Belagavi

ಬೇಡ ಜಂಗಮ ಸಮಾಜದಿಂದ ಮುಖ್ಯಮಂತ್ರಿಗಳಿಗೆ ಮನವಿ ಅರ್ಪನೆ


ಬೈಲಹೊಂಗಲ ೨೫- ಬೇಡ-ಜಂಗಮ ಜನಾಂಗವನ್ನು ಗುರಿಯಾಗಿಸಿಕೊಂಡು ಸಂವಿಧಾನ ವಿರೋಧಿ ಹೇಳಿಕೆಯನ್ನು ನೀಡುತ್ತಿರುವ ಕುಡಚಿ ಶಾಸಕ ಪಿ ರಾಜಿವ ಶಾಸಕರಾಗಲು ಅನರ್ಹ ರಾಗಿದ್ದು ಶಾಸಕ ಸ್ಥಾನಕ್ಕೆ ರಾಜಿನಾಮೆಯನ್ನು ನೀಡಿ ಬೇಡಜಂಗಮ ಸಮಾಜಕ್ಕೆ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿ ಕುಡಚಿ ಶಾಸಕ ಪಿ.ರಾಜೀವ್, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರ ಪ್ರತಿಕೃತಿ ದಹನ ಮಾಡಿ ಬೇಡ-ಜಂಗಮ ಸಮಾಜ ಭಾಂದವರು ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಜಮಾವಣೆ ಆದ ಬೇಡ-ಜಂಗಮ ಸಮಾಜ ಭಾಂದವರು ಅಖಿಲ ಕರ್ನಾಟಕ ಡಾ.ಅಂಭೇಡ್ಕರ ಬೇಡ-ಜಂಗಮ ಪರಿಶಿಷ್ಟ ಜಾತಿ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಬಸಲಿಂಗಯ್ಯ ಚಿಕ್ಕಮಠ, ತಾಲೂಕಾಧ್ಯಕ್ಷ ಸಂತೋಷ ಮಠಪತಿ, ಡಾ.ಮಹಾಂತೇಶ ಶಾಸ್ರಿö್ತ ಆರಾದ್ರಿಮಠ, ಭಗಳಂಬಾ ದೇವಿಯ ಈರಯ್ಯಶಾಸ್ರಿö್ತ ಹಿರೇಮಠ ನೇತೃತ್ವದಲ್ಲಿ ಟೈರಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಪ್ರತಿಭಟನೆ ಮೂಲಕ ತಹಸೀಲ್ದಾರ ಕಚೇರಿಗೆ ತೆರಳಿ ಮನವಿ ಸಲ್ಲಿಸಿ ಮಾತನಾಡಿದ ಬೇಡ ಜಂಗಮ ಜಿಲ್ಲಾಧ್ಯಕ್ಷ ಬಸಲಿಂಗಯ್ಯ ಚಿಕ್ಕಮಠ ೧೯೦೧ ರಿಂದಲೇ ಬೇಡ ಜಂಗಮ ಸಮುದಾಯಕ್ಕೆ ಮೀಸಲಾತಿಯನ್ನು ನಿಜಾಮ ಸರ್ಕಾರದಲ್ಲಿಯೇ ನೀಡಲಾಗಿತ್ತು. ಇದೇ ಆಧಾರವನ್ನು