Koppal

ಸಂಭ್ರಮದ ದತ್ತಾತ್ರೆಯ ಜಯಂತೋತ್ಸವಕ್ಕೆ ಚಾಲನೆ


ಬ್ರಹ್ಮ, ವಿಷ್ಣು, ಮಹೇಶ್ವರ ಸ್ವರೂಪವೇ ದತ್ತಾತ್ರೇಯ ಗುರುಗಳು : ನಾರಾಯಣ ರಾವ್ ವೈದ್ಯ

ಗಂಗಾವತಿ : ಸೃಷ್ಟಿ-ಸ್ಥಿತಿ-ಲಯ ಸ್ವರೂಪರಾದ ಬ್ರಹ್ಮ, ವಿಷ್ಣು, ಮಹೇಶ್ವರ ಸ್ವರೂಪವೇ ಶ್ರೀ ದತ್ತಾತ್ರೇಯ ಗುರುಗಳೆಂದು ಶ್ರೀ ಶಂಕರ ಮಠದ ಧರ್ಮದರ್ಶಿಗಳಾದ ನಾರಾಯಣರಾವ್ ವೈದ್ಯ ಹೇಳಿದರು .
ಅವರು ಶನಿವಾರದಂದು ನಗರದ ಶ್ರೀಶಂಕರ ಮಠದಲ್ಲಿ ಆಯೋಜಿಸಿದ ನಾಲ್ಕನೆಯ ವರ್ಷದ ಶ್ರೀದತ್ತಾತ್ರೇಯ ಜಯಂತೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ,
ಮಹಾಸತಿ ಅನಸೂಯಾದೇವಿ ಹಾಗೂ ಅತ್ರಿ ಮುನಿಗಳ ದಂಪತಿಗಳಲ್ಲಿ ಉದಯಿಸಿದ ಶ್ರೀ ದತ್ತಾತ್ರೇಯ ಗುರುಗಳು ಲೋಕಕಲ್ಯಾಣಾರ್ಥವಾಗಿ ಜನ್ಮತಾಳಿದರು..
ಪತಿ ನಿಷ್ಠೆಗೆ ಹೆಸರಾದ ಮಹಾಸತಿ ಅನಸೂಯಾದೇವಿಯನ್ನು ಪರೀಕ್ಷೆಗೆಂದು ಬ್ರಹ್ಮ, ವಿಷ್ಣು, ಮಹೇಶ್ವರರು ಧರೆಗಿಳಿದು ಬಂದು ತಮಗೆ ಎದೆಹಾಲು ನೀಡುವಂತೆ ಕೋರಿದರು. ಇದನ್ನು ಮೊದಲೇ ಅರಿತಿದ್ದ ಅನುಸೂಯಾದೇವಿ ಮನೆಯಲ್ಲಿದ್ದ ಕಮಂಡಲದ ನೀರನ್ನು ಪ್ರೋಕ್ಷಿಸಿದ ಹಿನ್ನೆಲೆಯಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರು
ಬಾಲ ಮಕ್ಕಳಾಗಿ ಪರಿವರ್ತನೆಗೊಂಡರು. ತದನಂತರ ಎದೆಹಾಲು ಉಣಿಸುವುದರ ಮೂಲಕ ತ್ರಿಮೂರ್ತಿಗಳ ಆಸೆಯನ್ನು ನೆರವೇರಿಸಿದ ಸಾಕ್ಷಾತ್ ದೈವ ಸ್ವರೂಪಿಯಾಗಿದ್ದು ಮಹಾಸತಿ ಅನಸೂಯಾದೇವಿ.
ಇದೇ ವೇಳೆ ಅನಸೂಯಾದೇವಿ ಭಕ್ತಿ ಮೆಚ್ಚಿದ ಬ್ರಹ್ಮ, ವಿಷ್ಣು , ಮಹೇಶ್ವರರು
ನಿನಗೆ ಏನು ವರಬೇಕೆಂದು ಕೇಳಿದಾಗ ನಿಮ್ಮ ಮೂವರ ಶಕ್ತಿಯನ್ನು ಹೊಂದಿರತಕ್ಕಂತಹ ಮಗು ಜನ್ಮತಾಳಲಿ ಎಂದು ವರ ಕೇಳಿದಾಗ ಹುಟ್ಟಿದ ಮಗುವೇ ಶ್ರೀ ದತ್ತ ಮಹಾರಾಜರು.. ಯಾವುದೇ ಜಾತಿ- ಮತ- ಪಂಥ ಇಲ್ಲದೆ ದತ್ತ ನಾಮಸ್ಮರಣೆ ಮೂಲಕ ಪ್ರತಿಯೊಬ್ಬರೂ ತಮ್ಮ ಸಂಕಷ್ಟವನ್ನು ಪರಿಹರಿಸಿಕೊಳ್ಳು ಬಹುದಾಗಿದೆ.. ಗುರು ಚರಿತ್ರೆ ಪಾರಾಯಣ ಮೋಕ್ಷಸಾಧನೆಗೆ ಹಾಗೂ ಜನ್ಮ ಸಾರ್ಥಕತೆಗೆ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಸಿದರು..

ಇದಕ್ಕೂ ಮುಂಚೆ ಪಲ್ಲಕ್ಕಿ ಉತ್ಸವ, ಶಾರದಾ ಭಜನಾ ಮಂಡಳಿಯವರಿಂದ ಭಜನೆ ಸೇರಿದಂತೆ ವೇದಮೂರ್ತಿ ಮಹೇಶ್ ಭಟ್ಟರಿಂದ ಸಂಕಲ್ಪ ತೊಟ್ಟಿಲು ಸೇವೆ, ಹಾಡು ಕೋಲಾಟ ಗಳಿಂದ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ವಿಶೇಷವಾಗಿ ಜಗನ್ನಾಥ ಅಳವಂಡಿಕರ, ರಾಘವೇಂದ್ರ ರವರ ಕೋಲಾಟ ಆಕರ್ಷಣೆ ಪಡೆದುಕೊಂಡಿತು.. ದೇವಸ್ಥಾನದ ಪ್ರಧಾನ ಅರ್ಚಕ ಕುಮಾರ್ ಭಟ್ ದತ್ತ ಪಾದುಕೆಗಳಿಗೆ ಪಂಚಾಮೃತಾಭಿಷೇಕ ರುದ್ರಾಭಿಷೇಕ ಸೇರಿದಂತೆ ಮತ್ತಿತರ ಪೂಜಾ ಕಾರ್ಯಕ್ರಮವನ್ನು ನಡೆಸಿದರು.. ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಪಾಲಕ್ಕಿ ಹಾಗೂ ತೊಟ್ಟಿಲು ಸೇವೆ ನೀಡಿದ ಮಹೇಶ್ ಭಟ್ ಶೇಷಗಿರಿಗಡಾದ ರವರನ್ನು ಗೌರವಿಸಲಾಯಿತು.. ವಿನಾಯಕ್ ಭಟ್, ರವಿ ವೈದ್ಯ, ಗೋಪಾಲ್ ರಾವ್, ಭೀಮ್ಸೇನ್ ಭಟ್, ದತ್ತಾತ್ರೇಯ, ಶಂಕ್ರಣ್ಣ ಹೊಸಳ್ಳಿ, ವೇಣುಗೋಪಾಲ, ಭೀಮಸೇನ ಭಟ್ ಕರ್ಮುಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

ವರದಿ
(ಹನುಮೇಶ ಬಟಾರಿ ಗಂಗಾವತಿ)


Leave a Reply