karanataka

ಕೆ.ಎಸ್.ಆರ್ .ಟಿ.ಸಿ ಸಹಕಾರ ಸಂಘದ ಚುನಾವಣೆಯಲ್ಲಿ ಟಿ.ಸಿ. ದೇವೆಂದ್ರಮ್ಮ ಆಯ್ಕೆ


ರಾಯಚೂರು:ಹಳ್ಳಿಯಲ್ಲಿ ಜನಿಸಿ ಕೆಎಸ್ ಆರ್ ಟಿ ಸಿ ಸಹಕಾರ ಸಂಘದಲ್ಲಿ ಗೆಲುವು,ಪೋಷಕರ ಕನಸು ಪೂರೈಸಲು ಸಹಕಾರ ಚುನಾವಣೆ ಆಯ್ಕೆ

ಕೆ.ಎಸ್.ಆರ್ .ಟಿ.ಸಿ ಸಹಕಾರ ಸಂಘದ ಚುನಾವಣೆಯಲ್ಲಿ ಟಿ.ಸಿ. ದೇವೆಂದ್ರಮ್ಮ ಆಯ್ಕೆ

ಕೆ.ಎಸ್.ಆರ್ .ಟಿ.ಸಿ ರಾಯಚೂರು ಡಿಫೋ ದಲ್ಲಿ ಪ್ರಯಾಣಿಕರ ಕರ ಅಚ್ಚುಮೆಚ್ಚಿನ ಮಹಿಳಾ ಸಿಬ್ಬಂದಿ

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ರಾಯಚೂರು ವಿಭಾಗದ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ರಾಯಚೂರು ಬಸ್ ನಿಲ್ದಾಣದ ಟ್ರಾಫಿಕ್ ಕಂಟ್ರೋಲರ್ ದೇವೆಂದ್ರಮ್ಮ ಅವರು ||| ಹಿಂದುಳಿದ ವರ್ಗಗಳ ಪ್ರವರ್ಗ ಬಿ ಮೀಸಲಾತಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

ಕೆ.ಎಸ್.ಆರ್ .ಟಿ.ಸಿ ರಾಯಚೂರ್ ಡಿಪೋದಲ್ಲಿ ದೇವಿಂದ್ರಮ್ಮ ತಮ್ಮದೇ ಆದ ಚಾಪು ಮೂಡಿಸಿದ್ದಾರೆ ನಿರ್ವಾಹಕ ವೃತ್ತಿಯಲ್ಲಿರುವಾಗಲೇ ಜನ ಮನ್ನಣೆಗೆ ಪಾತ್ರರಾಗಿದ್ದು, ಇಂದು ಕೆಎಸ್ಆರ್ಟಿಸಿ ಎಲ್ಲಾ ಸಿಬ್ಬಂದಿ ವರ್ಗದವರ ಅಚ್ಚುಮೆಚ್ಚಿನ ಸಹೊದ್ಯೋಗಿಯಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ

ಎರಡು ದಶಕಗಳ ಹಿಂದೆ ಬಸ್ ನಿರ್ವಾಹಕರಾಗಿ ಸೇವೆ ಆರಂಭಿಸಿದ ಅವರು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕಾಕರಗಲ್ ಎಂಬ ಗ್ರಾಮದಲ್ಲಿ ಜನಿಸಿ ಪೋಷಕರ ಆಶಯದಂತೆ ವೃತ್ತಿ ಮತ್ತು ಪ್ರವೃತ್ತಿ ಯಿಂದ ಕೆ.ಎಸ್.ಆರ್ .ಟಿ.ಸಿ ಸಿಬ್ಬಂದಿ ಮತ್ತು ಸಾರ್ವಜನಿಕರಿಗೆ ಏನಾದರೂ ಅಳಿಲು ಸೇವೆ ಸಲ್ಲಿಸಲು ಕೆ.ಎಸ್.ಆರ್ .ಟಿ.ಸಿ ಸಹಕಾರ ಕ್ಷೇತ್ರದಲ್ಲಿ ಅಭಿವೃದ್ಧಿ ಕನಸುಗಳನ್ನ ಹೊಂದಿದ್ದಾರೆ.
೧೨೦೦ ಸದಸ್ತತ್ವ ಹೊಂದಿದ
ಸಹಕಾರ ಸಂಘದಲ್ಲಿ ಕೆಎಸ್ ಆರ್ ಟಿಸಿ ಎಲ್ಲಾ ಸಿಬ್ಬಂದಿಗಳಿಗೆ ಸದಸ್ಯತ್ವ ನೀಡುವುದು ಮೊದಲ ಆದ್ಯತೆಯಾಗಿದೆ.
ಕೆಎಸ್ಆರ್ಟಿಸಿ ಸಿಬ್ಬಂದಿಗಳ ಏಳಿಗೆಗಾಗಿ ಶ್ರಮಿಸುತ್ತೇನೆ ಸಂಘದ ಸದಸ್ಯರಿಗೆ ಸಾಲದ ಮೊತ್ತ ಎರಡು ಲಕ್ಷ ರೂ.ಗಳಿಗೆ ಹೆಚ್ಚಿಸುವುದು, ಕಡಿಮೆ ಬಡ್ಡಿದರದಲ್ಲಿ ಸಾಲ ವಿತರಣೆ, ಮಾಡವ ಉದ್ದೇಶವನ್ನು ಹೊಂದಿದ್ದೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವಿಶ್ವನಾಥ ಸಾಹುಕಾರ
ರಾಯಚೂರು


Leave a Reply