Belagavi

ಛತ್ರಪತಿ ಶಿವಾಜಿ ಮಹಾರಾಜ ನಗರದಲ್ಲಿ ಉತ್ಸಾಹದಿಂದ ನಡೇದ ಎಮ್ಮೆಗಳ ಶರತು


ಬೆಳಗಾವಿ: ದಿ ೨೬ ರಂದು ಛತ್ರಪತಿ ಶಿವಾಜಿ ಮಹಾರಾಜ ನಗರದಲ್ಲಿ ಮೋಟರ ಸಾಯಕಲದೊಂದಿಗೆ ಎಮ್ಮೆ ಒಡಿಸುವ ಶರತನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳಗಾವಿ ಉತ್ತರ ಮತಕ್ಷೇತ್ರ ಶಾಸಕರಾದ ಅನಿಲ ಬೆನಕೆ ನೆರವೆರಿಸಿ ಮಾತನಾಡುತ್ತಾ ಎಮ್ಮೆ ಒಡಿಸುವ ಪರಂಪರೆಯು ಬೆಳಗಾವಿಯಲ್ಲಿ ಅತ್ಯಂತ ಪ್ರಾಚಿನವಾಗಿತ್ತು ಪ್ರಪ್ರಥಮವಾಗಿ ನಾನು ಈ ಸಂಸ್ಕೃತಿಯನ್ನು ನಡೆಸಿಕೊಂಡು ಬರುತ್ತಿರುವ ಬೆಳಗಾವಿಯ ಎಲ್ಲಾ ಪಂಚ ಕಮಿಟಿಯವರು, ಗವಳಿ ಸಮಾಜಗಳು ಹಾಗೂ ನವತರುನರಿಗೆ ಧನ್ಯವಾದ ಸಲ್ಲಿಸುತ್ತೇನೆ ನಮ್ಮ ಸಂಸ್ಕೃತಿ ಪರಂಪರೆ ಉಳಿಯಲು ಇಂತಹ ಕಾರ್ಯಕ್ರಮಗಳು ನಡೆಸಬೇಕು ಹಾಗೂ ಈ ಸ್ಪರ್ಧೆಯಲ್ಲಿ ೭೦ ಸ್ಪರ್ಧಾಳುಗಳು ಭಾಗವಹಿಸಿದ್ದು, ನವತರುನ ಮಿತ್ರ ಮಂಡಳ ಈ ಕಾರ್ಯಕ್ರಮವನ್ನು ಅತ್ಯಂತ ಉತ್ಸಾಹ ಹಾಗೂ ವಿಜ್ರಂಬನೆಯಿAದ ಆಯೊಜಿಸಿದರು ಶಿವಾಜಿ ನಗರದ ಹಿರಿಯರು, ಪಂಚರು ಹಾಗೂ ನಗರಸೇವಕ ಶಿವಾಜಿ ಮಂಡೋಳಕರ ಅವರಿಗೆ ಅಭಿನಂದನೆ. ಮುಂಬರುವ ದಿನಗಳಲ್ಲಿ ಶಿವಾಜಿ ನಗರದ ಆಂತರಿಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಜನರು ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ನಗರಸೇವಕ ಶಿವಾಜಿ ಮಂಡೋಳಕರ, ಪುಂಡಿಲಕ ಮಂಡೋಳಕರ, ಬಾಳು ಬೆನಕೆ, ಉತ್ತಮ ನಾಕಾಡಿ, ವಿನಾಯಕ ವರ್ಪೆ, ಕಿಲ್ಲೆಕರ, ಗವಳಿ ಸಮಾಜ, ಪಂಚ ಮಂಡಳಿ ಹಾಗೂ ಇತರರು ಉಪಸ್ಥಿತರಿದ್ದರು.


Leave a Reply