Belagavi

ಕಾರಂಜಾ ಡ್ಯಾಂ ಉದ್ಯಾನವನ ನಿರ್ಮಾಣ ಪರಿಶೀಲನಾ ಹಂತದಲ್ಲಿ: ಸಚಿವ ಕಾರಜೋಳ


ಬೆಳಗಾವಿ ಸುವರ್ಣಸೌಧ,ಡಿ.೨೩: ಕಾರಂಜಾ ಅಣೆಕಟ್ಟಿನ ಕೆಳಗಡೆ ಇರುವ ಜಾಗದಲ್ಲಿ ೩೦.೬೮ ಕೋಟಿ ರೂ.ವೆಚ್ಚದಲ್ಲಿ ಉನ್ನತ ದರ್ಜೆಯ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವ ಮೊತ್ತದ ಪ್ರಸ್ತಾವನೆಯು ಕರ್ನಾಟಕ ನೀರಾವರಿ ನಿಗಮದ ಪರಿಶೀಲನಾ ಹಂತದಲ್ಲಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಪರಿಷತ್‌ನಲ್ಲಿ ತಿಳಿಸಿದರು.
ಸದಸ್ಯ ಅರವಿಂದ ಕುಮಾರ್ ಅರಳಿ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು ಕಾರಂಜಾ ಅಣೆಕಟ್ಟಿನ ಭದ್ರತೆಗೊಸ್ಕರ ಕಾರಂಜಾ ಅಣೆಕಟ್ಟಿನ ಆವರಣದಲ್ಲಿನ ಚಲನವಲನ/ಚಟುವಟಿಕೆಗಳನ್ನು ಅರಿಯಲು ಮತ್ತು ಆವರಣದಲ್ಲಿ ಖಾಲಿ ಇದ್ದ ಉದ್ಯಾನವನ ಮತ್ತು ಅಣೆಕಟ್ಟಿನ ಒಡ್ಡಿನ ಪ್ರದೇಶವನ್ನು ಬೆಳಗಿಸಲು ಏರಿಯಾ ಉದ್ದಕ್ಕೂ ಎಲ್‌ಇಡಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ ಮತ್ತು ಚಲನವಲನಗಳ ಮೇಲೆ ನಿಗಾಇಡಲು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಡ್ಯಾಂನ ಪೊಲೀಸ್ ಭದ್ರತೆಗಾಗಿ ಈಗಾಗಲೇ ಪೊಲೀಸ್ ಇಲಾಖೆಯ ಪೊಲೀಸ್ ಮಹಾನಿರ್ದೇಶಕರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ವಿವರಿಸಿದರು.


Leave a Reply