Belagavi

ಕಾಂಗ್ರೆಸ್ ಅಧಿಕಾರಕ್ಕೆ ಬರುವುದೇ ತಿರುಕನ ಕನಸಾಗಿದೆ : ಸಚಿವ ಆರ್.ಅಶೋಕ


ಹುಬ್ಬಳ್ಳಿ: ಕಾಂಗ್ರೆಸ್ ಅಧಿಕಾರಕ್ಕೆ ಬರುವುದೇ ತಿರುಕನ ಕನಸಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ ವ್ಯಂಗ್ಯವಾಡಿದರು.

ನಗರದಲ್ಲಿ ನಡೆಯುತ್ತಿರುವ ಕಾರ್ಯಕಾರಿಣಿ ಸಭೆಗೆ ಭಾಗಿಯಾಗುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ನೂತನವಾಗಿ ಆಯ್ಕೆಯಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತಾಂತರ ನಿಷೇಧ ಕಾಯ್ದೆಯನ್ನು ಅವರ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ವಾರದಲ್ಲಿಯೇ ಕಾಯಿದೆಯನ್ನು ತೆಗೆದು ಹಾಕಲಾಗುವುದು ಎಂದು ಹೇಳಿದ್ದು ವಿಪರ್ಯಾಸ, ಕಾರಣ ಅವರ ಪಕ್ಷ ಅಧಿಕಾರಕ್ಕೆ ಬರುವುದು ತಿರುಕನ ಕನಸಾಗಿದೆ. ಈಗಾಗಲೇ ಕಾಂಗ್ರೆಸ್ ರಾಜ್ಯದಲ್ಲಿ ದೂಳಿಪಟವಾಗಿದೆ ಎಂದು ಕಿಡಿಕಾರಿದರು.

ಮೊನ್ನೆಯೇ ಕಾಂಗ್ರೆಸ್ ನ 137 ವರ್ಷದ ಸಂಸ್ಥಾಪಕ ದಿನ ಮಾಡುವ ಸಂದರ್ಭದಲ್ಲಿ ಕಾಂಗ್ರೆಸ್ ಬಾವುಟ ಬಿದ್ದು ಹೋಗಿದೆ. ಅಂದು ಮತ್ತೆ ಹಾರಲೇ ಇಲ್ಲ. ದೇಶದಲ್ಲಿ ಕಾಂಗ್ರೆಸ್ ಹಾರದೇ ಇರುವ ಬಾವುಟ, ಬೀಳುವ ಬಾವುಟ ಹಾಗಾಗಿ ಬೀಳುವ ಬಾವುಟದ ಕೆಳಗೆ ಕೆಲಸ ಮಾಡುವ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಗಲು ಕನಸು ಕಾಣುವುದನ್ನು ಬಿಡಲಿ ಎಂದು ಅವರು ಹರಿಹಾಯ್ದರು.

ಮತಾಂತರ ಆಗುವುದು ಅವರ ಲೆಕ್ಕದಲ್ಲಿ ಒಳ್ಳೆಯದು ಎಂಬ ಭಾವನೆಯಲ್ಲಿ ಹೇಳುತ್ತಿದ್ದಾರೆ. ದಲಿತರೆಲ್ಲ ಮತಾಂತರ ಆಗಬೇಕು, ಹಿಂದೂಗಳೆಲ್ಲಾ ಮತಾಂತರ ಆಗಬೇಕೆಂಬುದು ಕಾಂಗ್ರೆಸ್ ನೀತಿ ಆದರೆ ಮುಂದಿನ ದಿನಗಳಲ್ಲಿ ಬಹುಸಂಖ್ಯಾತರು ನೂರಕ್ಕೆ ನೂರು ಕಾಂಗ್ರೆಸ್ ಪಕ್ಷವನ್ನು ದೂರ ಇಡುತ್ತಾರೆ. ಯಾಕೆಂದರೆ ದೇಶದಲ್ಲಿ ಧರ್ಮ ಒಡೆಯುವುದು ಇಷ್ಟವಿಲ್ಲ. ಸಿದ್ದರಾಮಯ್ಯ ಈಗಾಗಲೇ ಒಂದು ವಾರ ವೀರಶೈವ ಲಿಂಗಾಯತ ಸಮಾಜವನ್ನು ಒಡೆದು ಕಾಂಗ್ರೆಸ್ ನುಚುನೂರಾಯಿತು. 130 ಸೀಟ್ ಇದಿದ್ದು 70 ಸೀಟ್ ಗೆ ಬಂದಿತ್ತು. ಅದರಿಂದ ಹುಚ್ಚು ಕಲ್ಪನೆ ಇಟ್ಟಕೊಂಡಿರುವ ಹಿಂದೂ ವಿರೋಧಿ ಕಾಂಗ್ರೆಸ್ ನ್ನು ಜನರು ತಿರಸ್ಕಾರ ಮಾಡಲಿದ್ದಾರೆ ಎಂದರು.


Leave a Reply