Belagavi

ರೈಲ್ವೆ ಹಳಿ ಹೆಸರಲ್ಲಿ ರೈತರನ್ನು ಸಮಾಧಿ ಮಾಡುವ ಕೆಲಸ ನಡೆಯುತ್ತಿದೆ: ರೈತ ಮುಖಂಡ ಪ್ರಕಾಶ ನಾಯಕ


ಬೆಳಗಾವಿ: ದಿ.ಸುರೇಶ ಅಂಗಡಿ ಅವರು ಸಚಿವರಾಗಿದ್ದಾಗ ಜಾರಿಗೆ ತಂದ ರೈಲು ಹಳಿ ನಿರ್ಮಾಣ ಯೋಜನೆಯನ್ನು ಈಗಿರುವ ಸಂಸದೆ ರೈತರ ಸಮಾಧಿಯ ಮೇಲೆ  ರಾಜಕಾರಿಗಳ ಕನಸಿನ ರೈಲ್ವೆ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದ್ದಾರೆ ಇದು ಸರಿಯಲ್ಲ ಎಂದು  ರೈತ ಮುಖಂಡ ಪ್ರಕಾಶ ನಾಯಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ ಕೇಂದ್ರ ಸಚಿವರಾಗಿದ್ದ ದಿ.ಸುರೇಶ ಅಂಗಡಿ ಅವರ ಕನಸಿನ ಕೂಸು ಎಂದು ರೈಲ್ವೆ ಹಳಿಯನ್ನು ನಿರ್ಮಾನ ಮಾಡಲು ಸಂಸದೆ ಮಂಗಳಾ ಅಂಗಡಿ ಮುಂದಾಗಿದ್ದು ಇದರಿಂದ  ಫಲವತ್ತಾದ ಕೃಷಿ ಭೂಮಿಯನ್ನು ನಾಶ ಮಾಡಲು ಹೊರಟಿದ್ದಾರೆ ಹೀಗೆ ಮಾಡುವುದರಿಂದ  ರೈತರ ಸಮಾಧಿ ಮೇಲೆ ಯೋಜನೆ ತಂದಂತಾಗುತ್ತದೆ. ಈ ಯೋಜನೆಗೆ  ನಮ್ಮ ವಿರೋಧ ಇದೆ ಎಂದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಚುನ್ನಪ್ಪ ಪೂಜಾರಿ ಮಾತನಾಡಿ, ಬೆಳಗಾವಿಯಿಂದ ಧಾರವಾಡ ನಿಯೋಜಿತ ರೈಲ್ವೆ ಮಾರ್ಗವನ್ನು ಉತ್ತಮವಾದ, ಫಲವತ್ತಾದ ಭೂಮಿಯನ್ನು ವಶಪಡಿಸಿಕೊಳ್ಳುತ್ತಿದ್ದಾರೆ ಇದಕ್ಕೆ ನಮ್ಮ ವಿರೋಧ ಇದೆ ಎಂದರು. ಬೆಳಗಾವಿ ಸಂಸದೆ ಮಂಗಳಾ ಅಂಗಡಿಯವರು ಉದ್ದೇಶ ಪೂರ್ವಕವಾಗಿ ಕೆ.ಕೆ.ಕೊಪ್ಪದ ಗುಡ್ಡದ ಮೇಲಿಂದ ಹೋಗುವ ರೈಲ್ವೆ ಯೋಜನೆಯನ್ನು ರೈತರ ಫಲವತ್ತಾದ ಭೂಮಿಯ ಮೇಲೆ ಯೋಜನೆ ಅನುಷ್ಠಾನಗೊಳಿಸಲು ಹೊರಟಿರುವುದು ಖಂಡನೀಯ ಎಂದರು.

ಈ ಸಂದರ್ಭದಲ್ಲಿ ರೈತ ಮುಖಂಡ ರಾಘವೇಂದ್ರ ನಾಯಿಕ, ನರೇಂದ್ರ ಪಾಟೀಲ, ಪ್ರಸಾದ ಪಾಟೀಲ, ಸಂಗಪ್ಪ ಕಂಬಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


Leave a Reply