Belagavi

೪.೬೦ ಕೋಟಿ ಕಾಮಗಾರಿಗೆ ಶಾಸಕ ಅನಿಲ ಬೆನಕೆ ಚಾಲನೆ


ಬೆಳಗಾವಿ,: ದಿ ೨೫ ರಂದು ಬೆಳಗಾವಿಯಲ್ಲಿ ನಿನ್ನೆಯಷ್ಠೆ ಮುಗಿದ ಅಧಿವೇಶನ ಮುಗಿದಿದೆ. ಶಾಸಕರು, ಸಚಿವರು ಇವತ್ತು ಫುಲ ಡೇ ರೇಸ್ಟ ಮಾಡ್ತಾರೆ ಅಂತ ಎಲ್ಲರು ಅಂದುಕೊಳ್ಳುತ್ತಾರೆ. ಆದರೆ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಅವರು ಅಧಿವೇಶನ ಹಿನ್ನೆಲೆಯಲ್ಲಿ ಉಳಿದಕೊಂಡಿದ ಅಭಿವೃದ್ಧಿ ಕಾಮಗಾರಿಗರೆ ಚಾಲನೆ ನೀಡಿದ್ದಾರೆ.
ಶನಿವಾರ ಬೆಳಗಾವಿಯ ರಾಮತೀರ್ಥ ನಗರದಲ್ಲಿ ಶಾಸಕ ಅನಿಲ ಬೆನಕೆ ಅವರು ೪.೬೦ ಕೋಟಿಯ ಕಾಮಗಾರಿಗೆ ಚಾಲನೆ ನೀಡಿದರು. ಕಾಮಗಾರಿ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ರಾಮತೀರ್ಥ ನಗರದಲ್ಲಿ ಕಣಬರ್ಗಿಯಿಂದ ಹರ್ಷ ಹೋಟೆಲ ವರೆಗಿನ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ಕಾಮಗಾರಿಗೆಯು ೪.೬೦ ಲಕ್ಷದ್ದಾಗಿದೆ. ಹರ್ಷ ಹೋಟೆಲಯಿಂದ ಉದಯ ಸ್ಕೂಲ ವರೆಗಿನ ರಸ್ತೆಗೆ ೬೦ ಲಕ್ಷ, ಮೀಸಲಿಡಲಾಗಿದೆ. ಇನ್ನು ಎರಡು ಮೂರು ದಿನಗಳಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತದೆ ಎಂದು ತಿಳಿಸಿದರು.
ಇದೇ ವೇಳೆ ಮಾಹಿತಿ ನೀಡಿದ ಶಾಸಕ ಅನಿಲ ಬೆನಕೆ ಅವರು, ಬೆಳಗಾವಿ ಉತ್ತರ ಕ್ಷೇತ್ರದ ಚರಂಡಿ ಕಾಮಗಾರಿಗೂ ಕೂಡಾ ಟೆಂಡರ ಆಗಿದೆ. ಚರಂಡಿ ಕಾಮಗಾರಿಯು ೩೦ ಕೋಟಿ ವೆಚ್ಚದಲದಲಿ ನಡೆಯಲಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ರಾಮತೀರ್ಥ ನಗರದಲ್ಲಿ ಚರಂಡಿ ಸಮಸ್ಯೆ ಇರುವುದಿಲ್ಲ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಈ ವೇಳೆ ಬುಡಾ ಅಧ್ಯಕ್ಷರಾದ ಸಂಜಯ ಬೆಳಗಾಂವಕರ, ನಗರಸೇವಕ ಹನಮಂತ ಕೊಂಗಾಲಿ, ಬಿಜೆಪಿ ಉತ್ತರ ಮಂಡಳ ಪ್ರಧಾನ ಕಾರ್ಯದರ್ಶಿ ಈರಯ್ಯ ಖೋತ, ಬಿಜೆಪಿ ಉತ್ತರ ಮಂಡಳ ಉಪಾಧ್ಯಕ್ಷರಾದ ವಿಲಾಸ ಕೆರೂರು, ಆಟೋ ನಗರ ಇಂಡಸ್ಟಿçÃಸ ಅಸೋಸಿಯೇಶನ ಅಧ್ಯಕ್ಷರಾದ ಸುರೇಶ ಯಾದವ, ಎನ್.ಬಿ.ನಿರ್ವಾಣಿ, ಅಡ್ವ. ಕಿವಡಸನ್ನವರ, ಮಹಾಶಕ್ತಿ ಕೇಂದ್ರದ ಪ್ರಮುಖರಾದ ಸಂತೋಷ ದೇಸಾಯಿ, ಮಹಾನಗರ ಸಾಮಾಜಿಕ ಮಾಧ್ಯಮ ಪ್ರಭಾರಿ ಕೇದಾರ ಜೋರಾಪುರ ಹಾಗೂ ನಿವಾಸಿಗಳು ಉಪಸ್ಥಿತರಿದ್ದರು.


Leave a Reply