Koppal

ಪ್ರವರ್ಗ 1 ಜಾತಿಗಳ ಒಕ್ಕೂಟ ಕೊಪ್ಪಳ ಜಿಲ್ಲಾ ಸಭೆ ಯಶಸ್ವಿ ರಾಜ್ಯ ಹಾಗು ಜಿಲ್ಲಾ ಸಂಚಾಲಕರಾಗಿ ವಿ.ನರಸಪ್ಪ ಅಮರಜ್ಯೋತಿ ಜಿಲ್ಲಾಧ್ಯಕ್ಷರಾಗಿ ಧನರಾಜ್, ಕಾರ್ಯಧ್ಯಕ್ಷರಾಗಿ ಮಹೇಶ್ ಸಾಗರ್ ಆಯ್ಕೆ


ಗಂಗಾವತಿ : ಪ್ರವರ್ಗ 1 ಜಾತಿಗಳ ಒಕ್ಕೂಟದ ಜಿಲ್ಲಾ ಮಟ್ಟದ ಸಭೆ ಇಂದು ಗಂಗಾವತಿಯ ಅಮರಜ್ಯೋತಿ ಕನ್ ವೆನ್ಷನ್ ಹಾಲ್ ನಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.
ಈ ಸಂದರ್ಭದಲ್ಲಿ ಪದಾಧಿಕಾರಿಗಳನ್ನು ಅಯ್ಕೆ ಮಾಡಲಾಯಿತು.
ರಾಜ್ಯ ಸಮಿತಿ ಮತ್ತು ಜಿಲ್ಲಾ ಸಂಚಾಲಕರಾಗಿ ನರಸಪ್ಪ ಅಮರಜ್ಯೋತಿ, ಜಿಲ್ಲಾ ಅಧ್ಯಕ್ಷರಾಗಿ ಧನರಾಜ್,
ಜಿಲ್ಲಾ ಕಾರ್ಯಾಧ್ಯಕ್ಷರಾಗಿ
ಮಹೇಶ್ ಸಾಗರ್ ಅವರು ಆಯ್ಕೆಯಾಗಿದ್ದಾರೆ.
ಸನ್ಮಾನ ಸ್ವೀಕರಿಸಿದ ರಾಜ್ಯ ಸಂಚಾಲಕರಾದ ನರಸಪ್ಪ ಅಮರಜ್ಯೋತಿ ಮಾತನಾಡಿ, ಪ್ರವರ್ಗ 1 ಹಿಂದುಳಿದ ಸಮಾಜ, ಈ ಸಮಾಜಕ್ಕೆ ಸೂಕ್ತ ಸ್ಥಾನಮಾನಗಳು ದೊರೆಯಬೇಕಾದರೆ ಹರಿದು ಹಂಚಿ ಹೋದ ನಾವು ಒಗ್ಗೂಡುವ ಅಗತ್ಯವಿದೆ, ಒಗ್ಗಟ್ಟಿನ ಮೂಲಕ ನಮ್ಮ ಶಕ್ತಿ ಪ್ರದರ್ಶಿಸಿ ಸರಕಾರಿ ಸೌಲಭ್ಯ ಪಡೆಯಬೇಕಾಗಿದೆ. ಪ್ರತಿಯೊಬ್ಬರು ಒಗ್ಗಟ್ಟಿನಿಂದ ಹೋರಾಡಿ ರಾಜಕೀಯ, ಸಾಮಾಜಿಕ ಆರ್ಥಿಕ ಶಕ್ತಿ ವೃದ್ಧಿಸಿಕೊಳ್ಳಬೇಕಿದೆ ಎಂದರು.
ಜಿಲ್ಲಾಧ್ಯಕ್ಷ ಧನರಾಜ್ ಮಾತನಾಡಿ ಶಕ್ತಿಶಾಲಿ ಸಮಾಜದ ನಮ್ಮ ಒಗ್ಗೂಡುವಿಕೆ ರಾಜಕೀಯ ಪಕ್ಷಗಳಲ್ಲಿ ತಲ್ಲಣ ಸೃಷ್ಟಿಸಲಿದೆ ನಿರಾತಂಕವಾಗಿ ನಮ್ಮ ಬೇಡಿಕೆಗಳು ಈಡೇರಲಿವೆ ಎಂದರು.
ಜಿಲ್ಲಾ ಕಾರ್ಯಧ್ಯಕ್ಷ ಮಹೇಶ್ ಸಾಗರ್ ಮಾತನಾಡಿ, ಚಿಕ್ಕಚಿಕ್ಕ ಸಮುದಾಯಗಳ ಬಲ ವೃದ್ಧಿ ಮುಂದಿನ ರಾಜಕೀಯ ಬದಲಾವಣೆಗೆ ದಿಕ್ಸೂಚಿಯಾಗಲಿದೆ ಎಂದು,ಮಾರ್ಮಿಕವಾಗಿ ನುಡಿದರು.
ಗಂಗಾವತಿ ತಾಲೂಕಾ ಉಪ್ಪಾರ ಸಮಾಜದ ಅಧ್ಯಕ್ಷ ಮುದ್ದಪ್ಪ ಆರಾಳ್, ಜಿಲ್ಲಾಧ್ಯಕ್ಷ ಬಸವರಾಜ್ ಪೂಜಾರ್, ಚಿನ್ನಪ್ಪ, ಪ್ರಮುಖ ರಾದ ಗೌಳಿ ರಮೇಶ್, ಬಿ.ಅಶೋಕ, ಹುಲುಗಪ್ಪ ಎಇಇ, ಹೀರಾಲಾಲ್
ಕೊಪ್ಪಳ ಜಿಲ್ಲಾ ಪ್ರವರ್ಗ 1 ಜಾತಿಗಳ ಜಿಲ್ಲಾ ಅಧ್ಯಕ್ಷರು, ತಾಲೂಕಾ ಅಧ್ಯಕ್ಷರು, ವಿವಿಧ ಸಮಾಜಗಳ, ಹಿರಿಯರು ಭಾಗವಹಿಸಿದ್ದರು

ವರದಿ
(ಹನುಮೇಶ ಬಟಾರಿ ಗಂಗಾವತಿ)


Leave a Reply