Belagavi

ವೇತನಕ್ಕೆ ಆಗ್ರಹಿಸಿ ಗ್ರಾಮ ಪಂಚಾಯತ್ ನೌಕರರ ಒತ್ತಾಯ


ಬೆಳಗಾವಿ: ಗ್ರಾಮ ಪಂಚಾಯತ ನೌಕರರಿಗೆ ಸರ್ಕಾರದ ನಿಧಿಯಿಂದ ವೇತನ ನೀಡುವುದಾಗಿ ಆದೇಶ ಹೊರಡಿಸಿದ ಪ್ರಕಾರ ಪಂಚಾಯತ ನೌಕರರಿಗೆ ವೇತನ ಬರುತ್ತಿದೆ. ಆದರೆ ಕೇವಲ 08 ತಿಂಗಳಿಗೆ ಮಾತ್ರ ವೇತನ ಬರುತ್ತಿದೆ. ಉಳಿದ 04 ತಿಂಗಳ ವೇತನ ಬಾಕಿ ಉಳಿದ್ದಿದ್ದು, ಸುಮಾರ 12 ರಿಂದ 15 ತಿಂಗಳ ವೇತನ ಬಾಕಿ ಇದ್ದು ಅದನ್ನು ಕೂಡಲೇ ಜಮೇ ಮಾಡಬೇಕೆಂದು ಆಗ್ರಹಿಸಿ ಸಿಐಟಿಯು ವತಿಯಿಂದ ಪ್ರತಿಭಟಿಸಿ ಜಿ.ಪಂ ಸಿಇಓಗಳಿಗೆ ಮನವಿ ಸಲ್ಲಿಸಿದರು.

ನಗರದಲ್ಲಿ ಜಿ.ಪಂ ಆವರಣದಲ್ಲಿ ಪ್ರತಿಭಟನೆ ನಡೆಸಿ ಬಾಕಿ ಉಳಿದಿರುವ ವೇತನ ನೀಡಲು ಸರ್ಕಾರದ ಮೇಲೆ ಒತ್ತಾಯ ಮಾಡಿದಾಗ ಆರ್.ಡಿ.ಪಿ.ಆರ್. ಇಲಾಖೆಯ ಅಧಿಕಾರಿಗಳು 15 ನೇ ಹಣಕಾಸಿನಲ್ಲಿ ನೀರು ನಿರ್ವಹಣೆಗೆ ಶೇ. 25%, ನೈರ್ಮಲ್ಯಕರಣಕ್ಕೆ ಶೇ. 25% ರಷ್ಟು ಕ್ರೀಯಾ ಯೋಜನೆಯಲ್ಲಿ ಮೀಸಲಾಗಿಟ್ಟು ಆ ಮೂಲಕ ಪಂಚಾಯತ ವಾಟರ್‌ಮನ್ ಹಾಗೂ ಸ್ವಚ್ಚತಾಗಾರರಿಗೆ ವೇತನ ನೀಡಲು ಆದೇಶ ನೀಡಿದೆ. ಆದರೆ ಸ್ಥಳೀಯ ಗ್ರಾಮ ಪಂಚಾಯತ ಮಟ್ಟದಲ್ಲಿ ಸರ್ಕಾರದ ಆದೇಶ ಜಾರಿಯಾಗದೇ 18-20 ತಿಂಗಳಿನಿಂದ ಪಂಚಾಯತ ನೌಕರರಿಗೆ ವೇತನ ಇಲ್ಲದೇ ಪರದಾಡುತ್ತಿದ್ದಾರೆ.

ಜಿಲ್ಲಾ ಪಂಚಾಯತನಿಂದ ವೇತನ ನೀಡಲು ಅನೇಕ ಆದೇಶಗಳು ನೀಡಿದ್ದರೂ ಪಂಚಾಯತ ಮಟ್ಟದ ಅಧಿಕಾರಿಗಳು ವೇತನ ನೀಡುತ್ತಿಲ್ಲ. ಕೂಡಲೇ ವೇತನ ಪಾವತಿಸಬೇಕು ಎಂದು ಆಗ್ರಹಿಸಿದರು. ಮತ್ತು ತಮ್ಮ ಬೇಡಿಕೆಗಳಾದ 2021-22 ನೇ ಸಾಲಿನ 15 ನೇ ಹಣಕಾಸಿನ ಯೋಜನೆಯಲ್ಲಿ ನೀರು ನಿರ್ವಹಣೆಗೆ ಶೇ. 25, ನೈರ್ಮಲ್ಯಕರಣಕ್ಕೆ ಶೇ. 25 ವೇತನಕ್ಕೆ ಮೀಸಲಿಡಲು ಕ್ರಮ ವಹಿಸಬೇಕು, ಜಿಲ್ಲೆಯಲ್ಲಿ ಬಾಕಿ ಉಳಿದಿರವ ಅನುಮೋದನೆ ಪ್ರಕರಣಗಳನ್ನು ತರಿಸಿಕೊಂಡು ಕೂಡಲೇ ಅನುಮೋದನೆ ನೀಡಬೇಕು,  2021 ರ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಿ ಸುಮಾರು 20-25 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ನಿವೃತ್ತಿ ಅಂಚಿನಲ್ಲಿರುವ ಬಿಲ್ ಕಲೆಕ್ಟರ್ (ಕ್ಲರ್ಕಗಳಿಗೆ ಗ್ರೇಡ್-2 ಕಾರ್ಯದರ್ಶಿ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗೆ ಬಡ್ತಿ ನೀಡಬೇಕು, ರಾಜ್ಯ ಸರಕಾರದ ಹಾಗೂ ಜಿಲ್ಲಾ ಪಂಚಾಯತನ ಆದೇಶಗಳು ಗ್ರಾಮ ಪಂಚಾಯತ ಮಟ್ಟದಲ್ಲಿ ಜಾರಿಯಾಗುವ ಹಾಗೆ ಕ್ರಮ ವಹಿಸಬೇಕು, ಕೋವಿಡ್ ರೋಗದಿಂದ ಮರಣ ಹೊಂದಿದ ನೌಕರರ ಕುಟುಂಬಕ್ಕೆ ಸರ್ಕಾರದ ಆದೇಶದಂತೆ ರೂ. 3 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ವೀರಭದ್ರ ಕಂಪ್ಲಿ, ಮಡ್ಯಪ್ಪ ಭಜಂತ್ರಿ, ಯಲ್ಲಪ್ಪ ನಾಯಕ, ದುಂಡಪ್ಪ ಭಜನಾಯಕ, ಜಯಾನಂದ ಪಾಟೀಲ, ಸಂತೋಷ ನಾಯಕ ಮತ್ತು ವಿಠೋಬಾ ಬುತ್ತೇವಾಡಕರ ಮುಂತಾದವರು ಭಾಗವಹಿಸಿದ್ದರು.


Leave a Reply