Belagavi

೧೨೦೦ ಕೋಟಿ ರೂ.ವೆಚ್ಚದಲ್ಲಿ ೧೨೮ ಕಿ.ಮೀ ಕಿರುಕಾಲುವೆಗಳ ವಿಸ್ತಾರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ


ಬೆಳಗಾವಿ ಸುವರ್ಣಸೌಧ,ಡಿ.೨೩: ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ೧೨೦೦ ಕೋಟಿ ರೂ.ವೆಚ್ಚದಲ್ಲಿ ೧೨೮ಕಿ.ಮೀ ಕಿರುಕಾಲುವೆಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದ್ದು,ಇದೇ ವರ್ಷ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪರಿಷತ್‌ನಲ್ಲಿ ತಿಳಿಸಿದರು.
ವಿಧಾನಪರಿಷತ್‌ನಲ್ಲಿ ಸದಸ್ಯ ಪಿ.ಆರ್.ರಮೇಶ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ರಾಜಕಾಲುವೆಗಳ ಪುನರ್ ನಿರ್ಮಾಣಕ್ಕೆ ಸಂಬAಧಿಸಿದAತೆ ವಿಶೇಷವಾಗಿ ಕಿರುಕಾಲುವೆಗಳ ಅಭಿವೃದ್ಧಿಗೆ ಸಂಬAಧಿಸಿದAತೆ ವಿಸ್ತೃತ ಯೋಜನಾ ವರದಿ ಸಿದ್ದಪಡಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ದೊಡ್ಡಮಟ್ಟದಲ್ಲಿ ಮಳೆಯಾದ್ರೂ ಸಹ ಹೊರಗಡೆ ನೀರು ಹರಿದುಹೋಗದಂತೆ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ವಿವರಿಸಿದರು.
ರಾಜಕಾಲುವೆಗಳು ಮತ್ತು ಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ಅನೇಕ ಕಡೆ ಬಹಳಷ್ಟು ಪ್ರಭಾವಿಗಳು ದಾಖಲೆಗಳನ್ನು ಬದಲಾವಣೆ ಮಾಡಿ ಮಾರಾಟ ಮಾಡಿಬಿಟ್ಟಿದ್ದಾರೆ ಎಂದು ಸಿಎಂ ಅವರು ತಿಳಿಸಿದರು.
ದೊಡ್ಡಮಟ್ಟದಲ್ಲಿ ಬೆಳೆಯುತ್ತಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತ್ಯಾಜ್ಯವಿಲೇವಾರಿಯಂತೆ ರಾಜಕಾಲುವೆ ನಿರ್ಮಾಣ ಮತ್ತು ನಿರ್ವಹಣೆಯ ಸವಾಲು ಸಹ ನಮ್ಮ ಮುಂದಿದೆ ಎಂದು ಹೇಳಿದ ಸಿಎಂ ಬೊಮ್ಮಾಯಿ ಅವರು ಪ್ರಥಮ ಹಂತದ ಕಾಲುವೆಗಳು-೩೪೮.೩೨೫ಕಿ.ಮೀ ಮತ್ತು ದ್ವಿತೀಯ ಕಾಲುವೆಗಳು-೪೯೩.೪೪ ಕಿ.ಮೀ ಸೇರಿದಂತೆ ಒಟ್ಟು ೮೪೨ಕಿ.ಮೀ ಗುರುತಿಸಲಾಗಿದೆ. ಅದರಲ್ಲಿ ೪೨೮ ಕಿ.ಮೀ ಕಾಲುವೆ ಪೂರ್ಣಗೊಂಡಿದ್ದು,೪೧೩.೭೭ಕಿ.ಮೀ ಕಾಲುವೆ ನಿರ್ಮಾಣ ಬಾಕಿ ಇದ್ದು;ಇದಕ್ಕೆ ೪೬೭೦.೪೨ ಕೋಟಿ ರೂ.ಅನುದಾನ ಬೇಕಾಗಿದೆ ಎಂದ


Leave a Reply