Belagavi

ಬಂದ್ ಗೆ ಬೆಂಬಲವಿಲ್ಲವೆಂದ ಬೆಳಗಾವಿ ಕನ್ನಡಪರ ಸಂಘಟನೆಗಳು


ಬೆಳಗಾವಿ: ಎಂಇಎಸ್ ಪುಂಡಾಟಿಕೆ ಮತ್ತು ನಾಡ ಧ್ವಜಕ್ಕೆ ಅವಮಾನ ಖಂಡಿಸಿ ಡಿ.31ಕ್ಕೆ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದಗೆ ಕರೆ ನೀಡಿದ್ದು ಬೆಳಗಾವಿ ಕನ್ನಡ ಕಾರ್ಯಕರ್ತರು ಬಂದಗೆ ಬೆಂಬಲವಿಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.

ವಿವಿಧ ಸಂಘಟನೆಗಳು ಕರ್ನಾಟಕ ಬಂದಗೆ ಕರೆ ನೀಡಿರುವ ಕಾರಣ ಬೆಳಗಾವಿಯಲ್ಲಿ ಇಂದು ಕನ್ನಡಪರ ಸಂಘಟನೆಗಳು ನಮ್ಮ ಬೆಂಬಲವಿಲ್ಲ ಎಂದು ಖಚಿತಪಡಿಸಿದ್ದು ಬಂದ್ ಬೇಡ ಮಹಾರಾಷ್ಟ್ರ ಏಕಿಕರಣ ಸಮಿತಿ ಸಂಘಟನೆಯನ್ನು ನಿಷೇಧಿಸಬೇಕು ಎಂಬ ಆಗ್ರಹಕ್ಕೆ ಬದ್ದರಾಗಿದ್ದೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಕನ್ನಡ ಪರ ಹೋರಾಟಗಾರ ಅಶೋಕ್ ಚಂದರಗಿ ಮಾತನಾಡಿ ಬಂದ್ ಗೆ ಬೆಂಬಲವಿಲ್ಲ ಆದರೆ ನಾಡದ್ರೋಹಿ ಸಂಘಟನೆಗಳಾದ ಎಂಇಎಸ್ ಮತ್ತು ಶಿವಸೇನೆಯನ್ನು ಬ್ಯಾನ ಮಾಡಿ ಎಂಬ ಆಗ್ರಹಕ್ಕೆ ಬದ್ದರಾಗಿದ್ದೇವೆ. ೆಲ್ಲದಕ್ಕೂ ಬಂದ್ ಪರಿಹಾರವಲ್ಲ ಅದರ ಬದಲಿಗೆ ಸಂಸದರು ಮತ್ತು ಶಾಸಕರ ಮನೆ ಎದುರಿಗೆ ಕುಳಿತು ಪ್ರತಿಭಟಿಸಿ. ನಾಡ ರಕ್ಷಣೆಗೆ ಸಂಭಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳಲಿ ಎಂದು ಆಗ್ರಹಿಸಿದರು


Leave a Reply