Koppal

ಸರಕಾರಿ ಪ್ರೌಢ ಶಾಲೆ ಚಳಗೇರಾದಲ್ಲಿ ಪ್ರೌಢಶಾಲಾ ಹಂತದ ಸಮುದಾಯದತ್ತ ಶಾಲಾ ಕಾರ್ಯಕ್ರಮ


ಕುಷ್ಟಗಿ:ಸರಕಾರಿ ಪ್ರೌಢ ಶಾಲೆ ಚಳಗೇರಾದಲ್ಲಿ ಇಂದು 23-12-21 ರಂದು ಪ್ರೌಢಶಾಲಾ ಹಂತದ ಸಮುದಾಯದತ್ತ ಶಾಲಾ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮಕ್ಕೆ ಮಾರ್ಗದರ್ಶಕರಾಗಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಡಾ”ನಾಗರಾಜ ಎಸ್ ಹೀರಾ ಆಗಮಿಸಿ.ಮಕ್ಕಳೊಂದಿಗೆ ಶೈಕ್ಷಣಿಕ ಚಟುವಟಿಕೆಗಳ ಕುರಿತು ಸಂವಾದ ನಡೆಸಿದರು. ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಎದುರಿಸುವ ಬಗ್ಗೆ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ನೀಡಿ ಮಕ್ಕಳು ಕಷ್ಟ ಪಟ್ಟು ಓದುವ ಬದಲು ಇಷ್ಟಪಟ್ಟು ಓದಿದರೆ ಯಶಸ್ಸು ಸಾಧ್ಯವಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಪರೀಕ್ಷಾ ಸಮಯದಲ್ಲಿ ಏಕಾಗ್ರತೆಯಿಂದ ಇದ್ದು ಅಭ್ಯಾಸವನ್ನು ನಿರಂತರವಾಗಿ ಓದಿ ಎಲ್ಲಾ ವಿಷಯಗಳನ್ನೂ ಸಮರ್ಪಕವಾಗಿ ಅಧ್ಯಯನ ಮಾಡಿ ಹೆಚ್ಚಿನ ಅಂಕ ಪಡೆದುಕೊಳ್ಳಲು ತಿಳಿಸಿದರು.

ಶಿಕ್ಷಕರ ಸಭೆ ನಡೆಸಿ ಮಕ್ಕಳಿಗೆ ಶೈಕ್ಷಣಿಕ ಮಟ್ಟ ಹೆಚ್ಚಿಸುವ ಮಾರ್ಗೋಪಾಯಗಳನ್ನು ಹೇಳಿದರು.

ಈ ಸಂದರ್ಭದಲ್ಲಿ ಎಸ್, ಡೀ, ಎಮ್, ಸಿ, ಉಪಾಧ್ಯಕ್ಷರಾದ ರುದ್ರಪ್ಪ ಪಟ್ಟಣಶೆಟ್ಟಿ ಹಾಜರಿದ್ದು, ಶಾಲಾ ಭೌತಿಕ ಹಾಗೂ ಶೈಕ್ಷಣಿಕ ಅಭಿರುದ್ದಿಗೆ ಸಹಕರಿಸುವುದಾಗಿ ತಿಳಿಸಿದರು.

ಶಾಲಾ ಮುಖ್ಯೋಪಾಧ್ಯಾಯರಾದ ರಾಯಪ್ಪ ಹೂಗಾರ, ಶಿಕ್ಷಕರಾದ ಅರವಿಂದ ಕುಮಾರ ದೇಸಾಯಿ, ಶಾಕೀರ್ ಬಾಬಾ, ಸಿದ್ದನಗೌಡ ಪೊಲೀಸ್ ಪಾಟೀಲ್, ಹೆಚ್ ಡಿ ನದಾಫ್ ಇದ್ದರು.

ಶಾಲಾ ಮಕ್ಕಳಿಂದ ಸಹಪಠ್ಯ ಚಟುವಟಿಕೆಗಳು ನಡೆದವು. ಕಥೆ ಗಾಯನ ಏಕಪಾತ್ರಾಭಿನಯ ಮಾಡಿಸಲಾಯಿತು.

ಆರ್ ಶರಣಪ್ಪ ಗುಮಗೇರಾ

ಕೊಪ್ಪಳ


Leave a Reply