Koppal

ಡಿ.೨೭ ರಂದು ಬೆಂಗಳೂರು ಚಲೋ. ಭೋವಿ (ವಡ್ಡರ ) ಬೇಡಿಕೆ ಒತ್ತಾಯಿಸಿ ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟನೆ ಧರಣಿ ಸತ್ಯಾಗ್ರಹ


ಕುಷ್ಟಗಿ:- ಭೋವಿ (ವಡ್ಡರ) ಜನಾಂಗದ ಭೋವಿ ನಿಗಮ ಅಭಿವೃದ್ದಿ ಮಂಡಳಿಗೆ ೨೦೦೦ ಸಾವಿರ ಕೋಟಿ ಹಣವನ್ನು ಬಿಡುಗಡೆ ಮಾಡಬೇಕು ಮತ್ತು ಸದಾಶಿವ ಆಯೋಗ ಜಾರಿಗೆ ಮಾಡಬಾರದು ಪರಿಶಿಷ್ಟ ಜನಾಂಗದವರು ನಾವುಗಳು ಒಂದೆ ತಾಯಿಯ ಮಕ್ಕಳು ಸರಕಾರ ಪರಿಶಿಷ್ಟ ಜನಾಂಗಕ್ಕೆ ಮೀಸಲು ಹೆಚ್ಚಿಗೆ ಮಾಡಬೇಕು ಇಲ್ಲವಾದಲ್ಲಿ ಮುಖ್ಯಮಂತ್ರಿ ಮನೆ ಮುಂದೆ ಇದೇ ಡಿ.೨೭ ರಂದು ಬೆಂಗಳೂರು ಚಲೋ ಹಮ್ಮಿಕೊಂಡು ಧರಣಿ ಸತ್ಯಾಗ್ರಹ ನೆಡೆಸಲಾಗುತ್ತಿದೆ ಎಂದು ಭೋವಿ ಸಮಾಜದ ರಾಜ್ಯ ಉಪಾಧ್ಯಕ್ಷ ಸೂಚಪ್ಪ ಭೋವಿ ಹೇಳಿದರು.

ಇಲ್ಲಿನ ಹಳೇ ಪ್ರವಾಸಿ ಮಂದಿರದಲ್ಲಿ ಸುದ್ದಿ ಗೋಷ್ಠಿ ನೆಡೆಸಿ ಮಾತನಾಡಿದ ಅವರು ಸದಾಶಿವ ಆಯೋಗ ವರದಿಯಿಂದ ಪರಿಶಿಷ್ಟ ಜನಾಂಗಕ್ಕೆ ನಷ್ಟವಾಗುತ್ತದೆ ಕೇವಲ ಒಂದೇ ಜಾತಿಗೆ ಮಾತ್ರ ಸೀಮಿತವಾಗುತ್ತದೆ ಹಾಗೂ ಒಂದೇ ಜನಾಂಗಕ್ಕೆ ಮಾತ್ರ ಅನುಕೂಲವಾಗುತ್ತದೆ ಆದ್ದರಿಂದ ಸರಕಾರ ಸದಾಶಿವ ಆಯೋಗವನ್ನು ನಿಲ್ಲಿಸಬೇಕು ಅದರ ಬದಲು ಮೀಸಲಾತಿಲನ್ನು ಹೆಚ್ಚಿಸಬೇಕು ಎಂದರು.

ಭೋವಿ ಜನಾಂಗದ ಸಮಾಜವು ರಾಜ್ಯದಲ್ಲಿ ಹೊಲ ಮನೆ ಇಲ್ಲದವರು ಬರಿ ದುಡಿದುಕೊಂಡು ತಿನ್ನಬೇಕು. ನಾವುಗಳು ಕಲ್ಲು ಬಂಡೆಗಳನ್ನು ಹೊಡೆದು ಬದುಕುವವರು ಆದ್ದರಿಂದ ಸರಕಾರ ಕಲ್ಲು ಗುಡ್ಡವನ್ನು ಹೊಡೆಯಲು ಅನುಮತಿ ನೀಡಬೇಕು ನಮ್ಮ ಜನಾಂಗದ ಒಳಿತಿಗಾಗಿ ಸರಕಾರ ಭೋವಿ ಸಮಾಜದ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಭೋವಿ ಸಮಾಜದ ತಾಲೂಕು ಗೌರವ್ವ ಅಧ್ಯಕ್ಷ ವೆಂಕಪ್ಪ ಹಿರೇಮನಿ, ಬಸವರಾಜ ಹೊಸಮನಿ, ಗೋವಿಂದ ವಡ್ಡರ, ಹನಮೇಶ ಬಂಡಿ ವಡ್ಡರ, ನಾಗರಾಜ ಭೋವಿ, ಲಕ್ಷ್ಮಣ ಭೋವಿ, ರಮೇಶ ಸಿರಗುಂಪ್ಪಿ ಸೇರಿದಂತೆ ಹಲವಾರರು ಉಪಸ್ಥಿತರಿದ್ದರು.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Leave a Reply