Belagavi

ವಂಟಮೂರಿ ಕಾಲೊನಿಯ ಜನತಾ ಪ್ಲಾಟ್‌ನಲ್ಲಿನ ರಹವಾಸಿಗಳ ಮನವಿಯನ್ನು ಸ್ವಿಕರಿಸಿದ ಶಾಸಕ ಅನಿಲ ಬೆನಕೆ


ಬೆಳಗಾವಿ ೨೮ : ದಿ ೨೭ ರಂದು ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆರವರು ಬೆಳಗಾವಿಯ ವಾರ್ಡ ನಂ. ೩೫ ರ ನಗರ ಸೇವಕಿ ಶ್ರೀಮತಿ. ಲಕ್ಷಿö್ಮÃ ಮಹಾದೇವ ರಾಠೋಡ ಹಾಗೂ ಬಿಜೆಪಿ ಮುಖಂಡರಾದ ಮಹಾದೇವ ರಾಠೋಡ ಇವರ ನೇತೃತ್ವದಲ್ಲಿ ಅಲ್ಲಿನ ಹಲವಾರು ನಿವಾಸಿಗಳು ಶಾಸಕರನ್ನು ಕಾರ್ಯಾಲಯದಲ್ಲಿ ಬೇಟಿಯಾಗಿ ವಂಟಮೂರಿ ಕಾಲೊನಿಯ ಜನತಾ ಪ್ಲಾಟ್ ಜನವಸತಿ ಪ್ರದೇಶವನ್ನು ಸ್ಲಂ ಪ್ರದೇಶ ಎಂದು ಘೋಷಣೆ ಮಾಡುವಂತೆ ಹಾಗೂ ಅಲ್ಲಿನ ನಿವಾಸಿಗಳ ಮನೆಯ ನಲ್ಲಿಯ ನೀರಿನ ಬಿಲ್ ದುಬಾರಿಯಾಗಿದ್ದು, ದುಬಾರಿ ನೀರಿನ ಕರವನ್ನು ರದ್ದುಪಡಿಸುವಂತೆ ಮತ್ತು ಅಲ್ಲಿನ ಮೂಲಭೂತ ಸೌಲಭ್ಯಗಳನ್ನು ಪೂರೈಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಾಸಕ ಅನಿಲ ಬೆನಕೆರವರು ವಂಟಮೂರಿ ಕಾಲೊನಿಯ ಜನತಾ ಪ್ಲಾಟನ ಜನರ ಮನವಿಯನ್ನು ಸ್ವಿಕರಿಸಿ ಮಾತನಾಡಿದ ಅವರು ಜನತಾ ಪ್ಲಾಟ್‌ನಲ್ಲಿನ ಮೂಲಭೂತ ಸೌಕರ್ಯಗಳನ್ನು ಪೂರೈಸುವುದರರೊಂದಿಗೆ ಸ್ಲಂ ಪ್ರದೇಶ ಘೋಷಣೆ ಕುರಿತು ಕೊಳಗೇರಿ ಅಭಿವೃಧ್ದಿ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುವುದು ಎಂದು ಭರವಸೆಯನ್ನು ನೀಡಿದರು. ತದನಂತರದಲ್ಲಿ ಜಲಮಂಡಳಿ ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿ ನೀರಿನ ಕರವನ್ನು ಕಡಿಮೆ ಮಾಡಿ ಅಲ್ಲಿನ ರಹವಾಸಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ನಗರ ಸೇವಕಿ ಶ್ರೀಮತಿ. ಲಕ್ಷಿö್ಮÃ ಮಹಾದೇವ ರಾಠೋಡ ಹಾಗೂ ಬಿಜೆಪಿ ಮುಖಂಡರಾದ ಮಹಾದೇವ ರಾಠೋಡ ಹಾಗೂ ಅಲ್ಲಿನ ರಹವಾಸಿಗಳು ಉಪಸ್ಥಿತರಿದ್ದರು.


Leave a Reply