Koppal

ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಕೊಪ್ಪಳ ಇವರ ಸಹಯೋಗದೊಂದಿಗೆ ಪಿ.ಎಮ್.ಇ.ಜಿ.ಯೋಜನೆಯ ಅಡಿ ಉದ್ಯಮ ಶೀಲತಾ ಕಾರ್ಯಾಗಾರ


ಕುಷ್ಟಗಿ. ಡಿ.೨೮.ಸರಕಾರದ ಹತ್ತು ಹಲವಾರು ಯೋಜನೆಗಳು ನಿರುದ್ಯೋಗ ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಕಾರಣ ಪ್ರತಿಯೊಂದು ಯೋಜನೆಯ ಲಾಭ ಪಡೆದುಕೊಳ್ಳುವ ಮೂಲಕ ಸದುಪಯೋಗ ಪಡಿಸಿಕೊಳ್ಳುವಂತೆ ಜಿಲ್ಲಾ ಲೀಡ್ ಬ್ಯಾಂಕುಗಳ ವ್ಯವಸ್ಥಾಪಕರಾದ ರೇವಣ ಸಿದ್ದಯ್ಯ ಅವರು ಕರೆ ನೀಡಿದರು. ಅವರು ನಗರದ ಬುತ್ತಿಬಸವೇಶ್ವರ ಸಭಾ ಭವನದಲ್ಲಿ ಆಯೋಜಿಸಿದ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಕೊಪ್ಪಳ ಇವರ ಸಹಯೋಗದೊಂದಿಗೆ ಪಿ.ಎಮ್.ಇ.ಜಿ.ಯೋಜನೆಯ ಅಡಿ ಉದ್ಯಮ ಶೀಲತಾ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡುತ್ತಾ ಗ್ರಾಮೀಣ, ನಗರ,ಪ್ರದೇಶದ ನಿರುದ್ಯೋಗಗಿಗಳಿಗೆ ಹೊಸದಾಗಿ ಉದ್ದಿಮೆ ಸ್ಥಾಪಿಸಲು ಉತ್ತೇಜನ ನೀಡುತ್ತದೆ, ಎಂದು ಹೇಳಿದರು. ಈ ಸಂಧರ್ಭದಲ್ಲಿ ಖಾದಿ ಆಯೋಗದಿಂದ ಸಿಗಬಹುದಾದ ಸಾಲ ,ವಿವಿಧ ಯೋಜನೆಗಳ ಕುರಿತು ಮುರಳಿಧರ ಹುಬ್ಬಳ್ಳಿ ಅವರು ಮಾತನಾಡಿದರು.
ಸಣ್ಣ ಹಾಗೂ ಅತಿ ಸಣ್ಣ ಪ್ರಮಾಣದ ಉದ್ದಿಮೆ ಸ್ಥಾಪಿಸಲು ಇಚ್ಚಿಸುವವರು ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಓರ್ವ ಲೀಡ್ ಬ್ಯಾಂಕ್ ಅವರ ನಿರ್ದೇಶನ ಇದ್ದರೂ ಕೂಡಾ ಸ್ಥಳೀಯ ಮಟ್ಟದಲ್ಲಿ ಬ್ಯಾಂಕ್ ವ್ಯವಸ್ಥಾಪಕರು ಫಲಾನುಭವಿಗಳಿಗೆ ಸತಾಯಿಸುವ ಮೂಲಕ ನಿರುದ್ಯೋಗಿಗಳಿಗೆ ಕಂಟಕವಾಗಿದ್ದಾರೆ ಕಾರಣ ಯಾವುದೇ ಯೋಜನೆಯಲ್ಲಿ ಆಯ್ಕೆ ಆದವರಿಗೆ ನಿಗದಿತ ಅವಧಿಯಲ್ಲಿ ಸಾಲ ಮಂಜೂರು ಮಾಡುವಂತೆ ಎಲ್ಲಾ ಬ್ಯಾಂಕುಗಳಿಗೆ ನಿರ್ದೆಶನ ನೀಡಬೇಕು. ಅಲ್ಲದೆ ಅಂತಹ ಅಸಡ್ಡೆ ಮಾಡುವ ಬ್ಯಾಂಕುಗಳಿಗೆ ಛಿಮಾರಿ ಹಾಕಬೇಕು. ಅಂದಾಗ ಮಾತ್ರ ಯೋಜನೆ ಸದುಪಯೋಗ ವಾಗುವದು ಎಂದು ನುಡಿದರು.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Leave a Reply