ಇಟ್ಟುಕೊಂಡು ಬ್ರಿಟಿಷರ ಸರ್ಕಾರ ೧೯೩೫ ರಲ್ಲಿ ಬ್ರಿಟಿಷ್ ಇಸ್ಟ ಇಂಡಿಯಾ ಕಂಪನಿ ಸಂವಿಧಾನದಲ್ಲಿಯೂ ಬೇಡ ಜಂಗಮರನ್ನು ಸೇರ್ಪಡೆ ಮಾಡಿ ಸೌಲತ್ತು ನೀಡಲಾಗಿತ್ತು. ಇದಲ್ಲದೇ ೧೯೫೦ ರಲ್ಲಿ ಸಂವಿಧಾನ ಸಮಿತಿ ಅಧ್ಯಕ್ಷರಾಗಿದ್ದ ಡಾ. ಅಂಬೇಡ್ಕರ್ ಸಹ ಹಿಂದಿನ ಆದೇಶಗಳು ಮತ್ತು ಗೆಜೆಟ್ ಗಳನ್ನು ಉಲ್ಲೇಖಿಸಿ ಬೇಡ ಜಂಗಮ ಎಂದು ಸಂವಿಧಾನದಲ್ಲಿ ಸೇರ್ಪಡೆ ಮಾಡಿ ನ್ಯಾಯ ಒದಗಿಸಿದ್ದಾರೆ. ೧೯೮೫ ರವರೆಗೆ ಮೀಸಲಾತಿ ಸೌಲತ್ತು ನೀಡಲಾಗಿತ್ತು. ೧೯೮೫ ರ ನಂತರ ಕೆಲವು ರಾಜಕೀಯ ಪುಡಾರಿಗಳ ಕೈಚಳಕದಿಂದಾಗಿ ನಮಗೆ ಸಂವಿಧಾನಬದ್ಧವಾಗಿ ಸಿಗುತ್ತಿದ್ದ ಸೌಲತ್ತು ಸಿಗದಂತೆ ಮಾಡಿದರು ಎಂದು ಅವರು ದೂರಿದರು.ಸಂವಿಧಾನ ವಿರೋಧಿ ಹೇಳಿಕೆ ನೀಡುತ್ತಿರುವ ಇವರು ಶಾಸಕರಾಗಲು ಅನರ್ಹರಾಗಿದ್ದು ಆ ಸ್ಥಾನಕ್ಕೆ ರಾಜಿನಾಮೆ ಕೊಟ್ಟು, ಬೇಡ-ಜಂಗಮ ಸಮಾಜದ ಕ್ಷಮೆ ಕೇಳಬೆಕೆಂದರು.
ಡಾ.ಮಹಾಂತೇಶ ಶಾಸ್ರಿö್ತ ಆರಾದ್ರಿಮಠ ಮಾತನಾಡಿ, ಕೆಲ ಕುತಂತ್ರಿ ರಾಜಕಾರಣಿಗಳು ದುರದ್ದೇಶದಿಂದ ಇಲ್ಲಸಲ್ಲದ ಸುತ್ತೋಲೆ ಹೊರಡಿಸುವುದು, ಅಧಿಕಾರಿಗಳಿಗೆ ತೊಂದರೆ ಕೊಡುವುದು, ಜಾತಿ ಪ್ರಮಾಣ ಪತ್ರ ಪಡೆದವರಿಗೆ ಹೆದರಿಸುವುದು ಮಾಡುತ್ತಿರುವುದು ನಾಚಿಕೆಗೇಡಿತನ ಸಂಗತಿಯಾಗಿದೆ. ಜಂಗಮರ ಜೋಳಿಗೆಗೆ ಕೈಹಾಕಿ ತಿನ್ನುವ ದುರ್ಬದ್ದಿಯನ್ನು ನಿಲ್ಲಿಸಿ, ಜವಾಬ್ದಾರಿಯನ್ನು ಅರಿತು ನಮ್ಮ ಸಮಾಜದ ಕ್ಷಮೆ ಕೇಳಬೇಕು, ಸಂವಿಧಾನ ವಿರೋಧಿ ಕೆಲಸವನ್ನು ನಿಲ್ಲಿಸಬೇಕೆಂದು ಎಚ್ಚರಿಕೆ ನೀಡಿದರು.
