Belagavi

ಕಾಗವಾಡ ಪಟ್ಟಣ ಪಂಚಾಯತ್ ಗಳಲ್ಲಿ ಶೇ.80ರಷ್ಟು ಮತದಾನ


ಕಾಗವಾಡ: ಪಟ್ಟಣ ಪಂಚಾಯತ ಚುನಾವಣೆಯ ಹಿನ್ನಲೆ ಸೋಮವಾರ ಡಿ.27 2021  ರಂದು  ಕಾಗವಾಡ ತಾಲೂಕಿನ ಶೇಡಬಾಳ , ಐನಾಪುರ  ಪಟ್ಟಣಗಳಲ್ಲಿ   ಜರುಗಿದ ಚುನಾವಣೆಯು ಶಾಂತಿಯುತವಾಗಿ  ಯಾವುದೆ    ಅಹಿತಕರ ಘಟನೆಗಳು ನಡೆಯದೆ ಮತದಾನವಾಗಿದೆ .

ಬೆಳಿಗ್ಗೆ 7 ಗಂಟೆಯಿಂದ ಪ್ರಾರಂಭವಾದ ಮತದಾನ ಸಂಜೆ 5 ಗಂಟೆಗೆ ಮುಕ್ತಾಯವಾಗಿದೆ. ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆಯ ವರೆಗೆ ನಿಧಾನಗತಿಯಲ್ಲಿ ಚಲಾವಣೆಯಾದ ಮತದಾನ ಪ್ರಕ್ರಿಯೆ ಮಧ್ಯಾಹ್ನ 12 ಗಂಟೆಯ ನಂತರ ಚುರುಕಿನಿಂದ ಸಾಗಿತು.

ಇನ್ನು ಶೇ. 81.71 ಪ್ರತಿಶತದಷ್ಟು ಶೇಡಬಾಳದಲ್ಲಿ  ಪಟ್ಟಣ ಪಂಚಾಯತಿಯಲ್ಲಿ ಮತದಾನ ನಡೆದರೆ ಐನಾಪುರ ಪಟ್ಟಣ ಪಂಚಾಯತಿಯಲ್ಲಿ  ಶೇ.78.28 ಪ್ರತಿಶತ ರಷ್ಟು ಮತನಾದವಾಗಿದೆ.

ಐನಾಪುರ ಪಟ್ಟಣ ಪಂಚಾಯತಿಗೆ 19 ವಾರ್ಡಗಳಿಗೆ ನೆಡದ ಚುನಾವಣೆಯಲ್ಲಿ ಒಟ್ಟು 14021  ಮತದಾರರ ಸಂಖ್ಯೆ  ಇದ್ದು,   10,975 ಮತದಾರರು ಮಾತ್ರ ಮತ ಚಲಾಯಿಸಿದ್ದಾರೆ ಇದರಲ್ಲಿ ಪರುಷರು 7112 ರ ಪೈಕಿ 5638, ಸ್ತ್ರೀಯರ 6909 ಮತದಾರರ ಪೈಕಿ 5337  ರಷ್ಟು ಮತದಾನ ಮಾಡಿದ್ದಾರೆ.

ಇನ್ನು ಶೇಡಬಾಳ ಪಟ್ಟಣ ಪಂಚಾಯತಿಗೆ 16 ವಾರ್ಡಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು 11,818 ಒಟ್ಟು ಮತದಾರರ ಸಂಖೆ ಇದ್ದು 9657 ಮತದಾರರು ಮಾತ್ರ ಮತ ಚಲಾಯಿದ್ದಾರೆ‌. ಇದರಲ್ಲಿ  ಪು-5946 ರ ಮತದಾರರ ಪೈಕಿ 4911, ಸ್ತ್ರೀಯರ 5872 ಮತದಾರರ ಪೈಕಿ 4746 ಜನ ಮತ ಚಲಾಯಿಸಿದ್ದಾರೆ .


Leave a Reply