲ ಆಯೋಗಕ್ಕೆ ಅಗತ್ಯ ಪೂರ್ವಭಾವಿ ಪರಿಶೀಲನೆಗಾಗಿ ಸಲ್ಲಿಸಲಾಗಿದ್ದು, ಈ ಕಾರ್ಯವನ್ನು ಕೈಗೆತ್ತಿಕೊಂಡು ಯೋಜನೆ ಪೂರ್ಣಗೊಳಿಸಲು ಅನುವಾಗುವಂತೆ ರಾಷ್ಟಿçÃಯ ಯೋಜನೆ ಎಂದು ಘೋಷಿಸಲು ಈಗಾಗಲೇ ಕೇಂದ್ರವನ್ನು ಕೋರಲಾಗಿದೆ ಎಂದು ಅವರು ತಿಳಿಸಿದರು.


Leave a Reply