Koppal

ಶೈಕ್ಷಣಿಕ ಸ್ಪರ್ಧಾತ್ಮಕ ಯುಗದಲ್ಲಿ ಇಂತಹ ಪರೀಕ್ಷೆಗಳು ವಿದ್ಯಾರ್ಥಿಗಳಿಗೆ ಅತ್ಯಗತ್ಯ : ಅರವಿಂದ್ ಬಿ ಜಮಖಂಡಿ


ಗಂಗಾವತಿ: ಭಾರತೀಯ ಪ್ರಖ್ಯಾತಿ ಗಣಿತ ಶಾಸ್ತ್ರಜ್ಞರಾದ ಶ್ರೀನಿವಾಸ್ ರಾಮಾನುಜನ್ನರ ಹುಟ್ಟುಹಬ್ಬ  ಹಾಗೂ ರಾಷ್ಟ್ರೀಯ ಗಣಿತ ದಿನಾಚರಣೆ ಅಂಗವಾಗಿ “ಮ್ಯಾಥ್ಸ್ ಐಕಾನ್ ” ಪರೀಕ್ಷೆಯಲ್ಲಿ  ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಹಾಗೂ ಹಿರಿಯ ಗಣಿತ ಶಿಕ್ಷಕರಿಗೆ ಸನ್ಮಾನ ಸಮಾರೋಪ ಕಾರ್ಯಕ್ರಮ ಬುಧವಾರದಂದು ಗಂಗಾವತಿ ಕೊಪ್ಪಳ ರಸ್ತೆಯಲ್ಲಿರುವ  ಶ್ರೀ ವೆಂಕಟೇಶ್ವರ ಪಿಯು ಕಾಲೇಜಿನಲ್ಲಿ  ಜರುಗಿತು.

ಕಾರ್ಯಕ್ರಮವನ್ನು ಪೌರಾಯುಕ್ತರಾದ ಅರವಿಂದ್ ಬಿ ಜಮಖಂಡಿ ಉದ್ಘಾಟಿಸಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದ್ದು.ಮೊಬೈಲ್ ಬಳಕೆ ಹೆಚ್ಚಾಗುತ್ತಿದೆ.ಪಾಲಕರು ಇದನ್ನು ಗಂಭೀರವಾಗಿ ಪರಿಗಣಿಸಬೇಕು ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವಹಿಸಬೇಕು.ಶೈಕ್ಷಣಿಕ ಸ್ಪರ್ಧಾತ್ಮಕ ಯುಗದಲ್ಲಿ ಇಂಥ ಪರೀಕ್ಷೆಗಳು ವಿದ್ಯಾರ್ಥಿಗಳಿಗೆ ಅತ್ಯಗತ್ಯವಾಗಿರುತ್ತದೆ. ಪರೀಕ್ಷೆಯ ಭಯವನ್ನು ಹೋಗಲಾಡಿಸಲು ಹತ್ತನೇ ತರಗತಿ ಪರೀಕ್ಷೆಗಳು ಯಾವ ರೀತಿ ಎದುರಿಸಬೇಕು ಹಾಗೂ ನಿಗದಿತ ಸಮಯದಲ್ಲಿ ಪರೀಕ್ಷೆಗಳನ್ನು ಬರೆಯುವುದಕ್ಕೆ ವಿದ್ಯಾರ್ಥಿಗಳಿಗೆ ಇಂತಹ ಪರೀಕ್ಷೆಗಳು ಬರೆದಾಗಲೇ ಮನದಟ್ಟಾಗುತ್ತದೆ. “ಮ್ಯಾಥ್ಸ್ ಐಕಾನ್ ” ಪರೀಕ್ಷೆಯನ್ನು ಆಯೋಜಿಸಿ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಲು ಮುಂದಾಗಿರುವ. ಶ್ರೀ ವೆಂಕಟೇಶ್ವರ ಪಿಯು ಕಾಲೇಜು ಕಾರ್ಯ ಶ್ಲಾಘನೀಯ ಎಂದರು.

