karanatakaKoppal

ಜೀ ಕನ್ನಡ ವಾಹಿನಿಯ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19 ಮತ್ತು ಡ್ರಾಮಾ ಜೂನಿಯರ್ಸ್ ಸೀಸನ್ 4 ರ ಮಹಾಆಡಿಷನ್ಸ್


ಕೊಪ್ಪಳ:ಅನೇಕ ಯಶಸ್ವಿ ಕಾರ್ಯಕ್ರಮಗಳನ್ನು ಕನ್ನಡಿಗರಿಗೆ ನೀಡಿರುವ ಕನ್ನಡದ ನಂಬರ್ 1 ಮನರಂಜನಾ ವಾಹಿನಿ ಜೀ ಕನ್ನಡ ಇದೀಗ ಪುಟಾಣಿ ಕೋಗಿಲೆಗಳಿಗಾಗಿ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19 ಹಾಗೂ ಪಟಾಕಿಯಂಥ ಪ್ರತಿಭೆಗಗಳಿಗೆ ಡ್ರಾಮಾ ಜೂನಿಯರ್ಸ್ 4ನೇ ಸೀಸನ್ ಆರಂಭಿಸುತ್ತಿದೆ. ಈ ಎರಡೂ ಕಾರ್ಯಕ್ರಮಗಳ ಆಡಿಷನ್ ಪ್ರಕ್ರಿಯೆ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲು ಈಗಾಗಲೇ ಆರಂಭವಾಗಿದ್ದು ಅದ್ಬುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅದರಂತೆ ಡಿಸೆಂಬರ್ 31 ಶುಕ್ರವಾರ ಕೊಪ್ಪಳದ ಗವಿಮಠ ರಸ್ತೆಯ ಪಾಂಡುರಂಗ ದೇವಸ್ಥಾನದ ಹತ್ತಿರವಿರುವ ಮಾಸ್ತಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ನಲ್ಲಿ ಆಡಿಷನ್ಸ್ ನಡೆಯಲಿದ್ದು ಬೆಳಿಗ್ಗೆ 9 ಗಂಟೆಗೆ ಆರಂಭವಾಗಲಿದೆ. ಆಡಿಷನ್ಸ್ ನಲ್ಲಿ ಭಾಗವಹಿಸಲು ಬರುವವರು ತಮ್ಮ ಮಗುವಿನ ಪಾಸ್ಪೋರ್ಟ್ ಸೈಜ್ ಫೋಟೋ ಹಾಗು ಅಡ್ರೆಸ್ ಪ್ರೂಫ್ ಜೆರಾಕ್ಸ್ ತರಬೇಕು. ಈ ಎರಡೂ ಕಾರ್ಯಕ್ರಮಗಳ ಆಡಿಷನ್ಸ್ ನಲ್ಲಿ ಭಾಗವಹಿಸಲು ಕೆಲವು ಮಾನದಂಡಗಳಿದ್ದು ಸರಿಗಮಪ ಲಿಟಲ್ ಚಾಂಪ್ಸ್ ಕಾರ್ಯಕ್ರಮಕ್ಕೆ ಆಡಿಷನ್ ನೀಡಲು ಮಗುವಿನ ವಯಸ್ಸು 4 ರಿಂದ 15 ವರ್ಷದೊಳಗಿರಬೇಕು ಹಾಗು ಡ್ರಾಮಾ ಜೂನಿಯರ್ಸ್ ನಲ್ಲಿ ಭಾಗವಹಿಸುವ ಮಗುವಿನ ವಯಸ್ಸು 4 ರಿಂದ 14 ವರ್ಷದೊಳಗಿರಬೇಕು ಎಂದು ಜೀ ಕನ್ನಡ ವಾಹಿನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.ಅಷ್ಟೇ ಅಲ್ಲದೆ ಈ ಆಡಿಷನ್ ಗಳಲ್ಲಿ ಭಾಗವಹಿಸಲು ಯಾವುದೇ ರೀತಿಯ ಶುಲ್ಕವಿರುವುದಿಲ್ಲ. ಬನ್ನಿ , ಭಾಗವಹಿಸಿ ನಿಮ್ಮ ಪ್ರತಿಭೆಯನ್ನು ಪ್ರಪಂಚಕ್ಕೆ ಪರಿಚಯಿಸಿ…


Leave a Reply