ತಾಲೂಕಾಧ್ಯಕ್ಷ ತಾಲೂಕಾಧ್ಯಕ್ಷ ಸಂತೋಷ ಪಶುಪತಿಮಠ ಮಾತನಾಡಿ, ನಿಜಾಮರ ಕಾಲದಲ್ಲಿ ಸೆನ್ಸಸ್ ಆಫ್ ಇಂಡಿಯಾ ೧೯೦೧ರಲ್ಲಿ ಬೇಡಜಂಗಮರು ಧಾರ್ಮಿಕ ಭಿಕ್ಷಾಟನೆ ಮಾಡುವವರು ಎಂದು ದಾಖಲಿಸಿ, ೧೯೩೫ ರಲ್ಲಿ ಬ್ರಿಟಿಷರು ದಿ. ಫಸ್ಟ್ ಶೆಡ್ಯೂಲï ಕಾಸ್ಟ್ ಪಟ್ಟಿಯಲ್ಲಿ ಜಂಗಮ ಜಾತಿಯನ್ನು ಸೇರಿಸಲಾಗಿದೆ. ದೇಶಕ್ಕೆ ಸ್ವಾತಂತ್ರೃ ಬಂದ ನಂತರ ಆ ಪಟ್ಟಿಯನ್ನು ಮುಂದುವರಿಸಿಕೊAಡು ರಾಷ್ಟ್ರಪತಿಗಳು ೩೪೧ ನೇ ವಿಧಿ ಪ್ರಕಾರವಾಗಿ ಬೇಡ, ಜಂಗಮ ೧೯ನೇ ಸಂಖ್ಯೆಯಲ್ಲಿ ಸೇರಿಸಿ ಆದೇಶ ಹೊರಡಿಸಿದ್ದಾರೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಸಂಘಟನಾ ಕಾರ್ಯದರ್ಶಿ ಗುರುಶಾಂತ ತೆಂಗಿನಮಠ, ಸಂಚಾಲಕ ಶ್ರೀಶೈಲ ಏಣಗಿಮಠ, ರುದ್ರಯ್ಯ ಚರಂತಿಮಠ ಮಂಜುನಾಥ ಕುಲಕರ್ಣಿ, ರಾಚಯ್ಯ ರೋಟೈನವರಮಠ, ಚೆನ್ನಯ್ಯ ಚಿಕ್ಕಮಠ, ಬಸಯ್ಯ ಪೂಜಾರ, ಪ್ರಶಾಂತ ಕುಲಕರ್ಣಿ, ಪ್ರವೀಣ್ ಹಿರೇಮಠ, ವೇ.ಮೂ ವೀರಯೈಸ್ವಾಮಿ ಹಿರೇಮಠ, ಗುರುಸಿದ್ದಯ್ಯ ಹಿರೇಮಠ , ಗುರು ಮಾಂತೇಶ ಹಿರೇಮಠ, ಜಗದೀಶ್ ಯರಗಟ್ಟಿಮಠ, ಬಸಯ್ಯ ಶಿವಪ್ಪಯ್ಯನಮಠ , ವಿನಯ್ ಮಾಸ್ತಿಮರಡಿಮಠ, ರಘು ಸಂಬಳದ, ಮಹಾಂತಯ್ಯ ಒಕ್ಕುಂದಮಠ, ಬಸಯ್ಯ ರುದ್ರಪುರಮಠ, ಸಂಗಯ್ಯ ಪಾಟೀಲ್, ಮಹಾಂತೇಶ್ ಪೂಜಾರಿ, ಈಶ್ವರ್ ಗಾಳಿಮರಡಿ, ಶೇಕಯ್ಯ ಹಿರೇಮಠ್ , ಉಮೇಶ್ ಬಿಕ್ಷಾವತಿಮಠ , ಅಣ್ಣಯ್ಯ ಹಿರೇಮಠ ಸಿದ್ದಲಿಂಗಯ್ಯ ಹಿರೇಮಠ , ನಾಗಯ್ಯ ಹಿರೇಮಠ , ಮಲ್ಲಿಕಾರ್ಜುನ್ ಏಣಗಿಮಠ , ಆನಂದ ಪಶುಪತಿಮಠ, ಬಸಯ್ಯ ಚಿಕ್ಕಮಠ , ರಮೇಶ್ ಕಾರಿಮನಿ , ಬಸವರಾಜ್ ಕಿವಡಿಮಠ . ಗುರುಲಿಂಗಯ್ಯ ಚರಂತಿಮಠ, ಶಿವಪುತ್ರಯ್ಯ ಚರಂತಿಮಠ, ಈರಣ್ಣ ಪಾವಡಿ, ಶಿವಯ್ಯ ಪುರಾಣಿಕಮಠ, ಬಸಯ್ಯ ಹಿರೇಮಠ, ಪ್ರಶಾಂತ್ ಹಿರೇಮಠ, ಬಸವರಾಜ್.ಹಿರೇಮಠ ಹಾಗೂ ಎಲ್ಲ ಜಂಗಮ ಸಮಾಜ ಬಾಂಧವರು ಇದ್ದರು.


Leave a Reply