Belagavi

ಮೇಕಲ ಮರಡಿಯಲ್ಲಿ  ರೈತ  ದಿನಾಚರಣೆ


ಬೈಲಹೊಂಗಲ 25 –  ತಾಲೂಕಿನ ಮೇಕಲಮರಡಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮಹಿಳಾ ಸಂಘ ಇವರ ಆಶ್ರಯದಲ್ಲಿ ದಿನವನ್ನು ಆಚರಿಸಲಾಯಿತು.

ಗುರುವಾರ  ಸಾಯಂಕಾಲ ನಡೆದ ರೈತ ದಿನಾಚರಣೆಯಲ್ಲಿ ಮಾಜಿ ಪ್ರಧಾನಿ ಚರಣಸಿಂಗ್ ಚೌಧರಿ ಹಾಗೂ ರೈತರ ಪ್ರೊಫೆಸರ್ ನಂಜುಂಡಸ್ವಾಮಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರೈತ ಧುರೀಣರು ಮಾತನಾಡಿ ಬರುವ ವರ್ಷದಿಂದ ಪ್ರತಿ ಗ್ರಾಮಗಳಲ್ಲಿ ರೈತ ದಿನಾಚರಣೆ ಮಾಡಬೇಕೆಂದರು.

ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ  ಪೂಜೇರಿ, ಜಿಲ್ಲಾ ಗೌರವಾಧ್ಯಕ್ಷ ಮಹಾಂತೇಶ ಹಿರೇಮಠ,  ಜಿಲ್ಲಾಧ್ಯಕ್ಷ ರಾಘವೇಂದ್ರ ನಾಯಕ,  ಕಾರ್ಯದರ್ಶಿ ರವಿ ಸಿದ್ದಮ್ಮನವರ, ಸಂಚಾಲಕ ಮನೋಜ ಕೆಳಗೇರಿ, ತಾಲೂಕಾ ಅಧ್ಯಕ್ಷ ಈರಪ್ಪ ಎತ್ತಿನಮನಿ, ಮಹಿಳಾ ರೈತ ಸಂಘದ ನಾಗವ್ವ ಪಾಟೀಲ, ಮಹಾನಂದಾ ಹಡಪದ, ಸರಸ್ವತಿ ಬ್ಯಾಹಟ್ಟಿ, ಪ್ರಹ್ಲಾದ ಕುರಕುಂದ ಸೇರಿದಂತೆ ಹಲವಾರು ರೈತರು ಭಾಗವಹಿಸಿದ್ದರು.

 


Leave a Reply