BelagaviBengaluru

ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ಎಂಎಲ್‌ಸಿ ‌ಲಕ್ಷ್ಮಣ ಸವದಿ, ನಯನಾ ಗಣೇಶ್ ನೇಮಕ


ಬೆಂಗಳೂರು: ಕರ್ನಾಟಕ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ಎಂಎಲ್‌ಸಿ ‌ಲಕ್ಷ್ಮಣ ಸವದಿ, ಉಡುಪಿಯ ನಯನಾ ಗಣೇಶ್ ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ.ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲು ಆದೇಶ ನೀಡಿದ್ದಾರೆ. ಬಿಜೆಪಿ ರಾಜ್ಯ ಮುಖ್ಯ ವಕ್ತಾರರಾಗಿ ಎಂ.ಜಿ. ಮಹೇಶ್ ನೇಮಕಗೊಂಡಿದ್ದಾರೆ. ಬಿಜೆಪಿ ಅನಿವಾಸಿ ಭಾರತೀಯ ವಿಭಾಗದ ರಾಜ್ಯ ಸಂಚಾಲಕರಾಗಿ ಕ್ಯಾ. ಗಣೇಶ್ ಕಾರ್ಣಿಕ್, ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಹ ಸಂಯೋಜಕರಾಗಿ ಜಯತೀರ್ಥ ಕಟ್ಟಿ ನೇಮಕವಾಗಿದ್ದಾರೆ.

ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕರಾಗಿ ಯೋಗೇಂದ್ರ, ಸಹ ಸಂಚಾಲಕರಾಗಿ ವಿನೋದ್ ಪಾಟೀಲ್, ರಾಜ್ಯ ಬಿಜೆಪಿ ಮೀನುಗಾರರ ಪ್ರಕೋಷ್ಠದ ರಾಜ್ಯ ಸಂಚಾಲಕರಾಗಿ ಗೋವಿಂದ ಬಾಂಡೇಕರ, ಸಹ ಸಂಚಾಲಕರಾಗಿ ನಾಗಪ್ಪ ಅಂಬಿ, ಫಲಾನುಭವಿಗಳ ಪ್ರಕೋಷ್ಠದ ರಾಜ್ಯ ಸಂಚಾಲಕರಾಗಿ ಶಾಸಕ ಬಸವರಾಜ ಮತ್ತಿಮೂಡ, ಬಿಜೆಪಿ ಮಂಡ್ಯ ಜಿಲ್ಲಾ ಪ್ರಭಾರಿಯಾಗಿ ಜಗದೀಶ ಹಿರೇಮನಿ, ಯಾದಗಿರಿ ಜಿಲ್ಲಾ ಪ್ರಭಾರಿಯಾಗಿ ಅಮರನಾಥ ಪಾಟೀಲ್, ದಾವಣಗೆರೆ ಜಿಲ್ಲಾ ಪ್ರಭಾರಿಯಾಗಿ ಕೆ.ಶಿವಲಿಂಗಪ್ಪ, ಚಿತ್ರದುರ್ಗ ಜಿಲ್ಲಾ ಪ್ರಭಾರಿಯಾಗಿ ಸಿ.ಆರ್.ಪ್ರೇಮಕುಮಾರ್, ಬೆಂಗಳೂರು ಉತ್ತರ ಜಿಲ್ಲಾ ಪ್ರಭಾರಿಯಾಗಿ ಕೆ.ವಿ.ಶಿವಪ್ಪ ನೇಮಕವಾಗಿದ್ದಾರೆ.


Leave a Reply