ನಂತರ ಸಂಸ್ಥೆಯ ಅಧ್ಯಕ್ಷರಾದ ರವಿ ಚೈತನ್ಯ ರೆಡ್ಡಿ ಮಾತನಾಡಿ ಉತ್ತಮ ಶಿಕ್ಷಣ ನೀಡುವುದು ಶಿಕ್ಷಣ ಸಂಸ್ಥೆಯ ಹಾಗೂ ಶಿಕ್ಷಕರ ಜವಾಬ್ದಾರಿ ಆದರೆ ಶಿಕ್ಷಣ ಜೀವನಕ್ಕೆ ಎಷ್ಟು ಮುಖ್ಯವಾಗಿದೆ ಎಂಬುದು ವಿದ್ಯಾರ್ಥಿಗಳಿಗೆ ತಿಳಿಸಿಕೊಡುವುದು ಪ್ರತಿಯೊಬ್ಬ ಶಿಕ್ಷಕರ ಜವಾಬ್ದಾರಿ ಯಾಗಿರುತ್ತದೆ. ಸಂಸ್ಥೆಯು ಕುಟುಂಬ ಇದ್ದಂತೆ ಎಲ್ಲರೂ ಒಗ್ಗೂಡಿಕೊಂಡು ನಡೆಸಿಕೊಂಡು ಹೋದರೆ ಸಂಸ್ಥೆಯು ಉನ್ನತ ಸ್ಥಾನದಲ್ಲಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು.

ನಂತರ “ಮ್ಯಾಥ್ಸ್ ಐಕಾನ್ ” ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಪ್ರಥಮ ಬಹುಮಾನ 5000 ರೂ ನಗದು ಚನ್ನಬಸವ ಕೆ ಎಂ,ವಿಶೇಷವಾಗಿ 9 ವಿದ್ಯಾರ್ಥಿಗಳಿಗೆ ಎಕ್ಸಲೆಂಟ್ ಗಣಿತ ಪುಸ್ತಕವನ್ನು ,ಜೀವನ್ ಕುಮಾರ್ y , ತೋಫಿಕ್ ಅಹಮದ್, ಮಂಜುನಾಥ ನಾಯಕ್ , ವಿಶ್ವಾಸ್ ಕೆ , ಅಪೂರ್ವ ಎಂ ಸುರೇಂದ್ರ ಎ ವಿ, ಭೀಮಮ್ಮ , ಸೃಷ್ಟಿ ವಿ, ಸಿಂಧು, ವಿದ್ಯಾರ್ಥಿಗಳಿಗೆ ವಿತರಿಸಿದರು.

ನಂತರ ವಿವಿಧ ಶಾಲೆಗಳ 30 ಜನ ನುರಿತ ಹಿರಿಯ ಗಣಿತ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ  ಡಾಕ್ಟರ್ ಪ್ರವೀಣ್ ಕುಮಾರ್ ಎಸ್ ಹಿರೇಮಠ್ ನಿರ್ದೇಶಕರು.ಸಿ ಸುರೇಂದ್ರ ರೆಡ್ಡಿ ನಿರ್ದೇಶಕರು,ಶ್ರೀ ಕೊಂಡವೀಟಿ ಗಾಂಧಿ ನಿರ್ದೇಶಕರು,ಸದಾನಲ ವಿನೋದ್ ನಿರ್ದೇಶಕರು, ಆನಂದ್ ಅಕ್ಕಿ , ತೇಜಸ್ಸು, ಶ್ರೀಮತಿ ಸರಿತಾ ,ಕಲಾವತಿ, ಹಾಗೂ ಕಾಲೇಜು ಉಪನ್ಯಾಸಕರು ಶಿಕ್ಷಕ ವೃಂದ ಸಿಬ್ಬಂದಿ ವರ್ಗ ಪಾಲಕರು ಉಪಸ್ಥಿತರಿದ್ದರು.

ವರದಿ
(ಹನುಮೇಶ ಬಟಾರಿ ಗಂಗಾವತಿ)


Leave a Reply