Belagavi

ಮಹಾತ್ಮರನ್ನು ಜಾತಿಗೆ ಸೀಮಿತಗೊಳಿಸುವುದು ರಾಷ್ಟ್ರಕ್ಕೆ ಹಾನಿಕರ


ಬೆಳಗಾವಿ: ರಾಷ್ಟ್ರ ಮತ್ತು ಸಮಾಜದ ಉನ್ನತಿಗೆ ಶ್ರಮಿಸಿದ ಮಹಾತ್ಮರನ್ನು ಜಾತಿಗೆ ಸೀಮಿತಗೊಳಿಸಲಾಗುತ್ತಿದೆ. ವಿಶ್ವಗುರು ಬಸವಣ್ಣ, ಛತ್ರಪತಿ ಶಿವಾಜಿ, ಡಾ.ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ ಸೇರಿದಂತೆ ಅನೇಕ ಮಹಾತ್ಮರು ಆಯಾ ಕಾಲಘಟ್ಟದ ಸಮಾಜದ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಹೋರಾಟ ನಡೆಸಿದ್ದಾರೆ. ಆದರೆ ಪ್ರಸಕ್ತ ದಿನಗಳಲ್ಲಿ ಆ ಎಲ್ಲ ಸಮಾಜ ಸುಧಾರಕರನ್ನು ಮತ್ತು ಮಹಾತ್ಮರನ್ನು ಜಾತಿಗೆ ಸೀಮಿತಗೊಳಿಸಿರುವುದು ರಾಷ್ಟ್ರದ ಭವಿಷ್ಯಕ್ಕೆ ಕುತ್ತು ತರುವ ಸಂಗತಿಯಾಗಿದೆ ಎಂದು ಆರ್‍ಎಸ್‍ಎಸ್ ಕರ್ನಾಟಕ ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ಡಾ. ರವೀಂದ್ರ ಹೇಳಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಮತ್ತು ವಿದ್ಯಾ ಭಾರತಿ ಉಚ್ಚ ಶಿಕ್ಷಾ ಸಂಸ್ಥಾನ ಕರ್ನಾಟಕ ಉತ್ತರ ಘಟಕದ ಸಹಯೋಗದಲ್ಲಿ ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಮಂಗಳವಾರ ವಿವಿಯ ಕುವೆಂಪು ಸಭಾಂಗಣದಲ್ಲಿ ಜರುಗಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತ ಪರಕೀಯರ ದಾಳಿ ಮತ್ತು ಆಡಳಿತದ ವಿರುದ್ಧ ದೀರ್ಘಕಾಲದ ಸಂಘರ್ಷ ಎದುರಿಸಿದರೂ ಸಿಂಧೂ ಕಣಿವೆಯ ಸಂಸ್ಕøತಿಯನ್ನು ಈವರೆಗೂ ಕಾಪಾಡಿಕೊಂಡು ಬಂದಿದೆ. ಸಿಂಧೂ ಕಣಿವೆಯ ಸಮಕಾಲೀನ ಎಲ್ಲ ನಾಗರೀಕತೆ ಮತ್ತು ಸಂಸ್ಕøತಿಗಳೂ ಕಾಲಾನುಕ್ರಮವಾಗಿ ನಾಶವಾಗಿವೆ. ಸಿಂಧೂ ಕಣಿವೆಯ ಸಂಸ್ಕøತಿ ಈವರೆಗೂ ಉಳಿಯಲು ಭಾರತದ ಕ್ಷಾತ್ರ ಮತ್ತು ಭಕ್ತಿ ಪರಂಪರೆಯ ಅನನ್ಯ ಕೊಡುಗೆಯಿದೆ ಎಂದರು.


Leave a Reply