Koppal

ರೈತರು ಸಕಾಲಕ್ಕೆ ಸಾಲಮರುಪಾವತಿಸಿ ಸೊಸೈಟಿ ಉಳಿಸಿ,ಬೆಳಸಿ: ಪಿ.ವೆಂಕಟೇಶ್ವರರಾವ್


ಗಂಗಾವತಿ :ಸರ್ಕಾರ ಬಡ್ಡಿರಹಿತವಾಗಿ ಪ್ರಾಥಮಿಕ ಸಹಕಾರಿ ಸಂಘಗಳ ಮೂಲಕ ರೈತರಿಗೆ ಬೆಳೆಸಾಲ ನೀಡುತ್ತಿದ್ದು, ರೈತರು ಸಕಾಲಕ್ಕೆ ಸಾಲಮರುಪಾವತಿಸಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಶ್ರೀರಾಮನಗರ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಪಿ.ವೆಂಕಟೇಶ್ವರರಾವ್ ಅವರು ಹೇಳಿದರು.
ಶುಕ್ರವಾರದಂದು ಸಂಘದ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. 2003 ರಲ್ಲಿ ಶ್ರೀರಾಮನಗರದಲ್ಲಿ ನಮ್ಮ ಸಂಘ ಪ್ರಾರಂಭವಾಗಿದ್ದು, ಕೃಷಿ ಸಾಲ, ಹೈನುಗಾರಿಕೆ, ಮಹಿಳಾ ಗುಂಪುಗಳಿಗೆ ಸಾಲ ಸೇರಿದಂತೆ ಗೋದಾಮು ನಿರ್ಮಾಣಕ್ಕೆ ಕಡಿಮೆ ಬಡ್ಡಿ ದರ ಸೇರಿದಂತೆ ಬಡ್ಡಿರಹಿತವಾಗಿ ಬೆಳೆ ಸಾಲ ನೀಡಿದ್ದು, ಇದರ ಸದುಪಯೋಗ ಪಡೆದ ರೈತರು ಸರಿಯಾದ ಸಮಯಕ್ಕೆ ಸಾಲಮರುಪಾವತಿಸಿ ಸೊಸೈಟಿ ಉಳಿಸಿ ಬೆಳೆಸಬೇಕು ಎಂದರು. ಇನ್ನು ಸಭೆಯಲ್ಲಿ ವಾರ್ಷಿಕ ವರದಿ, ಸಂಘದ ಕಾರ್ಯಚವಟಿಕೆಗಳು, ಆರ್ಥಿಕ ಬ್ಯಾಂಕ್ ಬದಲಾವಣೆ, ಪಿಗ್ಮಿ ಏಜೆಂಟ್ರ ನೇಮಕ ,ವಾರ್ಷಿಕ-ಆಯವ್ಯಯ, ಬಹಳ ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ ರೈತರ ಸಾಲವಸೂಲಾತಿ , ಹೊಸ ಸಾಲಮಂಜೂರಿ ಸೇರಿದಂತೆ ಇನ್ನೀತರ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಬಿ.ವಿಜಯಲಕ್ಷ್ಮಿ, ನಿರ್ದೇಶಕರಾದ ಎ.ರಾಮಕೃಷ್ಣ, ವೈ.ನಾಗರಾಜ್, ಆನಂದಕುಮಾರ್, ಮಲ್ಲಿಕಾರ್ಜುನ, ಎಸ್.ಶ್ರೀನಿವಾಸ, ಎಂ.ರಮೇಶ, ಜಿ.ಸುರೇಶ, ಮಹಮ್ಮದ್ ಅಲಿ, ಎಂ.ವನಜಾಕ್ಷಿ, ಕಾರ್ಯನಿರ್ವಾಹಕ ಅಧಿಕಾರಿ ವೈ.ಎಸ್ ಪ್ರಕಾಶ್, ಸಿಬ್ಬಂದಿಗಳಾದ ಎನ್.ರಾಧಾ ಸೇರಿದಂತೆ ಗ್ರಾಮದ ಮುಖಂಡರು, ರೈತರು ಮಹಾಸಭೆಯಲ್ಲಿ ಭಾಗಿಯಾಗಿದ್ದರು

ವರದಿ
(ಹನುಮೇಶ ಬಟಾರಿ ಗಂಗಾವತಿ)


Leave a Reply