Belagavi

ರಾಮದುರ್ಗದಲ್ಲಿ ಸೇವಾ ಭದ್ರತೆಗಾಗಿ ಅತಿಥಿ ಉಪನ್ಯಾಸಕರ ಬೃಹತ್ ಜಾಥಾ ತಶೀಲ್ದಾರರಿಗೆ ಮನವಿ


ರಾಮದುರ್ಗ : ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ 14000 ಮೇಲ್ಪಟ್ಟು ಅತಿಥಿ ಉಪನ್ಯಾಸಕರ ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ
ಒಕ್ಕೂಟಗಳ ಸಂಘಟನೆಯ ರಾಮದುರ್ಗ ತಾಲೂಕ ಘಟಕ ಮಾನ್ಯ ತಹಶೀಲ್ದಾರರಿಗೆ ಇಂದು ಮನವಿಯನ್ನು ಸಲ್ಲಿಸಿತು.

ರಾಜ್ಯದಲ್ಲಿ ಸುಮಾರು ನಾಲ್ಕು 130 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 14164 ಅತಿಥಿ ಉಪನ್ಯಾಸಕರು ಕಳೆದ ಹತ್ತು ಹದಿನೈದು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದರೂ ಸರ್ಕಾರ ಇದುವರೆಗೂ ಅವರಿಗೆ ಸೇವಾ ಭದ್ರತೆಯನ್ನು ನೀಡುವುದಾಗಲಿ ವೇತನವನ್ನು ಹೆಚ್ಚಿಸುವ ಯಾವ ಬೇಡಿಕೆಗಳನ್ನು ಈಡೇರಿಸಿಲ್ಲ ಅಕ್ಕಪಕ್ಕದ ರಾಜ್ಯಗಳಲ್ಲಿ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಲಾಗಿದೆ ಆದರೆ ಕರ್ನಾಟಕದಲ್ಲಿ ಇದುವರೆಗೂ ಅತಿಥಿ ಉಪನ್ಯಾಸಕರನ್ನು ಘೋಷಿಸಲಾಗಿದೆ ಧಾರವಾಡದ ಕಾಲೇಜು ಶಿಕ್ಷಣ ಶಿಕ್ಷಣ ಇಲಾಖೆ ನಿರ್ದೇಶಕರ ಕಚೇರಿಯಲ್ಲಿ ಮತ್ತು ಸುವರ್ಣಸೌಧದ ಬೆಳಗಾವಿಯಲ್ಲಿ ಹೋರಾಟವನ್ನು ಮಾಡುತ್ತ ಬಂದಿದ್ದರು ಸರ್ಕಾರದ ಬೇಡಿಕೆಯನ್ನು ಈಡೇರಿಸಲು ಸರ್ಕಾರ ಶೀಘ್ರವೇ ನಮ್ಮ ಬೇಡಿಕೆ ಈಡೇರಿಸಬೇಕು ಇಲ್ಲದಿದ್ದರೆ ಕಠಿಣವಾದ ಹೋರಾಟವನ್ನು ಮಾಡಲಾಗುತ್ತದೆ ಎಂದು ಮನವಿಯಲ್ಲಿ ಜಿಲ್ಲಾಧ್ಯಕ್ಷರು ಕಂಬಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸರ್ಕಾರ ನಮಗೆ ಸೇವಾ ಭದ್ರತೆ ಮತ್ತು ಖಾಯ ಮಾತಿ ಯನ್ನು ಕೊಡುವವರಿಗೂ ತರಗತಿಗಳನ್ನು ಬಹಿಷ್ಕರಿಸಿ ಧರಣಿಯನ್ನು ಮುಂದುವರಿಸುತ್ತೇವೆ.ಇದರಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆ ಉಂಟಾದಲ್ಲಿ ನೇರವಾಗಿ ಸರಕಾರವೇ ಹೊಣೆಯಾಗುತ್ತದೆ ಎಂದು ಸಮಿತಿ ತಿಳಿಸಿದೆ.

ತಹಶೀಲ್ದಾರರಿಗೆ ಮನವಿ ಸಲ್ಲಿಸುವ ಮುನ್ನ ಪಟ್ಟಣದ ಹುತಾತ್ಮ ಪ್ರ ತಕೆ ಮಾಲಾರ್ಪಣೆ ಸಲ್ಲಿಸಿ ಅತಿಥಿ ಉಪನ್ಯಾಸಕರು ನ್ಯಾಯ ಬೇಕು ನ್ಯಾಯ ಕಾಯಂ ಆಗಬೇಕು ಎಂದು ಘೋಷಗಳನ್ನು ಹೋಗುತ್ತಾ ಹಳೆ ಬಸ್ ನಿಲ್ದಾಣ ಮಾರ್ಗವಾಗಿ ಮಿನಿ ವಿಧಾನಸೌಧಕ್ಕೆ ತೆರಳಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿತು. ತಶಿಲ್ದಾರ ಪರವಾಗಿ ಉಪ ತಹಶೀಲ್ದಾರ್ ಶ್ರೀಮತಿ ರುಕ್ಮಿಣಿ ಅವರು ಮನವಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರಾದ ಎನ್. ಬಿ. ಕೊಪ್ಪದ, ಡಾ ಪತ್ರಪ್ಪ ಸಿಂಗಾರಗೊಪ್ಪ, ಎಸ್. ಬಿ ಜಾದವ, ಎಸ್. ಬಿ. ಅಳಗುಂಡಿ ಡಾ. ಮಂಜುನಾಥ್ ದಂಡಗಿ ಕಿರಣ್ ಬೆಟಗೇರಿ, ಗಂಗಾ ಯಾದವಾಡ,ಅನುಪಮ ಕೊನಿಮನಿ, ಶಿವಲೀಲಾ ಗೋಲ ನ್ನವರ್, ಸೀಮಾ ಮಹತ, ಶಿಲ್ಪ ಪೂಜಾರ,ಅರುಣ್ ತಂಗೋಜಿ, ಸುನಿಲ್ ನಿರ್ವಾಣಿ, ಆನಂದ ಬಸರಗಿ, ಅಬೂಬ್ಕರ್ ಹೊರಟ್ಟಿ, ಎಂ. ಎ. ನಕಾರ್ಚಿ, ರಮೇಶ್ ಹತ್ತಿ,ಜಿ.ಎಲ್. ಓಗಿ, ಜಿ.ಎಸ್. ಹಿರೇಮಠ ಮುಂತಾದವರಿದ್ದರು.


Leave a Reply